ಅಭಿಪ್ರಾಯ / ಸಲಹೆಗಳು

ದೃಷ್ಟಿಕೋನ| ಘನೋದ್ದೇಶ

ದೃಷ್ಟಿಕೋನ

ನೀರಿನ ಬಳಕೆಯಲ್ಲಿ ಸಾಮರ್ಥ್ಯದ ಸುಧಾರಣೆ ಹಾಗೂ ಬೆಳೆಗಳ ಇಳುವರಿ ಮುಖೇನ ಔಚಿತ್ಯ ಪೂರ್ಣ ಉಪಯೋಗ-ಈ ಎರಡನ್ನೂ ಒಳಗೊಂಡಂತೆ ನೀರಿನ ಸದ್ಭಳಕೆ ಹಾಗೂ ಸಂಕೀರ್ಣ ಜಲ ಸಂಪನ್ಮೂಲಗಳ ನಿರ್ವಹಣೆಗಳನ್ನು ಅಳವಡಿಸುವುದು, ಪ್ರತಿ ಹನಿ ನೀರಿಗೂ ಬೆಳೆ ಪಡೆಯುವುದು, ಆರ್ಥಿಕವಾಗಿ ಸದೃಢ ಹಾಗೂ ವಾತಾವರಣದ ಸುಸ್ಥಿರತೆ ಕಾಪಾಡುವ ಪದ್ಧತಿಗಳನ್ನು ಅನುಸರಿಸುವುದು, ನೀರಿನ ಬೇಡಿಕೆ ಹಾಗೂ ಪೂರೈಕೆಗಳ ನಡುವಿನ ಅಂತರ ಕಡಿಮೆ ಮಾಡುವುದು ಹಾಗೂ ನೀರಿನ ಗುಣಮಟ್ಟ ಕಾಪಾಡಿಕೊಳ್ಳುವುದು.

 

ಘನೋದ್ದೇಶ

  • ಪ್ರಗತಿಯಲ್ಲಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವುದು ಮತ್ತು ರಾಜ್ಯದ ಗರಿಷ್ಟ ನೀರಾವರಿ ಸಾಮರ್ಥ್ಯ ಸೃಷ್ಟಿಸುವುದು .
  • ವೈಜ್ಞಾನಿಕ ಹಾಗೂ ಪರಿಣಾಮಕಾರಿ ಸಮಗ್ರ ನೀರಿನ ನಿರ್ವಹಣೆಯನ್ನು ಮಾಡಲು ಬೇಕಾದ ನೀತಿ, ಕಾರ್ಯಕ್ರಮ ಹಾಗೂ ವಿಧಾನಗಳನ್ನು ರೂಪಿಸುವುದು.
  • ಪ್ರಗತಿಯಲ್ಲಿರುವ ಎಲ್ಲಾ ಯೋಜನೆಗಳನ್ನು ತ್ವರಿತಗತಿ ಹಾಗೂ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಬೇಕಾದ ಕಾರ್ಯತಂತ್ರ ರೂಪಿಸುವುದು.
  • ಇಡೀ ರಾಜ್ಯದಲ್ಲಿನ ಎಲ್ಲಾ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಶತಪ್ರತಿಶತ ಲಭ್ಯವಿರುವ ಒಟ್ಟು ಸಾಮರ್ಥ್ಯ ಸಾಧಿಸುವುದು.
  • ನೀರಿನ ಸಮರ್ಥ ಬಳಕೆಯ ಸುಸ್ಥಿರ ವೃದ್ಧಿಗಾಗಿ ಸೂಕ್ತ ವ್ಯವಸ್ಥೆ ರೂಪಿಸಿ ಮತ್ತು ವಿಧಾನಗಳನ್ನು ಜಾರಿಗೆ ತರುವುದು.
  • ರಾಜ್ಯದೊಳಗಿನ ನೀರಿನ ಸಂಪನ್ಮೂಲಗಳ ನಿರ್ವಹಣೆ ಮತ್ತು ಸದ್ಬಳಕೆಗೆ ಸಂಬಂಧಿಸಿದ ಎಲ್ಲಾ ಪಾಲುದಾರರನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವುದು.
  • ಜನಸಾಮಾನ್ಯರ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸುವ ಮತ್ತು ವೈಜ್ಞಾನಿಕ ರೀತಿಯಲ್ಲಿ ನೀರಿನ ಸಂಪನ್ಮೂಲಗಳ ನಿರ್ವಹಣೆಯು ಸಾಮೂಹಿಕ ಅರಿವು ಮೂಡಿಸುವ ಮಾಹಿತಿಯನ್ನು ಪಸರಿಸುವುದು. ವ್ಯವಸ್ಥೆಯನ್ನು ಸುಧಾರಿಸಲು ಬೇಕಾದ ಸೂಕ್ತವಾದ ಜ್ಞಾನ, ಕೌಶಲ್ಯ ಮತ್ತು ಇತ್ತೀಚಿನ ತಾಂತ್ರಿಕತೆಗೆ ಒಡ್ಡಿಕೊಳ್ಳುವಂಥಹ, ಇಲಾಖೆಯಲ್ಲಿ ಕಾರ್ಯನಿರ್ವಹಿಸುವಂತಹ ಅಭಿಯಂತರರ ಪ್ರಾಜ್ಞ ಸಮಾಜ ಕಟ್ಟುವುದು.
  • ಬರ ಪೀಡಿತ ಪ್ರದೇಶಗಳಲ್ಲಿ ನೀರಿನ ಕೊರತೆಯನ್ನು ನೀಗಿಸಲು ನೈಸರ್ಗಿಕ ಜಲ ಸಂಪನ್ಮೂಲಗಳ ಗರಿಷ್ಟ ಮತ್ತು ಪರಿಣಾಮಕಾರಿ ಸದ್ಬಳಕೆಗೊಳಿಸುವುದು ಜಲ ಆಯ ವ್ಯಯದ ಗುರಿಯಾಗಿದೆ.

ಇತ್ತೀಚಿನ ನವೀಕರಣ​ : 06-11-2021 03:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080