ಅಭಿಪ್ರಾಯ / ಸಲಹೆಗಳು

ಇಲಾಖೆಯ ಬಗ್ಗೆ

ಜಲ ಸಂಪನ್ಮೂಲ ಇಲಾಖೆ

 • ಜಲ ಸಂಪನ್ಮೂಲ ಇಲಾಖೆಯು ಕರ್ನಾಟಕ ಸರ್ಕಾರದ ಪ್ರಮುಖ ಇಲಾಖೆಗಳಲ್ಲೊಂದಾಗಿದೆ. ಈ ಇಲಾಖೆಗೆ ಮಾನ್ಯ ಭಾರಿ ಹಾಗೂ ಮಧ್ಯಮ ನೀರಾವರಿ ಸಚಿವರು ಮುಖ್ಯಸ್ಥರಾಗಿರುತ್ತಾರೆ. ಈ ಇಲಾಖೆಯಡಿ ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಮೇಲ್ಮೈ ಜಲವನ್ನು ವಿನಿಯೋಗಿಸುವುದಾಗಿದೆ.

 • ನೀರಾವರಿಗೊಳಪಡುವ ಅಚ್ಚುಕಟ್ಟು  ಪ್ರದೇಶದ ವಿಸ್ತೀರ್ಣವನ್ನಾಧರಿಸಿ ನೀರಾವರಿ ಯೋಜನೆಗಳನ್ನು ಈ ಕೆಳಗೆ ನಮೂದಿಸಿದಂತೆ ಎರಡು ವರ್ಗಗಳಾಗಿ ವಿಂಗಡಿಸಲಾಗಿರುತ್ತದೆ.


  ಕ್ರಮ ಸಂಖ್ಯೆ ವರ್ಗ ಸಾಗುವಳಿಯಾಗುವ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ (ಸಿ.ಸಿ.ಎ)
  1. ಭಾರಿ ನೀರಾವರಿ ಯೋಜನೆಗಳು  10,000 ಹೆ ಅಥವಾ ಅದಕ್ಕಿಂತ ಹೆಚ್ಚು
  2. ಮಧ್ಯಮ ನೀರಾವರಿ ಯೋಜನೆಗಳು  2,000 ಹೆನಿಂದ 10,000 ಹೆ. ವರೆಗೆ
 • ಭೌಗೋಳಿಕ ಕ್ಷೇತ್ರ

  ಕರ್ನಾಟಕ ರಾಜ್ಯದ ಭೌಗೋಳಿಕ ವಿಸ್ತೀರ್ಣ 1,91,791 ಚ.ಕಿ.ಮೀ.ಗಳಿದ್ದು, ಇದು ರಾಷ್ಟ್ಟ್ರದ ಶೇ.5.83 ರಷ್ಟಿರುತ್ತದೆ.ರಾಜ್ಯದಲ್ಲಿ ಬೇಸಾಯಕ್ಕೆ ಯೋಗ್ಯವಾದ ಕ್ಷೇತ್ರ 1,40,598 ಚ.ಕಿ.ಮೀ.ಗಳಿದ್ದು, ಬೇಸಾಯವಾಗುತ್ತಿರುವ ಕ್ಷೇತ್ರ 1,07,000 ಚ.ಕಿ.ಮೀ.ಗಳಾಗಿರುತ್ತದೆ. ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳಿಂದ 40.66 ಲಕ್ಷ ಹೆಕ್ಟೇರ್ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. 

   

 • ಸಂಕ್ಷಿಪ್ತ ವಿವರ

         ಜಲ ಸಂಪನ್ಮೂಲ ಇಲಾಖೆಯಲ್ಲಿ 4 ವಿಶೇಷ ಉದ್ದೇಶ ವಾಹಿನಿಗಳಾದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಹಾಗೂ ಕಾವೇರಿ ನೀರಾವರಿ ನಿಗಮ ನಿಯಮಿತಗಳನ್ನು ಕಂಪನಿ ಕಾಯ್ದೆ 1956 ರನ್ವಯ, ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಿ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ.

   

 • ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃ.ಭಾ.ಜ.ನಿ.ನಿ)

         ಸರ್ಕಾರದ ಆದೇಶ ಸಂಖ್ಯೆ: ನೀಇ 25 ಡಬ್ಲ್ಯೂಬಿಎಂ 95, ದಿನಾಂಕ:06.05.1994 ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತವನ್ನು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನಗೊಳಿಸಲು ರಚಿಸಲಾಯಿತು. ಈ ನಿಗಮವು 19 ನೇ ಆಗಸ್ಟ್ 1994 ರಿಂದ ಕಾರ್ಯಾರಂಭಿಸಿದೆ.

   

 • ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕ.ನೀ.ನಿ.ನಿ)

         ಸರ್ಕಾರದ ಆದೇಶ ಸಂಖ್ಯೆ: ನೀಇ 201 ಕೆಬಿಎನ್ 98, ದಿನಾಂಕ:26.11.1998 ರಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತವನ್ನು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಹೊರತುಪಡಿಸಿ, ಕೃಷ್ಣಾ ಕಣಿವೆಯ ಉಳಿದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಚಿಸಲಾಯಿತು. ಈ ನಿಗಮವು 09 ನೇ ಡಿಸೆಂಬರ್ 1998 ರಿಂದ ಕಾರ್ಯಾರಂಭಿಸಿದೆ.

   

 • ಕಾವೇರಿ ನೀರಾವರಿ ನಿಗಮ ನಿಯಮಿತ (ಕಾ.ನೀ.ನಿ.ನಿ)

         ಸರ್ಕಾರದ ಆದೇಶ ಸಂಖ್ಯೆ: ಜಸಂಇ 32 ಕೆಬಿಎನ್ 03, ದಿನಾಂಕ:12.05.2003ರಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತವನ್ನು ಕಾವೇರಿ ಕಣಿವೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಚಿಸಲಾಯಿತು. ಈ ನಿಗಮವು, 03 ನೇ ಜೂನ್ 2003 ರಿಂದ ಕಾರ್ಯಾರಂಭಿಸಿದೆ.

   

 • ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿ..ನಿ.ನಿ)

         ಸರ್ಕಾರದ ಆದೇಶ ಸಂಖ್ಯೆ: ಜಸಂಇ 35 ವಿಬ್ಯಾಇ 2016, ಬೆಂಗಳೂರು, ದಿನಾಂಕ:20.08.2016ರಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತವನ್ನು ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ನಗರ ಹಾಗೂ ಇತರೆ ಬರಪೀಡಿತ ಪ್ರದೇಶಗಳ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮತ್ತು ಇತರೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಚಿಸಲಾಗಿದೆ. ಈ ನಿಗಮವು ದಿನಾಂಕ:01.01.2017 ರಿಂದ ಕಾರ್ಯಾರಂಭಿಸಿದೆ

   

 • ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಿರ್ದೇಶನಾಲಯ

  ನೀರಾವರಿ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿರುವ ಅಚ್ಚುಕಟ್ಟು ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳನ್ನು (ಕಾಡಾ) ಸ್ಥಾಪಿಸಲಾಗಿದ್ದು, ರಾಜ್ಯದಲ್ಲಿ 1) ಕಾಡಾ, ಕೃಷ್ಣಾ ಮೇಲ್ದಂಡೆ ಯೋಜನೆ, 2) ಕಾಡಾ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ, 3) ಕಾಡಾ, ನೀರಾವರಿ ಯೋಜನಾ ವಲಯ, 4) ಕಾಡಾ, ತುಂಗಭದ್ರಾ ಯೋಜನೆ,                 5) ಕಾಡಾ, ಕಾವೇರಿ ಜಲಾನಯನ ಯೋಜನೆ ಮತ್ತು 6) ಕಾಡಾ, ಭದ್ರಾ ಜಲಾಶಯ ಯೋಜನೆ ಹೀಗೆ ಒಟ್ಟು 7 ಕಾಡಾಗಳನ್ನು ಸ್ಥಾಪಿಸಲಾಗಿದೆ. ಈ ಕಾಡಾಗಳು ಕರ್ನಾಟಕ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಕಾಯ್ದೆ-1980 ಅನ್ವಯ ಕಾರ್ಯ ನಿರ್ವಹಿಸುತ್ತಿವೆ.

  ಭಾರಿ ಮತ್ತು ಮಧ್ಯಮ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿನ ಪ್ರತಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳೊಡನೆ ಸಮನ್ವಯ/ಸಹಕಾರ ಹೆಚ್ಚಿಸಲು ಹಾಗೂ ಕಾಡಾಗಳು ನಿರ್ವಹಿಸುತ್ತಿರುವ ನೀರು ಬಳಕೆದಾರರ ಸಹಕಾರ ಸಂಘಗಳ ದಕ್ಷತೆ ಹೆಚ್ಚಿಸುವ ಹಾಗೂ ಕಲ್ಪಿಸಿರುವ ನೀರಾವರಿ ಸಾಮರ್ಥ್ಯ ಮತ್ತು ಬಳಕೆ ಸಾಮರ್ಥ್ಯದ ಅಂತರ ತಗ್ಗಿಸುವ ಹಾಗೂ ಇನ್ನಿತರ ಕಾಡಾ ಚಟುವಟಿಕೆಗಳ ಉಸ್ತುವಾರಿ ಸಲುವಾಗಿ ರಾಜ್ಯದಲ್ಲಿ ಕಾಡಾ ನಿರ್ದೇಶನಾಲಯವನ್ನು ಸರ್ಕಾರದ ಆದೇಶ ಸಂಖ್ಯೆ: ಜಸಂಇ 39: ಸಿಎಎಂ 2011, ದಿನಾಂಕ:17.11.2012ರ ಅನ್ವಯ ಸ್ಥಾಪಿಸಲಾಗಿದೆ.

   

 • ಸಮಗ್ರ ಜಲ ಸಂಪನ್ಮೂಲ ನಿರ್ವಹಣೆಗೆ ನೈಪುಣ್ಯತಾ ಕೇಂದ್ರ (AC-IWRM)

                  ಸಮಗ್ರ ಜಲಸಂಪನ್ಮೂಲ ನಿರ್ವಹಣೆಗೆ ನೈಪುಣ್ಯತಾ ಕೇಂದ್ರ (AC-IWRM) ವನ್ನು ಸರ್ಕಾರದ ಆದೇಶ ಸಂಖ್ಯೆ: ಜಸಂಇ/೬೪/ಎಂಬಿಐ/೨೦೧೧, ದಿನಾಂಕ:07.02.2012 ರಲ್ಲಿ ಸ್ಥಾಪಿಸಲಾಗಿದೆ.                         ಈ ಸಂಸ್ಥೆಯ ಉದ್ದೇಶಗಳೆಂದರೆ, ಜಲ ನೀತಿ ವಿಶ್ಲೇಷಣೆ ಮತ್ತು ಸಂಶೋಧನೆ, ನೀರಿನ ಸದ್ಬಳಕೆಯ ಬಗ್ಗೆ ಹೆಚ್ಚಿನ ಅರಿವನ್ನು ಜಲ ಸಂಪನ್ಮೂಲ ಇಲಾಖೆಯ ಇಂಜಿನಿಯರ್‌ಗಳ ಜೊತೆ ವಿನಿಮಯ ಮಾಡಿಕೊಳ್ಳುವುದು ಮತ್ತು ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ತತ್ವಗಳನ್ನು ಕರ್ನಾಟಕದಲ್ಲಿ ಅಳವಡಿಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವುದು.

   

 • ಅರಣ್ಯ ಮತ್ತು ಭೂಸ್ವಾಧೀನ ಕೋಶ

  ಇಲಾಖೆಯಲ್ಲಿನ ಭೂಸ್ವಾಧೀನ ಹಾಗೂ ಅರಣ್ಯ ಬಿಡುಗಡೆಗೆ ಸಂಬಂಧಿಸಿದ ಪ್ರಕರಣಗಳ ಕುರಿತು ಹಿಂಬಾಲಿಕಾ ಕ್ರಮ ವಹಿಸಿ ಶೀಘ್ರವಾಗಿ ಅನುಮೋದನೆ/ತೀರುವಳಿ ಪಡೆದು ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಅರಣ್ಯ ಮತ್ತು ಭೂಸ್ವಾಧೀನ ಕೋಶವನ್ನು ಸರ್ಕಾರದ ಆದೇಶ ದಿನಾಂಕ:25.08.2014 ರಲ್ಲಿ ಸ್ಥಾಪಿಸಲಾಗಿರುತ್ತದೆ. ಅರಣ್ಯ ಬಿಡುಗಡೆಗೆ ಸಂಬಂಧಿಸಿದಂತೆ ಅರಣ್ಯ ಕೋಶಕ್ಕೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ನೇಮಿಸಲಾಗಿದೆ.

   

   

ಇತ್ತೀಚಿನ ನವೀಕರಣ​ : 17-08-2023 04:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080