ಅಭಿಪ್ರಾಯ / ಸಲಹೆಗಳು

ಇಲಾಖೆಯ ಅಂಗಗಳು-ಕೇಯಾಸಂ(ಸಿ ಎಮ್‌ ಒ)

ಮುಖ್ಯ ಇಂಜಿನಿಯರ್, ಕೇಂದ್ರ ಯಾಂತ್ರಿಕ ಸಂಸ್ಥೆ, ಬೆಂಗಳೂರು

 

ಪೀಠಿಕೆ 

  ಕೇಂದ್ರ ಯಾಂತ್ರಿಕ ಸಂಸ್ಥೆ ಬೆಂಗಳೂರು ವಲಯವು 1984ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು 3 ವಿಭಾಗಗಳು ಮತ್ತು 14 ಉಪ ವಿಭಾಗಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಕಾರ್ಯವ್ಯಾಪ್ತಿ ರಾಜ್ಯಾದ್ಯಂತವಿದ್ದು  ವಾಹನ : ಯಂತ್ರಗಳ ಬಗ್ಗೆ ಸೂಕ್ತ ಸಲಹೆ, ಸೂಚನೆ ನೀಡುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥರನ್ನು ಮುಖ್ಯ ಇಂಜಿನಿಯರ್, ಕೇಂದ್ರ ಯಾಂತ್ರಿಕ ಸಂಸ್ಥೆ, ಬೆಂಗಳೂರು ಎಂದು ಸರ್ಕಾರಿ ಆದೇಶ ಸಂಖ್ಯೆ: ಜಸಂಇ:149:ಬ್ಯಾಇ:2014, ಬೆಂಗಳೂರು, ದಿನಾಂಕ:    13-06-2014 ರಲ್ಲಿ ಮರುನಾಮಕರಣ ಮಾಡಿದೆ. ಈ ವರದಿಯಲ್ಲಿ ಕೇಂದ್ರ ಯಾಂತ್ರಿಕ ಸಂಸ್ಥೆಗೆ ಸಂಬAಧಿಸಿದ ವಿವರಗಳನ್ನು ಮಾತ್ರ ಪ್ರಸ್ತಾಪಿಸಲಾಗಿದೆ.

 

 ಈ ಸಂಸ್ಥೆಯ ಮುಖ್ಯ ಕಾರ್ಯಗಳು :- 

 

1) ಲೋಕೋಪಯೋಗಿ ಮತ್ತು ಜಲ ಸಂಪನ್ಮೂಲ ಇಲಾಖೆಗಳಲ್ಲಿನ ರೋಗಗ್ರಸ್ಥ ಯಂತ್ರಗಳನ್ನು  

     ಪರೀಕ್ಷಿಸಿ ವರದಿಗಳನ್ನು  ಕಳುಹಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ದುರಸ್ತಿ   

     ಅಂದಾಜುಗಳನ್ನು ಪರಿಶೀಲಿಸುವುದು, ಮಂಜೂರಾತಿ   ನೀಡುವುದು.

2) ನಿರುಪಯೋಗಿ ಹಾಗೂ ಉಪಯೋಗವಿಲ್ಲ್ಲದ ಯಂತ್ರಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು

    ಕ್ರಮ ವಹಿಸುವುದು.

3) ಹೆಚ್ಚುವರಿ ವಾಹನ / ಯಂತ್ರಗಳನ್ನು ಪುನರ್ವಸತಿಗೊಳಿಸುವುದು

4)  ಯಂತ್ರೋಪಕರಣಗಳ ಕೆಲಸ ಹಾಗೂ ನಿರ್ವಹಣೆಯ ಬಗ್ಗೆ ಸೂಕ್ತ ಕಾರ್ಯಕ್ರಮಗಳನ್ನು  

     ರೂಪಿಸಿವುದು.  ರಾಜ್ಯದಲ್ಲಿ ದೊರೆಯುವ ಯಂತ್ರ / ವಾಹನಗಳನ್ನು ಉತ್ತಮ ರೀತಿಯಲ್ಲಿ

    ಉಪಯೋಗಪಡಿಸಿಕೊಳ್ಳುವುದು.  ಮೇಲಿನ ಗುರಿಗಳನ್ನು  ಸಾಧಿಸಲು ಈ ಸಂಸ್ಥೆಯು ಸ್ಥಾಪನೆ

    ಆದಾಗಿನಿಂದಲೂ ಯತ್ನಿಸುತ್ತಿದೆ. 

II) ವಾಹನ ಮತ್ತು ಯಂತ್ರಗಳ ಉಪಯೋಗವನ್ನು ಗಮನಿಸುವ ಸಲುವಾಗಿ ಸರ್ಕಾರದಿಂದ

     ಅನುಮೋದಿತ ಪ್ರಪತ್ರದಲ್ಲಿ ಇವುಗಳ ಬಳಕೆಯ ಬಗ್ಗೆ ವಿವರಗಳನ್ನು ಮಾಸಿಕ ವರದಿಯ

     ರೂಪದಲ್ಲಿ ಜಲ ಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಗಳಿಂದ ತರಿಸಲಾಗುತ್ತಿದೆ.  ಈ

     ವಿವರಗಳನ್ನು ಸುಮಾರು ವಿಭಾಗಗಳಿಂದ ತರಿಸಲಾಗಿದ್ದು, ಈ ಕೆಳಕಂಡ ವಿವರಗಳ ಬಗ್ಗೆ ಹೆಚ್ಚು

     ಗಮನ ಕೊಡಲಾಗುತ್ತಿದೆ.

1)     ವಾಹನ ಮತ್ತು ಯಂತ್ರಗಳ ಇಂಧನದ ಬಳಕೆ

2)    ವಾಹನ ಮತ್ತು ಯಂತ್ರಗಳ ಕೀಲೆಣ್ಣೆ ಬಳಕೆ

3)    ವಾಹನ ಮತ್ತು ಯಂತ್ರಗಳ ಬಳಕೆಯ ಪ್ರಮಾಣ : ನಿರ್ದಿಷ್ಟ ಪ್ರಮಾಣಕ್ಕೆ ಅನುಗುಣವಾಗಿ

      ಇರುವುದಕ್ಕಿಂತ   ಹೆಚ್ಚು /  ಕಡಿಮೆ ಬಗ್ಗೆ

4)   ಸತತವಾಗಿ ಉಪಯೋಗಿಸದೇ ಇರುವ ವಾಹನ / ಯಂತ್ರಗಳ ಪುನರ್ವಸತಿ ಬಗ್ಗೆ

5)   ದುರಸ್ತಿಯಲ್ಲಿರುವ ವಾಹನ / ಯಂತ್ರಗಳನ್ನು ಜಾಗ್ರತೆಯಾಗಿ ಸುಸ್ಥಿತಿಗೆ ತರುವ ಬಗ್ಗೆ ಕ್ರಮ

     ತೆಗೆದುಕೊಳ್ಳುವುದು

6) ನೀರಾವರಿ  ಮತ್ತು   ಲೋಕೋಪಯೋಗಿ    ಇಲಾಖೆಯಲ್ಲದೆ    ಇತರೇ   ಇಲಾಖೆಗಳ

    ಅನುಪಯುಕ್ತಗೊಳಿಸಲಾದ ವಾಹನ :   ಯಂತ್ರಗಳನ್ನು  ಜಾಗ್ರತೆಯಾಗಿ  ವಿಲೇವಾರಿ  ಮಾಡುವ

    ವಿವಿಧ ಹಂತಗಳಲ್ಲಿ ಮುಂದಿನ ಕ್ರಮದ ಬಗ್ಗೆ ಸೂಚನೆ ಮತ್ತು  ನೆನಪೋಲೆಗಳನ್ನು    

    ಕಳುಹಿಸುವುದು.

 

 ಪ್ರಮುಖ ನಿಯಂತ್ರಣಗಳು :

    ಇಲಾಖೆಯಲ್ಲಿ ಕಾರ್ಯ ನಿರ್ವಹಣೆಯಲ್ಲಿರುವ ವಾಹನ / ಯಂತ್ರಗಳು ಗರಿಷ್ಟ ಪ್ರಮಾಣದಲ್ಲಿ ಉಪಯುಕ್ತತೆಯಾಗುವಂತೆ ನೋಡಿಕೊಳ್ಳುವುದು, ರೋಗಗ್ರಸ್ತ ವಾಹನ : ಯಂತ್ರಗಳ ದುರಸ್ತಿಯನ್ನು ಕನಿಷ್ಟ  ಅವಧಿಯಲ್ಲಿ ಅಧಿಕ ಆರ್ಥಿಕ ಭಾರವಾಗದಂತೆ ದುರಸ್ತಿ ಕಾರ್ಯ ಕೈಗೊಳ್ಳುವುದು ಹಾಗೂ ಅನುಪಯುಕ್ತ ವಾಹನ/ಯಂತ್ರಗಳ ತ್ವರಿತ ವಿಲೇವಾರಿಯಲ್ಲಿ ಸರ್ಕಾರಕ್ಕೆ ಆದಾಯವಾಗುವಂತೆ ಮಾಲೀಕತ್ವ ವಲಯಗಳಿಗೆ ಸಹಾಯ ಮಾಡುವುದು.

 

ಪ್ರಧಾನ ನಿಯಮಗಳು : ಅಧಿನಿಯಮಗಳನ್ನು ಜಾರಿಗೆ ತರುವುದು :

 

ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗೆ ಸಂಬಂಧಿಸಿದ ಇಲಾಖಾ ಸಂಹಿತೆ ಸಾದಿಲ್ವಾರು ವೆಚ್ಚದ ಕೈಪಿಡಿ ಮತ್ತು ಆರ್ಥಿಕ ಅಧಿಕಾರ ನಿಯೋಜನೆಗಳಲ್ಲಿನ ನಿಯಮಾವಳಿಗಳನ್ನು ಹಾಗೂ ಕಾಲಕಾಲಕ್ಕೆ ಬಿಡುಗಡೆಯಾಗುವ ಸರ್ಕಾರಿ ಆದೇಶಗಳನ್ನು ಅನುಸರಿಸಲಾಗುವುದು.

 

ಇಲಾಖಾ ಗುರಿಗಳ ಸಾಧನೆಗಾಗಿ ತಂತ್ರ ರಚನೆ :

 

 1. ಮೇಲಿನ ಉದ್ದೇಶ ಸಾಧನೆಗಳಿಗಾಗಿ ಯಂತ್ರಗಳ ಮಾಸಿಕ ವರದಿಗಳನ್ನು ತರಿಸಲಾಗುತ್ತಿದೆ. ಅದರ

      ಜೊತೆಯಲ್ಲಿ ಯಂತ್ರಗಳ ಅಗತ್ಯ ಮತ್ತು ಲಭ್ಯವಿರುವ ಹೆಚ್ಚುವರಿ ಯಂತ್ರಗಳ ವಿವರಗಳನ್ನು   

     ನಿಯಮಿತವಾಗಿಸಿ ವಿಲ್ವಿ ಭಾಗಗಳಿಂದ ಪಡೆದು ಅದನ್ನು ಪುನರ್ ಪರಿಶೀಲಿಸಲಾಗುವುದು. ಈ  

     ಉದ್ದೇಶಕ್ಕಾಗಿ ಪ್ರಸ್ತುತ ಗಣಕ ಯಂತ್ರವನ್ನು ಉಪಯೋಗಿಸಿಕೊಳ್ಳಲಾಗಿದೆ.

 1. ದುರಸ್ತಿ ಕೆಲಸದಲ್ಲಿ ಮಿತವ್ಯಯ ಸಾಧಿಸಲು ದುರಸ್ತಿ ಅಂದಾಜು ಪಟ್ಟಿ ಪಡೆದು ಪೂರ್ಣವಾಗಿ

    ಪರಿಶೀಲಿಸಿ ನಂತರ ಪರಿಶೋಧಿಸಿ ಮಂಜೂರಾತಿ ನೀಡಲಾಗುವುದು. ಲೋಕೋಪಯೋಗಿ ಮತ್ತು    

   ನೀರಾವರಿ ಇಲಾಖೆಗಳಲ್ಲದೇ ಇತರೇ ಇಲಾಖೆಗಳ ರೋಗಗ್ರಸ್ತ ಯಂತ್ರಗಳನ್ನು ತಪಾಸಣೆ

   ಮಾಡುವುದು, ದುರಸ್ತಿ ಕಾರ್ಯ ಕೈಗೊಳ್ಳುವುದು ಹಾಗೂ ದುರಸ್ತಿ ಅಂದಾಜು ಪಟ್ಟಿಯನ್ನು

   ಪರಿಶೋಧಿಸುವುದು ಇವೇ ಮುಂತಾದ ಕೆಲಸಗಳಲ್ಲಿ ಸಹಾಯ ಮಾಡಲಾಗುತ್ತಿದೆ.

 1. ವಾಹನ ಮತ್ತು ಸಲಕರಣೆಗಳ ಇಂಧನ ಮತ್ತು ಎಣ್ಣೆ ಬಳಕೆಯಲ್ಲಿ ಮಿತವ್ಯಯ ಸಾಧಿಸಲು

    ಬಳಕೆಯ ಪ್ರಮಾಣ  ನಿಗಧಿ ಪಡಿಸುವಂತೆ ಸೂಚಿಸಿ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ.

 1. ಯಂತ್ರಗಳ ಸ್ಥಿತಿ, ಚಾಲನಾ ಪರವಾನಗಿ, ವಿಮೆ, ನೊಂದಣಿ ಪ್ರಮಾಣ ಪತ್ರ, ಅರ್ಹತಾ ಪ್ರಮಾಣ

     ಪತ್ರ ಇವೇ ಮುಂತಾದುವುಗಳನ್ನು ಅನಿರೀಕ್ಷಿತ  ತಪಾಸಣೆ ಕೈಗೊಳ್ಳುವುದರ ಮೂಲಕ ಪುನರ್  

     ಪರಿಶೀಲಿಸಲಾಗುತ್ತಿದೆ. ಹಾಗೂ ತಪಾಸಣೆ ಸಮಯದಲ್ಲಿ ಕಂಡುಬಂದ ನ್ಯೂನತೆಗಳನ್ನು  

    ಸರ್ಕಾರದ ಗಮನಕ್ಕೆ ತರಲಾಗುತ್ತಿದೆ.

 1. ಅನುಪಯುಕ್ತ ವಾಹನಗಳನ್ನು ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ತ್ವರಿತ ವಿಲೇವಾರಿಗೆ  

    ಎಚ್ಚರಿಸುವುದು.

 

ಪ್ರಧಾನ ಬೆಳವಣಿಗೆಗಳು : ವರ್ಷದ ಮುಖ್ಯಾಂಶಗಳು :

 

 1. ಈ ಸಂಸ್ಥೆಯ ಉಪವಿಭಾಗಗಳಿಂದ ಕೈಗೊಳ್ಳುತ್ತಿರುವ ನಿತ್ಯದ ದುರಸ್ತಿ ಕೆಲಸಗಳಲ್ಲದೇ, ವಾಹನಗಳ ಅನಿರೀಕ್ಷಿತ ತಪಾಸಣೆ ಮಾಡಿ ಯಂತ್ರೋಪಕರಣಗಳ ವಾಸ್ತವಿಕ ಬಳಕೆಯ ವ್ಯತ್ಯಾಸವಾಗುವುದನ್ನು ನಿವಾರಿಸುವುದು ಮತ್ತು ವಾಹನಗಳಿಗೆ ಸಂಬAಧಿಸಿದ ದಾಖಲೆಗಳನ್ನು ಪೂರ್ಣವಾಗಿಟ್ಟುಕೊಳ್ಳುವಂತೆ ನೋಡಿಕೊಳ್ಳುವುದು ಹಾಗೂ ಈ ಮೇಲಿನ ಅಂಶಗಳಲ್ಲಿ ಯಾವುದಾದರೂ ಲೋಪಗಳು ಕಂಡು ಬಂದರೆ ಸರ್ಕಾರಕ್ಕೆ ವರದಿ ನೀಡಲಾಗುವುದು.

 

 1. ಕೇಂದ್ರ ಯಾಂತ್ರಿಕ ಸಂಸ್ಥೆ ಅಡಿಯಲ್ಲಿ ಬರುವ ಕಾರ್ಯಾಗಾರ ಮತ್ತು ಯಾಂತ್ರಿಕ ವಿಭಾಗ, ಗೊರೂರು, ಭೀಮರಾಯನಗುಡಿ ಹಾಗೂ ಹುಣಸಗಿ ಇವರಿಗೆ ಸಂಬAಧಪಟ್ಟ ಉಪ ವಿಭಾಗಗಳಲ್ಲಿ ಕಾರ್ಯಾಗಾರದ ದುರಸ್ತಿ ಪ್ರಗತಿಯು ತುಂಬಾ ಕಡಿಮೆಯಾಗಿರುತ್ತದೆ. ದುರಸ್ತಿಯ ಪ್ರಗತಿಯನ್ನು ಹೆಚ್ಚಿಸುವ ಕುರಿತಾಗಿ ಈ ಉಪ ವಿಭಾಗಗಳ ಕಾರ್ಯವ್ಯಾಪ್ತಿಗಳಲ್ಲಿ ಬರುವ ಇಲಾಖೆಗಳಾದ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ವಲಯ ಹಾಗೂ ಸಣ್ಣ ನೀರಾವರಿ ವಿಭಾಗ ಮತ್ತು ಉಪ ವಿಭಾಗಗಳಿಗೆ ಸಂಬಂಧಿಸಿದಂತ ವಾಹನಗಳ ದುರಸ್ತಿ ಕಾರ್ಯಗಳನ್ನು ಕಾರ್ಯಾಗಾರ ಮತ್ತು ಯಾಂತ್ರಿಕ ವಿಭಾಗಗಳ ಅಡಿಯಲ್ಲಿಯೇ ಮಾಡಿಕೊಳ್ಳುವಂತೆ ಸಂಬAಧಪಟ್ಟ ಇಲಾಖೆಗಳಿಗೆ ಸುತ್ತೋಲೆಯನ್ನು ಹೊರಡಿಸುವುದು. ಇದರಿಂದ ಕೇಂದ್ರ ಯಾಂತ್ರಿಕ ಸಂಸ್ಥೆಗೆ ಈ ಮೇಲಿನ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನದಲ್ಲಿಯೇ ದುರಸ್ತಿ ಕಾರ್ಯಗಳನ್ನು ಮಾಡಬಹುದಾಗಿದೆ. ಸರ್ಕಾರದ ಹಿತದೃಷ್ಟಿಯಿಂದ ಕಾರ್ಯಾಗಾರದ ದುರಸ್ತಿ ಪ್ರಗತಿಯು ಹೆಚ್ಚುತ್ತದೆ.

           ಈ  ಸಂಸ್ಥೆಯ  2020-21ನೇ  ಸಾಲಿನ  ಸಾಧನೆಗಳು  ಈ  ಕೆಳಗಿನಂತಿವೆ :-

 

ಕ್ರಮ

ಸಂಖ್ಯೆ

ವಿಷಯ

ಸಾಧನೆ ಸಂಖ್ಯೆಗಳಲ್ಲಿ

I

ಯಂತ್ರಗಳ ಹಾಗೂ ಉಪಕರಣಗಳ ದುರಸ್ತಿ

    (ಭಾರಿ ದುರಸ್ತಿ ಮತ್ತು ಲಘು ದುರಸ್ತಿ ಸೇರಿ)

 

 

ಎ) ಪ್ರಾರಂಭದಲ್ಲಿದ್ದ ವಾಹನಗಳ ಸಂಖ್ಯೆ (01-04-2020)

03

 

ಬಿ) ದುರಸ್ತಿಗಾಗಿ ಬಂದಿದ್ದು   

1290

 

ಸಿ) ಒಟ್ಟು

1290

 

ಡಿ) ದುರಸ್ತಿಯಾದದ್ದು ಭಾರಿ ದುರಸ್ತಿ ಸೇರಿ)      

1300

 

ಇ) ಬಾಕಿ

-

II

ತಪಾಸಣೆ 

 

 

ಎ) ಒಟ್ಟು ಸಾಮಾನ್ಯ ತಪಾಸಣೆಗಳು   ೧೮೩

183

 

ಬಿ) ದುರಸ್ತಿಗಾಗಿ ಶಿಫಾರಸ್ಸು ಮಾಡಿರುವುದು      ೧೧೦

110

 

ಸಿ) ನಿರುಪಯುಕ್ತತೆಗಾಗಿ ಶಿಫಾರಸ್ಸು ಮಾಡಿರುವುದು      

73

III

ಎಸ್ಟಿಮೇಟು ತಪಾಸಣೆ 

 

 

ಎ) ಆರಂಭದಲ್ಲಿದ್ದ ಎಸ್ಟಿಮೇಟುಗಳು

0

 

ಬಿ) ಎಸ್ಟಿಮೇಟುಗಳ ಪರಿಶೋಧನೆ ಹಾಗೂ   ಮಂಜೂರಾತಿಗಾಗಿ ಬಂದಿದ್ದು (ಸಂಖ್ಯೆಗಳಲ್ಲಿ)    

144

 

ಸಿ) ತಪಾಸಣೆಗೆ ಬಂದ ಎಸ್ಟಿಮೇಟುಗಳ ಮೊತ್ತ  

ರೂ.276.73 ಲಕ್ಷ

 

ಡಿ) ಪರಿಶೀಲನೆಗೆ ಬಂದ  ಎಸ್ಟಿಮೇಟುಗಳಲ್ಲಿ ಪರಿಶೀಲನಾ 

      ವರದಿ ನೀಡಿರುವ ಎಸ್ಟಿಮೇಟುಗಳ ಸಂಖ್ಯೆ

01

 

ಇ) ಪರಿಶೀಲನೆಗೆ ಬಂದ ಎಸ್ಟಿಮೇಟುಗಳ ಪರಿಶೀಲನಾ  

   ವರದಿ ನೀಡಿರುವ ಎಸ್ಟಿಮೇಟುಗಳ ಮೊತ್ತ ಲಕ್ಷಗಳಲ್ಲಿ    

ರೂ.೦.99 ಲಕ್ಷ

 

ಎಫ್) ಮಂಜೂರು ಮಾಡಲಾದ  ಎಸ್ಟಿಮೇಟುಗಳ ಸಂಖ್ಯೆ 

145

 

ಜಿ) ಮಂಜೂರು ಮಾಡಲಾದ ಎಸ್ಟಿಮೇಟುಗಳ ಮೌಲ್ಯ     

ರೂ.277.72 ಲಕ್ಷ

IV

ದುರಸ್ತಿ  ಕಾರ್ಯ  ಕೈಗೊಳ್ಳುವಾಗ  ಅನುಪಯುಕ್ತ  ವಾಹನಗಳಲ್ಲಿದ್ದ  ಉಪಯುಕ್ತ  ಅಸೆಂಬ್ಲಿ  ಮತ್ತಿತರ ಭಾಗಗಳನ್ನು  ಉಪಯೋಗಿಸಲಾಗಿದೆ.

V

ಈ  ಸಂಸ್ಥೆಯು  ನಿಗಮ,  ಸಂಸ್ಥೆ,  ಪಾಲಿಕೆಗಳು  ಹಾಗೂ  ಕೇಂದ್ರ  ಸರ್ಕಾರದ  ವಾಹನಗಳನ್ನು / ಯಂತ್ರಗಳನ್ನು  ತಪಾಸಣೆ  ಮಾಡಿ  ಅದರ  ಮೂಲಕ  ಬರುವ   ತಪಾಸಣೆ  ಶುಲ್ಕವನ್ನು ಸ್ವೀಕರಿಸಿ ಸರ್ಕಾರದ ಖಜಾನೆಗೆ   ತುಂಬಲಾಗುತ್ತಿದೆ

VI

ಈ  ವಲಯದಿಂದ  ಈವರೆವಿಗೂ  ನಿರ್ವಹಿಸುತ್ತಿದ್ದ  ಭಾರಿ  ಮತ್ತು  ಮೈನರ್  ಮತ್ತು  ಸಣ್ಣಪುಟ್ಟ ದುರಸ್ತಿಯನ್ನು  ಕೈಗೊಳ್ಳಲು   ತಗಲುತ್ತಿರುವ   ವೆಚ್ಚವನ್ನು   ಮತ್ತು   ಕಾಲ   ಮಿತಿಯನ್ನು  ಕೂಲಂಕುಷವಾಗಿ ಪರಿಶೀಲಿಸಿಇವುಗಳಿಗೆ ಸೂಕ್ತ   ರೀತಿಯಲ್ಲಿ   ಈ   ಕೆಲಸಗಳನ್ನು ನಿರ್ವಹಿಸಲು  ವೆಚ್ಚದ   ಮೊತ್ತವನ್ನು   ಮತ್ತು  ಕಾಲಮಿತಿಯನ್ನುವಾಹನ/ ಯಂತ್ರಗಳಿಗೆ ನಿಗದಿಪಡಿಸಲಾಗಿದೆ.   ಇದರಿಂದಾಗಿ  ದುರಸ್ತಿ  ಕಾಲಾವದಿ  ಮತ್ತುವೆಚ್ಚವನ್ನುಸಹ   ಸೀಮಿತಗೊಳಿಸಲಾಗಿದೆ

ಇತ್ತೀಚಿನ ನವೀಕರಣ​ : 30-08-2021 03:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080