ಅಭಿಪ್ರಾಯ / ಸಲಹೆಗಳು

ಇಲಾಖೆಗಳು ನಿಗಮಗಳು - ಕಾ ನೀ ನಿ ನಿ

ಕಾವೇರಿ ನೀರಾವರಿ ನಿಗಮ ನಿಯಮಿತವು ಕರ್ನಾಟಕ ಸರ್ಕಾರದಿಂದ ವಿಶೇಷೋದ್ದೇಶ ವಾಹಕವಾಗಿ 4 ಜೂನ್ 1956 ರ ಕಂಪನಿಗಳ ಕಾಯ್ದೆಯ ನಿಬಂಧನೆಗಳ ಪ್ರಕಾರ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿ ನೋಂದಾಯಿಸಲ್ಪಟ್ಟು, ಉದ್ಯಮ ಪ್ರಮಾಣ ಪತ್ರವನ್ನು ಹೊಂದುವ ಮೂಲಕ ರೂ.1,500.00 ಕೋಟಿಗಳೊಂದಿಗೆ 6 ಜೂನ್ 2003 ರಂದು ಪ್ರಾರಂಭವಾಯಿತು.

ನಿಗಮವು ನಿರ್ದೇಶಕರ ಸಮಿತಿಯ ಮೂಲಕ ಕಾರ್ಯ ನಿರ್ವಹಿಸಲ್ಪಡುತ್ತದೆ. ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಸಮಿತಿಯ ಅಧ್ಯಕ್ಷರಾಗಿದ್ದು, ಮಾನ್ಯ ಬೃಹತ್ ಹಾಗೂ ಮಧ್ಯಮ ನೀರಾವರಿ ಸಚಿವರು ಸಮಿತಿಯ ಉಪಾಧ್ಯಕ್ಷರಾಗಿದ್ದು, ಒಬ್ಬರು ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಹತ್ತು ನಿರ್ದೇಶಕರನ್ನು ಒಳಗೊಂಡಿದೆ. ವ್ಯವಸ್ಥಾಪಕ ನಿರ್ದೇಶಕರಿಗೆ ಸಹಾಯಕವಾಗಿ ಸಿವಿಲ್ ಮತ್ತು ಸ್ಟ್ರಕ್ಚರಲ್ ಇಂಜಿನಿಯರ್, ಡಿಸೈನ್, ಸಾಮಾನ್ಯ ಆಡಳಿತ ಮತ್ತು ಕಾನೂನು ಕ್ಷೇತ್ರಗಳಲ್ಲಿ ಅನುಭವ ಹೊಂದಿದ ತಜ್ಞರು ಇರುತ್ತಾರೆ.

ನಿಗಮದ ಮುಖ್ಯ ಗುರಿಗಳೆಂದರೆ;

1) ನೀರಾವರಿ ಸಂಪನ್ಮೂಲಕ್ಕೆ ಸಂಬಂಧಿಸಿದ ಯೋಜನೆಗಳ ರೂಪುರೇಶೆ ಕೈಗೊಳ್ಳುವುದು

2) ಕೆಲಸದ ಪ್ರಗತಿಯ ಮೇಲ್ವಿಚಾರಣೆ

3) ಉದ್ದೇಶಿತ ಅವಧಿಯೊಳಗೆ ಕಾರ್ಯವನ್ನು ಪೂರ್ಣಗೊಳಿಸಲು ವೃತ್ತಿಪರ ಆಡಳಿತಗಾರರು, ವಿಷಯ ತಜ್ಞರು, ಅನುಭವಿ ಇಂಜಿನಿಯರ್‍ಗಳ ಸಹಾಯದೊಂದಿಗೆ ಪ್ರಗತಿಯ ಪರಿಶೀಲನೆ.

ನಿಗಮದ ಮುಖ್ಯ ಉದ್ದೇಶಗಳು:

1) ಕಾವೇರಿ ಜಲಾನಯನ ಪ್ರದೇಶದಲ್ಲಿ ಕೈಗೊಳ್ಳುವ ಚಾಲನೆಯಲ್ಲಿರುವ ಏತನೀರಾವರಿ ಯೋಜನೆ, ಕಿರು ನೀರಾವರಿ ಯೋಜನೆ, ಹಾಗೂ ಕಾಡಾದ ಕಾರ್ಯಗಳನ್ನು ಪೂರ್ಣಗೊಳಿಸುವುದು.

2) ಕಾವೇರಿ ಜಲಾನಯನ ಪ್ರದೇಶದಲ್ಲಿ ಕೈಗೊಳ್ಳುವ ಏತನೀರಾವರಿ ಯೋಜನೆ, ಕಿರು ನೀರಾವರಿ ಯೋಜನೆ, ಹಾಗೂ ಕಾಡಾದ ಕಾರ್ಯಗಳ ನಿರ್ವಹಣೆ, ಅಭಿವೃದ್ಧಿ ಹಾಗೂ ಆಧುನೀಕರಣಗೊಳಿಸುವಿಕೆ.

3) ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯೊಳಗೆ ಕುಡಿಯುವ ನೀರಿನ ಪೂರೈಕೆ ಹಾಗೂ ಸರಬರಾಜಿಗಾಗಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳುವುದು.

4) ಕಾವೇರಿ ಜಲಾನಯನದ ಅಸ್ತಿತ್ವದಲ್ಲಿರುವ ಹಾಗೂ ಚಾಲನೆಯಲ್ಲಿರುವುದು ನೀರಾವರಿ ಯೋಜನೆಗಳ ಪ್ರದೇಶಗಳಲ್ಲಿನ ಕೃಷಿ ಉತ್ಪಾದನೆಯನ್ನು ಉತ್ತಮಗೊಳಿಸುವ ಸಲುವಾಗಿ ಭೂ ಮತ್ತು ನೀರಿನ ಬಳಿಕೆ ಹಾಗೂ ನಿರ್ವಹಣಾ ಪದ್ಧತಿಗಳ ಸಮಗ್ರ ಅಧ್ಯಯನ ಮತ್ತು ಆಧುನೀಕರಣಗೊಳಿಸುವುದು

5) ಆಧುನಿಕ ನೀರಾವರಿ ತಂತ್ರಜ್ಞಾನದ ಅಳವಡಿಕೆಯ ಮೂಲಕ ಸಿಂಪಡಿಸುವ ಹಾಗೂ ಹನಿ ನೀರಾವರಿ ವ್ಯವಸ್ಥೆ ಪದ್ಧತಿಯ ಬಳಕೆಗೆ ಪ್ರಚಾರ ಮತ್ತು ಪ್ರೋತ್ಸಾಹ.

6) ಕಾವೇರಿ ಜಲಾನಯನ ಪ್ರದೇಶದಲ್ಲಿನ ಮೇಲ್ಮೈ ಮತ್ತು ಅಂತರ್ಜಲ ಸಂಪನ್ಮೂಲಗಳನ್ನು ಪುನರ್ಭರ್ತಿ ಮಾಡಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದು.

7) ರೈತರಿಗೆ ನೀರಿನ ಪರಿಣಾಮಕಾರಿ ಬಳಕೆ ಹಾಗೂ ನೀರಾವರಿ ನಿರ್ವಹಣೆಯ  ಪಾಲ್ಗೊಳ್ಳುವಿಕೆಯಲ್ಲಿ ಭಾಗವಹಿಸುವ ಶಿಕ್ಷಣ.

8) ಅರಣ್ಯ ನಾಶವನ್ನು ತಪ್ಪಿಸಲು ಪರಿಸರ ಪಟ್ಟಿಗಳನ್ನು ರಚಿಸಿ ಸೂಕ್ತ ಕ್ರಮಗಳ ಮೂಲಕ ಒಟ್ಟಾರೆ ಪರಿಸರವನ್ನು ರಕ್ಷಿಸಲು & ಸುಧಾರಿಸಲು ಆಧುನಿಕ ತಂತ್ರಜ್ಞಾನದ ಮೂಲಕ ಯೋಜನೆಗಳ ನಿರ್ಮಾಣ ಮತ್ತು ನಿರ್ವಹಣೆ.

9) ಕಾವೇರಿ ಜಲಾನಯನದ ವ್ಯಾಪ್ತಿಯ ನೀರಾವರಿ ಯೋಜನೆಗಳಲ್ಲಿ ಮಾನದಂಡಗಳು ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆ.

10) ಕಾವೇರಿ ಜಲಾನಯನದ ವ್ಯಾಪ್ತಿಯ ಅಸ್ತಿತ್ವದಲ್ಲಿರುವ ಹಾಗೂ ಚಾಲನೆಯಲ್ಲಿರುವ ಕಾಮಗಾರಿಗಳ ಪ್ರದೇಶದಲ್ಲಿರುವ ನದಿಗಳು, ಉಪನದಿಗಳು ಮತ್ತು ಜಲಸಂಧಿಗಳಲ್ಲಿ ಸಂಚಾರ, ಮನರಂಜನೆ, ಮೀನುಗಾರಿಕೆ ಇತ್ಯಾದಿಗಳಪ್ರಚಾರ ಕೈಗೊಳ್ಳುವುದು.

ಇತ್ತೀಚಿನ ನವೀಕರಣ​ : 03-01-2022 01:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080