ಅಭಿಪ್ರಾಯ / ಸಲಹೆಗಳು

ಇಲಾಖೆಯ ಅಂಗಗಳು - ವಿಚಕ್ಷಣಾದಳ (ಐ ಜಿ ಪಿ)

ಪರಿಚಯ

ಜಲಸಂಪನ್ಮೂಲ ಇಲಾಖೆಯು ಅಭಿವೃದ್ಧಿಗೆ ಚಾಲನೆ ನೀಡುವ ಒಂದು ಪ್ರಮುಖ ಇಲಾಖೆಯಾಗಿದೆ. ಅಭಿವೃದ್ಧಿ ಕೆಲಸಗಳಿಗಾಗಿ ಜಲಸಂಪನ್ಮೂಲ ಇಲಾಖೆಯು ವಿವಿಧ ಯೋಜನೆಗಳಡಿಯಲ್ಲಿ ಪ್ರತಿ ವರ್ಷವು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಖರ್ಚು ಮಾಡುವ ಮೋತ್ತವು  ಜನಪರವಾಗಿರುವುದಲ್ಲದೆ ಪ್ರತಿ ಪೈಸೆಯು ಸದ್ವಿನಿಯೋಗವಾಗಬೇಕು. ಇಲಾಖೆಯು ಖರ್ಚು ಮಾಡುವ ಹಣವು ಪೋಲಾಗದಂತೆ, ಹಾಗೂ ವೆಚ್ಚದ ಮೇಲೆ ನಿಗ ಇಡುವುದು ಅತ್ಯವಶ್ಯಕವಿರುವುದರಿಂದ,  ನಿರಂತರವಾಗಿ ಜಾಗೃತಿ ವಹಿಸುವ ಅವಶ್ಯಕವಿರುತ್ತದೆ. ಈ ಉದ್ದೆಶದಿಂದಲೇ ಕರ್ನಾಟಕ ಸರ್ಕಾರವು  ಪೋಲೀಸ್‌ ಮಹಾನಿರೀಕ್ಷಕರ ಕಛೇರಿ, ವಿಚಕ್ಷಣ ದಳ, ಜಲಸಂಪನ್ಮೂಲ ಇಲಾಖೆಯನ್ನು ಸರ್ಕಾರ ಆದೇಶ ಸಂಖ್ಯೆ ನೀಇ 16 ಎಂಬಿಐ 2000 ದಿನಾಂಕ:04.04.2000 ರನ್ವಯ ಸ್ಥಾಪಿಸಲು ತೀರ್ಮಾನಿಸಿದ್ದು. ಜಲಸಂಪನ್ಮೂಲ ಇಲಾಖೆಯಲ್ಲಿ ನಿರ್ವಹಿಸುವ ಕಾಮಗಾರಿಗಳ ಗುಣಮಟ್ಟ ಹಾಗೂ ವೆಚ್ಚ ಮಾಡುವ ಹಣ ಸದ್ವಿನಿಯೋಗವಾಗುವಂತೆ ನೋಡಿಕೊಳ್ಳುವುದು ವಿಚಕ್ಷಣದಳದ ಮುಖ್ಯಗುರಿಯಾಗಿರುತ್ತದೆ.

 

ಮೂಲೋದ್ದೇಶ

ಹಲವು ನೀರಾವರಿ ಯೋಜನೆಗಳ ಅಡಿಯಲ್ಲಿ ಬರುವ ಕಾಮಗಾರಿಗಳ ಗುಣಮಟ್ಟವು ಉತ್ತಮವಾಗಿರುವುದಾಗಿ ಖಚಿತ ಪಡೆಸಿಕೊಳ್ಳಲು ಈ ಸಂಸ್ಥೆಯನ್ನು ರಚಿಸಲಾಗಿದೆ.

 

ದೃಷ್ಟಿಕಾರ್ಯಾಚರಣೆ

ಈ ಸಂಸ್ಥೆಯು ಅನುದಾನದ ದುರ್ಭಳಕೆ, ಹಣದ ದುರುಪಯೋಗ ಮತ್ತು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸುವ ಬಗ್ಗೆ ಖಚಿತ ಪಡೆಸಿಕೊಳ್ಳಲು ತನಿಖೆ ನಡೆಸುವುದು.

 

ಕಾರ್ಯವಿಧಾನ

ಸರ್ಕಾರಿ ಆದೇಶ ಸಂಕ್ಯೆ: ನೀಇ 16 ಎಂಬಿಐ 2000, ಬೆಂಗಳೂರು ದಿನಾಂಕ: 04.04.2000 ರಂತೆವಿಚಕ್ಷಣಾ ದಳವು ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುವುದು.

 1. ಇಲಾಖೆ ಕೈಗೊಳ್ಳುವ ಗುಣಮಟ್ಟ ಪರಿಶೀಲನೆ.
 2. ಪ್ರಗತಿಯಲ್ಲಿರುವ ಕೆಲಸಗಳ ಪ್ರಗತಿಯ ಪರಿಶೀಲನೆ.
 3. ಸಾಮಗ್ರಿ, ವಾಹನ, ಹಣಗಳ ದುರುಪಯೋಗ ಪತ್ತೆ ಹಚ್ಚುವುದು ಮತ್ತು ತನಿಖೆ ಮಾಡುವುದು.
 4. ನಂಬಿಕೆದ್ರೋಹ, ವಂಚನೆ, ಅಪರಾ-ತಪರಾ ಅಪಾದನೆಗಳನ್ನು ಪತ್ತೆ ಹಚ್ಚುವುದು ಮತ್ತು ತನಿಖೆ ಮಾಡುವುದು.
 5. ಕಛೇರಿಗಳಿಗೆ, ಜಲಾಶಯಗಳಿಗೆ ಮತ್ತು ಪ್ರಾಜೆಕ್ಟ್‌ಗಳಿಗೆ ರಕ್ಷಣೆ ನೀಡುವುದು.
 6. ಇಲಾಖಾ ಸಿಬ್ಬಂದಿಯವರ ಎಲ್ಲಾ ಬಗೆಯ ದುರ್ನಡತೆ, ದುರುಪಯೋಗ, ನಂಬಿಕೆದ್ರೋಹ, ಲಂಚದ ಅಪಾದನೆ ಇತ್ಯಾದಿಗಳ ತನಿಖೆ.

ಸರ್ಕಾರ ಒಪ್ಪಿಸಿದ ಯಾವುದೇ ಕೆಲಸ. 

ಇತ್ತೀಚಿನ ನವೀಕರಣ​ : 04-12-2021 01:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080