ಅಭಿಪ್ರಾಯ / ಸಲಹೆಗಳು

ಇಲಾಖೆಯ ಅಂಗಗಳು - ಜಸಂಇ -ಅಂರಾಜ

ಕೃಷ್ಣಾ-ಮಹದಾಯಿ ಮತ್ತು ಇತರೆ ಅಂತರ ರಾಜ್ಯ ಜಲ ವಿವಾದಗಳ ಟಿಪ್ಪಣಿಗಳು:

 1. ಕೃಷ್ಣಾ ಜಲ ವಿವಾದ:
  • ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ -I:

 

1.1.1    ಆಂಧ್ರ ಪ್ರದೇಶ ಪುನರ್ ಸಂಘಟನೆ ಕಾಯಿದೆ 2014ರ ಮೊದಲು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳು ಕೃಷ್ಣಾ ನದಿ ಕಣಿವೆಯ ರಾಜ್ಯಗಳಾಗಿದ್ದವು, ಪುನರ್ ಸಂಘಟನೆಯ ನಂತರ ತೆಲಂಗಾಣ ರಾಜ್ಯವು ಕೃಷ್ಣಾ ನದಿ ಕಣಿವೆಯ ರಾಜ್ಯವಾಗಿದೆ.

1.1.2   ಮೊದಲನೆಯ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣವು (ಕೆ.ಡಬ್ಲ್ಯೂ.ಡಿ.ಟಿ-I) ಕೃಷ್ಣಾ ಕೊಳ್ಳದಲ್ಲಿ ಶೇಕಡ 75ರ ಅವಲಂಬನೆಯಲ್ಲಿ 2060 ಟಿ.ಎಂ.ಸಿ. ನೀರಿನ ಲಭ್ಯತೆಯನ್ನು ಲೆಕ್ಕಾಚಾರ ಮಾಡಿ, ಕೃಷ್ಣಾ ಕಣಿವೆಯ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಿಗೆ ಈ ನೀರನ್ನು ಹಂಚಿಕೆ ಮಾಡಿದೆ. ಪುನರುತ್ಪತ್ತಿಯಾಗುವ ಪ್ರಮಾಣ 70 ಟಿ.ಎಂ.ಸಿ. ಎಂದು ಅಂದಾಜಿಸಿ ಮೂರು ರಾಜ್ಯಗಳ ನಡುವೆ 2130 ಟಿ.ಎಂ.ಸಿ. ನೀರನ್ನು ನ್ಯಾಯಾಧಿಕರಣವು ಹಂಚಿಕೆ ಮಾಡಿದೆ; ಈ ಪ್ರಮಾಣದಲ್ಲಿ ರಾಜ್ಯವಾರು ಹಂಚಿಕೆಯ ವಿವರ ಕೆಳಗಿನಂತಿದೆ.

(ಟಿ.ಎಂ.ಸಿ ಯಲ್ಲಿ)

 

ಕ್ರ.

ಸಂ.

 

ರಾಜ್ಯ

 

ಹಂಚಿಕೆ

(2060 ಟಿ.ಎಂ.ಸಿ.)

ಹಂಚಿಕೆ (ಪುನರುತ್ಪತ್ತಿಯ 70 ಟಿ.ಎಂ.ಸಿ.)

 

ಒಟ್ಟು

1.

ಕರ್ನಾಟಕ

700

34

734

2.

ಮಹಾರಾಷ್ಟ್ರ

560

25

585

3.

ಆಂಧ್ರಪ್ರದೇಶ

800

11

811

ಒಟ್ಟು:-

2060

70

2130

                                                                  

1.1.3    ನ್ಯಾಯಾಧಿಕರಣವು ನೀರಿನ ಹಂಚಿಕೆಯನ್ನು ಒಟ್ಟಾರೆ ಆಧಾರದ (enbloc) ಮೇಲೆ ಮಾಡಿದ್ದು, ಯೋಜನಾವಾರು ಹಂಚಿಕೆ ಮಾಡಲು ಮತ್ತು ಯಾವುದೇ ಜಲ ವರ್ಷದಲ್ಲಿ ತಮ್ಮ ಸಂಪೂರ್ಣ ಹಂಚಿಕೆಯ ಪಾಲಿನ ನೀರನ್ನು ಬಳಸಲು ಕಣಿವೆ ರಾಜ್ಯಗಳಿಗೆ ಸ್ವಾತಂತ್ರ್ಯವಿರುತ್ತದೆ. ಕೊರತೆ ಅಥವಾ ಹೆಚ್ಚುವರಿ ಇರುವ ನೀರಿನ ಹಂಚಿಕೆಯನ್ನು ಪರಿಗಣಿಸದೆ ಯಾವುದೇ ಜಲ ವರ್ಷದಲ್ಲಿ ತಮ್ಮ ಪಾಲಿನ ಸಂಪೂರ್ಣ ನೀರನ್ನು ಬಳಸಲು ಮೇಲ್ಭಾಗದ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಒಪ್ಪಿಗೆ ನೀಡಲಾಯಿತು. ಆಂಧ್ರ ಪ್ರದೇಶ ರಾಜ್ಯವು ಮಾತ್ರ ಯಾವುದೇ ಜಲ ವರ್ಷದಲ್ಲಿನ ಸಂಪೂರ್ಣ ಕೊರತೆಯನ್ನು ಹಂಚಿಕೊಳ್ಳಬೇಕಾಗಿರುವುದರಿಂದ, ಯಾವುದೇ ನೀರಿನ ಹಕ್ಕಿಗೊಳಪಡದಂತೆ 2130 ಟಿ.ಎಂ.ಸಿ ನೀರಿಗಿಂತ ಹೆಚ್ಚಾಗಿರುವ ಹೆಚ್ಚುವರಿ ನೀರನ್ನು ಉಪಯೋಗಿಸಿಕೊಳ್ಳಲು ಹಾಗೂ ಯಾವುದೇ ಜಲ ವರ್ಷದಲ್ಲಿ ಮೇಲ್ಭಾಗದ ರಾಜ್ಯಗಳು ಬಳಸದೇ ಉಳಿದ ನೀರಿನ ಉಳಿತಾಯದಿಂದ ಲಭ್ಯವಾಗುವ ಹೆಚ್ಚುವರಿ ನೀರನ್ನು ಆಂಧ್ರ ಪ್ರದೇಶಕ್ಕೆ ಅನುವು ಮಾಡಿಕೊಡುವ ಮೂಲಕ ಕೊರತೆಯನ್ನು ಸರಿದೂಗಿಸಿದೆ.

 

1.1.4   ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-I ವು ಕೃಷ್ಣಾ ಕೊಳ್ಳದಲ್ಲಿ ಲಭ್ಯವಿರುವ 2130 ಟಿ.ಎಂ.ಸಿ.ಗಿಂತ ಹೆಚ್ಚಾಗಿ ಲಭ್ಯವಿರುವ ಹೆಚ್ಚುವರಿ ನೀರಿನ ಹಂಚಿಕೆಗೆ ಸ್ಕೀಂ ‘ಬಿ’ ಯನ್ನು ರೂಪಿಸಿತ್ತು. ಈ ನೀರನ್ನು ಕೃಷ್ಣಾ ಕೊಳ್ಳದ ರಾಜ್ಯಗಳಿಗೆ ಈ ಕೆಳಕಂಡಂತೆ ಶೇಕಡಾವಾರು ಆಧಾರದ ಮೇಲೆ ಹಂಚಿಕೆ ಮಾಡಬಹುದೆಂದು ಸೂಚಿಸಿದೆ:

              ಮಹಾರಾಷ್ಟ್ರ               25%

              ಕರ್ನಾಟಕ                 50%

              ಆಂಧ್ರ ಪ್ರದೇಶ             25%

 

1.1.5.   ಆದರೆ ಸ್ಕೀಂ ‘ಬಿ’ ಯನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಕೃಷ್ಣಾ ಕಣಿವೆ ಪ್ರಾಧಿಕಾರವನ್ನು ಸ್ಥಾಪಿಸುವ ಬಗ್ಗೆ ಕಣಿವೆ ರಾಜ್ಯಗಳ ನಡುವೆ ಒಪ್ಪಂದವಿಲ್ಲದ ಕಾರಣ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-I ಸ್ಕೀಂ ‘ಬಿ’ ಯನ್ನು ತನ್ನ ಅಂತಿಮ ತೀರ್ಪಿನ ಭಾಗವನ್ನಾಗಿ ಮಾಡಿರುವುದಿಲ್ಲ. ಸ್ಕೀಂ ‘ಬಿ’ಯು ತೀರ್ಪಿನ ಭಾಗವಾಗಿಲ್ಲದ ಕಾರಣ, ಕೇಂದ್ರ ಸರ್ಕಾರದಿಂದ ಗೆಜೆಟ್ ನಲ್ಲಿ ಪ್ರಕಟಣೆಗೊಂಡಿರುವುದಿಲ್ಲ. ಆದ್ದರಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ.

 

1.1.6   31ನೇ ಮೇ 2000ರ ನಂತರ ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ಆದೇಶವನ್ನು ಯಾವುದೇ ಸಮಯದಲ್ಲಿ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಧಿಕರಣವು ಪುನರ್ ಪರಿಶೀಲಿಸಬಹುದು ಅಥವಾ ಪರಿಷ್ಕರಿಸಬಹುದು ಎಂದು ನ್ಯಾಯಾಧಿಕರಣವು ತಿಳಿಸಿದೆ.

2.0     ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ II

2.1     ರಾಜ್ಯಗಳ ಪ್ರಕರಣ

2.1.1   ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಕೃಷ್ಣಾ ಕೊಳ್ಳದಲ್ಲಿನ ವಿವಾದವನ್ನು ಬಗೆಹರಿಸಲು ನ್ಯಾಯಾಧಿಕರಣ ರಚಿಸಲು ಭಾರತ ಸರ್ಕಾರಕ್ಕೆ ಕ್ರಮವಾಗಿ 26.09.2002, 27.11.2002 ಮತ್ತು 20.01.2003 ರಂದು ದೂರಿನ ಪತ್ರಗಳನ್ನು ಸಲ್ಲಿಸಿದವು. 

2.1.2   ಕೇಂದ್ರ ಸರ್ಕಾರವು 02.04.2004 ರಂದು ಅಧಿಸೂಚನೆ ಹೊರಡಿಸಿ ಕೃಷ್ಣಾ ಜಲವಿವಾದ ನ್ಯಾಯಾಧಿಕರಣವನ್ನು ಕೆಳಕಂಡಂತೆ ರಚಿಸಿದೆ. 

 1. ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್,

ನ್ಯಾಯಾಧೀಶರು (ನಿವೃತ್ತ), ಸರ್ವೋಚ್ಛ ನ್ಯಾಯಾಲಯ                ಅಧ್ಯಕ್ಷರು

 

 1. ನ್ಯಾಯಮೂರ್ತಿ ಎಸ್. ಪಿ. ಶ್ರೀವಾತ್ಸವ

ನ್ಯಾಯಾಧೀಶರು (ನಿವೃತ್ತ), ಅಲಹಾಬಾದ್ ಉಚ್ಛ ನ್ಯಾಯಾಲಯ,

ಉತ್ತರ ಪ್ರದೇಶ

(ದಿನಾಂಕ 09.08.2012 ರವರೆಗೆ)

(09.08.2012 ರಂದು ನಿಧನರಾಗಿದ್ದಾರೆ)                                  ಸದಸ್ಯರು

 

 1. ನ್ಯಾಯಮೂರ್ತಿ ಡಿ. ಕೆ. ಸೇಥ್,

ನ್ಯಾಯಾಧೀಶರು (ನಿವೃತ್ತ), ಕಲ್ಕತ್ತಾ ಉಚ್ಛ ನ್ಯಾಯಾಲಯ, ಕಲ್ಕತ್ತಾ

(ದಿ.23.05.2015 ರಂದು ರಾಜೀನಾಮೆ ನೀಡಿದರು)                         ಸದಸ್ಯರು

 

 1. ನ್ಯಾಯಮೂರ್ತಿ ಬಿ.ಪಿ.ದಾಸ್

ನ್ಯಾಯಾಧೀಶರು (ನಿವೃತ್ತ), ಒರಿಸ್ಸಾ ಉಚ್ಛ ನ್ಯಾಯಾಲಯ, ಕಟಕ್

(ನ್ಯಾಯಮೂರ್ತಿ ಶ್ರೀ ಎಸ್.ಪಿ.ಶ್ರೀವಾತ್ಸವರ ಸ್ಥಳಕ್ಕೆ

ದಿನಾಂಕ:27.12.2012 ರಿಂದ)                                           ಸದಸ್ಯರು

 

 1. ನ್ಯಾಯಮೂರ್ತಿ ರಾಮ್ ಮೋಹನ್ ರೆಡ್ಡಿ

ನ್ಯಾಯಾಧೀಶರು (ನಿವೃತ್ತ), ಕರ್ನಾಟಕ ಉಚ್ಛ ನ್ಯಾಯಾಲಯ

(ನ್ಯಾಯಮೂರ್ತಿ ಶ್ರೀ ಡಿ.ಕೆ.ಸೇಥ್ ರವರ ಸ್ಥಳಕ್ಕೆ ದಿನಾಂಕ:24.09.2015 ರಿಂದ)   ಸದಸ್ಯರು

 

 

2.1.3   ಕರ್ನಾಟಕ ರಾಜ್ಯದ ದೂರಿನಲ್ಲಿ, ಆಂಧ್ರ ಪ್ರದೇಶ ರಾಜ್ಯದಿಂದ ದೊಡ್ಡ ಪ್ರಮಾಣದ ಶಾಶ್ವತ ಯೋಜನೆಗಳ ಅಕ್ರಮ ನಿರ್ಮಾಣದ ವಿಷಯವನ್ನು ಪ್ರಸ್ತಾಪಿಸಲಾಯಿತು ಮತ್ತು ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.60 ಮೀನಿಂದ 524.256 ಮೀ.ಗೆ ಹೆಚ್ಚಿಸಲು ಅನುಮತಿ ಕೋರಲಾಯಿತು. 2130 ಟಿ.ಎಂ.ಸಿ ಗಿಂತ ಹೆಚ್ಚಾಗಿರುವ ಹೆಚ್ಚುವರಿ ನೀರಿನಲ್ಲಿ ಶೇ. 50 ರಷ್ಟು ಪಾಲನ್ನು ಸಹ ಕೇಳಿತು. ಆಂಧ್ರ ಪ್ರದೇಶದ ತೆಲುಗು-ಗಂಗಾ, ಶೀಶೈಲಂ ಎಡದಂಡೆ ಕಾಲುವೆ, ಶ್ರೀ ಶೈಲಂ ಬಲದಂಡೆ ಕಾಲುವೆ, ಭೀಮಾ ಏತ ನೀರಾವರಿ, ಪುಲಿ ಚಿಂತಲಾ, ವೆಲ್ಲಿಂಗೊಂಡ, ಹಂದ್ರಿನೀವಾ, ಗಲೇರುನಗರಿ, ಕಲ್ಲಕುರ್ತಿ ಏತ ನೀರಾವರಿ, ನೆಟ್ಟಂಪಾಡು ಏತ ನೀರಾವರಿ ಮತ್ತು ಕೊಯಿಲ್ಸಾಗರ್ ಏತ ನೀರಾವರಿ ಯೋಜನೆಗಳಡಿ ಆಂಧ್ರ ಪ್ರದೇಶವು ಹೆಚ್ಚುವರಿ ನೀರನ್ನು ಬಳಸಿಕೊಳ್ಳುವುದನ್ನು ವಿರೋಧಿಸುತ್ತಾ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ರ ಕಲಾಪಗಳ ಸಂದರ್ಭದಲ್ಲಿ ರಾಜ್ಯವು ಮಧ್ಯಕಾಲೀನ ಅರ್ಜಿ ಸಲ್ಲಿಸುವ ಮೂಲಕ ಆಕ್ಷೇಪಿಸಿತು.   

2.1.4   ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನ ಪರಿಣಾಮದಿಂದಾಗಿ ತನ್ನ ಪ್ರದೇಶವು ಮುಳುಗಡೆಯಾಗುತ್ತದೆ ಎಂದು ಆರೋಪಿಸುತ್ತಾ, ಮಹಾರಾಷ್ಟ್ರ ರಾಜ್ಯವು ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಪ್ರಶ್ನಿಸಿದೆ.

2.1.5   ಆಂಧ್ರ ಪ್ರದೇಶವು ಆಲಮಟ್ಟಿ ಅಣೆಕಟ್ಟು ಗಾತ್ರಕ್ಕಿಂತ ಹೆಚ್ಚಾಗಿರುತ್ತದೆ ಇದರಿಂದ ತನ್ನ ರಾಜ್ಯಕ್ಕೆ ಒಳ ಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು ಪ್ರಶ್ನಿಸಿದೆ.

2.2     ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ -II ಆದೇಶಗಳು:

 

2.2.1   ದಾಖಲೆಗಳು, ಮೌಖಿಕ ಸಾಕ್ಷ್ಯಗಳು ಮತ್ತು ವಿವರವಾದ ವಿಮರ್ಶೆಗಳನ್ನು ಸಲ್ಲಿಸಿದ ನಂತರ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ಅಂತಿಮ ಆದೇಶವನ್ನೊಳಗೊಂಡ ತನ್ನ ವರದಿಯನ್ನು ದಿನಾಂಕ: 30.12.2010 ರಂದು ಅಂತರ ರಾಜ್ಯ ಜಲ ವಿವಾದ ಕಾಯಿದೆ 1956ರ ಸೆಕ್ಷನ್ 5(2)ರಡಿ ನೀಡಿತು. ದಿನಾಂಕ 30.12.2010ರ ಆದೇಶದ ಬಗ್ಗೆ ಸ್ಪಷ್ಟೀಕರಣ/ಮಾರ್ಗದರ್ಶನ ಕೋರಿ ಅಂತರ ರಾಜ್ಯ ಜಲ ವಿವಾದ ಕಾಯಿದೆ 1956ರ ಸೆಕ್ಷನ್ 5(3)ರ ಅಡಿಯಲ್ಲಿ ಕಣಿವೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದವು. ಕಣಿವೆ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ನಂತರ ಅಂತರ ರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್ 5(3) ಅಡಿ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ವು ತನ್ನ ಮುಂದುವರೆದ ವರದಿಯನ್ನು ದಿನಾಂಕ: 29.11.2013 ರಂದು ನೀಡಿದೆ.

 

2.2.2   ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ರ ಆದೇಶದಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.256 ಮೀಟರಿಗೆ ಎತ್ತರಿಸಬಹುದು ಎಂದು ಅನುಮತಿ ನೀಡಿದೆ. ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-I ನೀಡಿರುವ ತೀರ್ಪು/ ಆದೇಶಗಳು ಮತ್ತು ನಿರ್ದೇಶನಗಳನ್ನು ತಿದ್ದುಪಡಿ, ಮಾರ್ಪಾಡು ಅಥವಾ ಪರಿಶೀಲಿಸದೆ, ಇದರಲ್ಲಿ ಯಾವುದೇ ಬದಲಾವಣೆ ಮಾಡದೇ ಸದರಿ ಆದೇಶವನ್ನು ಭಾಗವನ್ನಾಗಿಸಲು ನಿರ್ಧರಿಸಿ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-I ರ ಆದೇಶವನ್ನು ಕಾರ್ಯರೂಪದಲ್ಲಿರಿಸಿದೆ.

2.2.3   ವಿಭಿನ್ನ ಅವಲಂಬನೆಯನುಸಾರ KWDT-I ಮತ್ತು KWDT-II ರ ಮುಂದುವರೆದ ವರದಿಯಲ್ಲಿ ಕಣಿವೆ ರಾಜ್ಯಗಳಿಗೆ ಅಂತಿಮ ಹಂಚಿಕೆಯು ಕೆಳಗಿನಂತಿದೆ.

ರಾಜ್ಯಗಳು

75% ಅವಲಂಬನೆಯಲ್ಲಿ KWDT-I ರ ಹಂಚಿಕೆ

KWDT-II ರ ಹಂಚಿಕೆ

ಒಟ್ಟು ಹಂಚಿಕೆ

65% ಅವಲಂಬನೆಯಲ್ಲಿ

ಸರಾಸರಿ

ಒಟ್ಟು

ಕರ್ನಾಟಕ

734

68

105

173

907 ಟಿಎಂಸಿ

ಮಹಾರಾಷ್ಟ್ರ

585

46

35

81

666 ಟಿಎಂಸಿ

ಆಂಧ್ರ ಪ್ರದೇಶ

811

49

145

194

1005 ಟಿಎಂಸಿ

ಒಟ್ಟು

2130

163

285

448

2578 ಟಿಎಂಸಿ

 

2.2.4   31ನೇ ಮೇ 2050ರ ನಂತರ ಯಾವುದೇ ಸಮಯದಲ್ಲಿ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಧಿಕರಣದಿಂದ ಈ ಆದೇಶವನ್ನು ಪರಿಷ್ಕರಿಸಬಹುದು ಅಥವಾ ಮಾರ್ಪಡಿಸಬಹುದೆಂದು ತಿಳಿಸುತ್ತಾ, ಈ ಪರಿಶೀಲನೆಯು ಕಣಿವೆ ರಾಜ್ಯಗಳಿಗೆ ಹಂಚಿಕೆಯಾಗಿರುವ ನೀರಿನ ಮಿತಿಯಲ್ಲಿ ರಾಜ್ಯಗಳು ನೀರನ್ನು ಉಪಯೋಗಿಸಿದ್ದಲ್ಲಿ, ಈ ಬಳಕೆಗೆ ಸಾಧ್ಯವಾದಷ್ಟು ತೊಂದರೆಯಾಗದಂತಿರಬೇಕು ಎಂದು ತಿಳಿಸಿರುತ್ತದೆ.

2.2.5   ವಿಭಿನ್ನ ಅವಲಂಬನೆಗಳಿಗೆ ಅನುಗುಣವಾಗಿ ರಾಜ್ಯಗಳು ನೀರನ್ನು ಸೆಳೆಯಲು ವಿವರವಾದ ಕಾರ್ಯವಿಧಾನವನ್ನು ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ -II ವು ವಿವಿಧ ಹಂತಗಳಲ್ಲಿ ನೀರನ್ನು ಸೆಳೆಯಲು ರೂಪಿಸಿದೆ. ಅಂದರೆ, ಮೊದಲನೆಯ ಹಂತದಲ್ಲಿ 75% ಅವಲಂಬನೆಯ ಹಂಚಿಕೆಯಂತೆ ಎರಡನೆಯ ಹಂತದಲ್ಲಿ 65% ಅವಲಂಬನೆಯ ಹಂಚಿಕೆಯಂತೆ ಮತ್ತು ಅಂತಿಮ ಹಂತದಲ್ಲಿ ಸರಾಸರಿ ಹಂಚಿಕೆಯನ್ನು ರೂಪಿಸಿದೆ.

 1. ನ್ಯಾಯಾಧಿಕರಣದ ಆದೇಶದ ನಂತರದ ಬೆಳವಣಿಗೆಗಳು.

3.1     ಸುಪ್ರೀಂಕೋರ್ಟ್‍ನಲ್ಲಿ ಕಣಿವೆ ರಾಜ್ಯಗಳು ಸಲ್ಲಿಸಿರುವ ವಿಶೇಷ ಮನವಿ ಅರ್ಜಿಗಳು:

 

3.1.1    ದಿನಾಂಕ.30.12.2010ರಂದು ನ್ಯಾಯಾಧಿಕರಣವು ನೀಡಿದ ಆದೇಶವನ್ನು ಪ್ರಶ್ನಿಸಿ ಆಂಧ್ರ ಪ್ರದೇಶ ರಾಜ್ಯವು ಸರ್ವೋಚ್ಛ ನ್ಯಾಯಾಲಯದಲ್ಲಿ ದಿನಾಂಕ 28.03.2011 ರಂದು ವಿಶೇಷ ಮನವಿ ಅರ್ಜಿ ಸಂಖ್ಯೆ:10498/2011 ಅನ್ನು ಸಲ್ಲಿಸಿದೆ. ಸೆಕ್ಷನ್ 5(3) ರ ಕಾಯಿದೆಯಡಿ ನ್ಯಾಯಾಧಿಕರಣದ ದಿನಾಂಕ: 29.11.2013ರ ಮುಂದುವರೆದ ವರದಿ / ಆದೇಶವನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ತಮ್ಮ ವಿಶೇಷ ಮನವಿ ಅರ್ಜಿಗಳನ್ನು ದಾಖಲಿಸಿವೆ. ಆಂಧ್ರ ಪ್ರದೇಶ ಪುನಸ್ಸಂಘಟನಾ ಕಾಯಿದೆ, 2014ರ ಹಿನ್ನೆಲೆಯಲ್ಲಿ, ತೆಲಂಗಾಣ ರಾಜ್ಯವು ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಗಳಲ್ಲಿ ಪಾರ್ಟಿಯಾಗಲು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತು, ಹಾಗೆಯೇ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ರ ವರದಿ/ಆದೇಶವನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿತು.

3.1.2   ನೂತನ ನ್ಯಾಯಾಧಿಕರಣವನ್ನು ಸೃಜಿಸಬೇಕೆಂದು ಅಥವಾ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ಕ್ಕೆ ತನ್ನ ದೂರನ್ನು ವಹಿಸಿಕೊಡಬೇಕೆಂದು ತೆಲಂಗಾಣ ರಾಜ್ಯವು 14.07.2014 ರಂದು ಅಂ.ರಾ.ಜ.ವಿ. ಕಾಯ್ದೆ 1956 ರ ಸೆಕ್ಷನ್ (3) ರಡಿ ಕೇಂದ್ರ ಸರ್ಕಾರಕ್ಕೆ ತನ್ನ ದೂರನ್ನು ದಾಖಲಿಸಿತು. ಕೇಂದ್ರ ಸರ್ಕಾರವು ಈ ದೂರಿನ ಬಗ್ಗೆ ಕ್ರಮ ಕೈಗೊಳ್ಳದಿದ್ದಾಗ ನೂತನ ನ್ಯಾಯಾಧಿಕರಣವನ್ನು ಸೃಜಿಸಿ, ತನ್ನ ದೂರನ್ನುಅದಕ್ಕೆ ವಹಿಸಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ತೆಲಂಗಾಣ ರಾಜ್ಯವು ದಿನಾಂಕ 10.08.2015 ರಂದು ರಿಟ್ ಅರ್ಜಿ ಸಂಖ್ಯೆ: 545/2015 ಅನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ.

3.1.3   ಆಂಧ್ರ ಪ್ರದೇಶ ರಾಜ್ಯವು ಸೆಕ್ಷನ್ 5(2) ರಡಿಯಲ್ಲಿ ನ್ಯಾಯಾಧಿಕರಣವು ನೀಡಿರುವ ತೀರ್ಪು / ಅಂತಿಮ ಆದೇಶದ ವಿರುದ್ಧ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯು ವಿಚಾರಣೆಗೆ ಬಂದಾಗ ದಿನಾಂಕ: 16.09.2011 ರಂದು ನ್ಯಾಯಾಲಯವು ಸದರಿ ವಿಷಯದ ಕುರಿತು ವಿವರವಾದ ಪರಿಗಣನೆಯ ಅಗತ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದು, ಮೂರು ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಗಳ ಕುರಿತು ನ್ಯಾಯಾಧಿಕರಣ ತೆಗೆದುಕೊಳ್ಳುವ ನಿರ್ಧಾರಗಳನ್ನು ಮುಂದಿನ ಆದೇಶದವರೆಗೆ ಅಧಿಕೃತ ಗೆಜೆಟ್ ನಲ್ಲಿ ಕೇಂದ್ರ ಸರ್ಕಾರವು ಪ್ರಕಟಿಸಬಾರದೆಂದು ಈ ರೀತಿ ಆದೇಶಿಸಿದೆ.

“…… till further orders the decision which may be taken by the Tribunal on the reference petitions filed by the three States and the Central Government shall not be published in the Official Gazette….. ’’

ಸರ್ವೋಚ್ಛ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿರುವುದರಿಂದ ಕೇಂದ್ರ ಸರ್ಕಾರವು ನ್ಯಾಯಾಧಿಕರಣದ ಅಂತಿಮ ಆದೇಶವನ್ನು ಪ್ರಕಟಿಸಿರುವುದಿಲ್ಲ. ಮಹಾರಾಷ್ಟ್ರ ರಾಜ್ಯವು ನ್ಯಾಯಾಧಿಕರಣದ ಅಂತಿಮ ಆದೇಶವನ್ನು ಪ್ರಕಟಿಸಲು ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ.

3.1.4   ನ್ಯಾಯಾಧಿಕರಣದ ನಿರ್ಧಾರ / ಅಂತಿಮ ಆದೇಶದ ವಿರುದ್ಧ ಸೆಕ್ಷನ್ 5(2) ರಡಿಯಲ್ಲಿ ಆಂಧ್ರ ಪ್ರದೇಶ ರಾಜ್ಯವು ಸಲ್ಲಿಸಿದ್ದ ಎಸ್.ಎಲ್.ಪಿ. ಯಡಿ, ಮಧ್ಯಂತರ ಅರ್ಜಿ - 3/2011 ರ ಕುರಿತು ಮಾನ್ಯ ಸರ್ವೋಚ್ಛ ನ್ಯಾಯಾಲಯವು ದಿನಾಂಕ: 16.09.2011 ರಂದು ನೀಡಿರುವ ಮಧ್ಯಂತರ ಆದೇಶವನ್ನು ಮಾರ್ಪಡಿಸುವಂತೆ ಹಾಗೂ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ನೀಡಿರುವ 30.12.2010 ರ ಅಂತಿಮ ವರದಿ ಹಾಗೂ ದಿನಾಂಕ: 29.11.2013 ರ ಮುಂದುವರೆದ ವರದಿಗಳನ್ನು ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ಕೋರಿ ದಿನಾಂಕ: 18.02.2019 ರಂದು ಕರ್ನಾಟಕವು ಅರ್ಜಿಯನ್ನು ಸಲ್ಲಿಸಿದೆ.

3.1.5 ತೆಲಂಗಾಣ ರಾಜ್ಯವು ರಿಟ್ ಅರ್ಜಿ ಸಂಖ್ಯೆ: 545/2015 ಅನ್ನು ಹಿಂಪಡೆಯಲು ಅನುಮತಿ ನೀಡುವಂತೆ ಕೋರಿ ದಿನಾಂಕ 09.06.2021 ರಂದು ಸದರಿ ರಿಟ್ ಅರ್ಜಿಯಡಿ ಮಧ್ಯಂತರ ಅರ್ಜಿ ಸಂಖ್ಯೆ: 67212/2021 ಅನ್ನು ದಾಖಲಿಸಿರುತ್ತದೆ. ಮುಂದುವರೆದು ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳನ್ನು ಅರ್ಜಿ ಸಂಖ್ಯೆ: 545/2015 ರಿಂದ ತೆಗೆದುಹಾಕುವಂತೆ ಕೋರಿ ದಿನಾಂಕ 18.08.2021 ರಂದು ಮಧ್ಯಂತರ ಅರ್ಜಿಯನ್ನು ದಾಖಲಿಸಿರುತ್ತದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳು ತೆಲಂಗಾಣದ ಹಿಂಪಡೆಯುವಿಕೆಯ ಅರ್ಜಿಗೆ ಉತ್ತರಗಳನ್ನು ದಾಖಲಿಸಿರುತ್ತದೆ. ತೆಲಂಗಾಣದ ರಿಟ್ ಅರ್ಜಿಯನ್ನು ಷರತ್ತುಬದ್ಧವಾಗಿ ಹಿಂತೆಗೆದುಕೊಳ್ಳುವಿಕೆಯನ್ನು ಪ್ರತಿವಾದಿ ರಾಜ್ಯಗಳು ಒಪ್ಪಿರುವುದಿಲ್ಲ.

 

3.1.6 ದಿನಾಂಕ 06.10.2021 ರಂದು ಮಧ್ಯಂತರ ಅರ್ಜಿ ಸಂಖ್ಯೆ: 67212/2021 ರ ವಿಷಯವನ್ನು ವಿಚಾರಣೆಗಾಗಿ ಸರ್ವೋಚ್ಛ ನ್ಯಾಯಾಲಯದ ಮುಂದೆ ಪಟ್ಟಿ ಮಾಡಲಾಗಿದ್ದು, ತೆಲಂಗಾಣದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅದೇಶ “disposed off as withdrawn” ರಂತೆ ಇತ್ಯರ್ಥ ಮಾಡಲಾಗಿದೆ.

 

3.1.7 ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ವಿಶೇಷ ಮೇಲ್ಮನವಿ ಅರ್ಜಿ (ಸಿ)  ಸಂಖ್ಯೆ: 10498/2011 ಮತ್ತು ಸಂಬಂಧಿತ ವಿಶೇಷ ಮೇಲ್ಮನವಿ ಅರ್ಜಿಗಳ ನಿರ್ಣಯಕ್ಕೆ ಒಳಪಟ್ಟಂತೆ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-II ದಿನಾಂಕ 29.11.2013 ರ ಮಾರ್ಪಡಿಸಿದ ಅಂತಿಮ ಆದೇಶವನ್ನು ಪ್ರಕಟಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ರಾಜ್ಯವು ವಿಶೇಷ ಮೇಲ್ಮನವಿ ಅರ್ಜಿ (ಸಿ) ಸಂಖ್ಯೆ: 10498/2011 ರಡಿ ಸಲ್ಲಿಸಿರುವ ಮಧ್ಯಂತರ ಅರ್ಜಿ ಸಂಖ್ಯೆ: 30361/2019 ಕ್ಕೆ ಹೆಚ್ಚುವರಿ ಶಪಥ ಪತ್ರವನ್ನು 06.11.2021 ರಂದು ಸಲ್ಲಿಸಿದೆ.

3.1.8   ಅಂತರ್‌ರಾಜ್ಯ ಜಲವಿವಾದ ಕಾಯ್ದೆ 1956 ರ ಸೆಕ್ಷನ್ 6(1) ರಂತೆ, ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2 ರ ಮಾರ್ಪಡಿತ ಅಂತಿಮ ಆದೇಶವನ್ನು ಪ್ರಕಟಿಸುವಂತೆ ಪ್ರತಿವಾದಿಯಾದ ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನು ನೀಡುವಂತೆ ಕೋರುತ್ತಾ, ಆಂಧ್ರ ಪ್ರದೇಶ ರಾಜ್ಯವು ಸಲ್ಲಿಸಿರುವ ವಿಶೇಷ ಮನವಿ ಅರ್ಜಿ ಸಂ: 10498/2011 ರಡಿ ಕರ್ನಾಟಕ ರಾಜ್ಯವು ಈಗಾಗಲೇ ಸಲ್ಲಿಸಿರುವ ಅರ್ಜಿ ಸಂ: 30361/2019 ಹಾಗೂ ಹೆಚ್ಚುವರಿ ಶಪಥಪತ್ರಗಳಲ್ಲಿನ ಅಂಶಗಳಿಗೆ ಬೆಂಬಲವಾಗಿ ಮುಂದುವರೆದ ಶಪಥಪತ್ರವನ್ನು 12.12.2022 ರಂದು ಸರ್ವೋಚ್ಛ ನ್ಯಾಯಾಲಯದ ಮುಂದೆ ಸಲ್ಲಿಸಿರುತ್ತದೆ.

 

3.1.9 ಸದರಿ ವಿಶೇಷ ಮೇಲ್ಮನವಿ ಅರ್ಜಿಗಳ ಕುರಿತಾದ ವಿಚಾರಣೆಯು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ.

4.0    ಆಂಧ್ರ ಪ್ರದೇಶ ಪುನರ್ ಸಂಘಟನಾ ಕಾಯಿದೆ, 2014 ಸೆಕ್ಷನ್ 89 ನ್ನು

           ನ್ಯಾಯಾಧಿಕರಣಕ್ಕೆ ವಹಿಸಿರುವ ಬಗ್ಗೆ:

 

4.1     ಆಂಧ್ರ ಪ್ರದೇಶ ಪುನರ್ ಸಂಘಟನಾ ಕಾಯಿದೆ 2014 ರ, ಸೆಕ್ಷನ್ 89 ನ್ನು ಕೃ.ಜ.ವಿ.ನ್ಯಾ–2 ಕ್ಕೆ ವಹಿಸುತ್ತಾ, ಕೇಂದ್ರ ಸರ್ಕಾರವು ದಿನಾಂಕ: 15.05.2014 ರಂದು ಅಧಿಸೂಚನೆ ಹೊರಡಿಸಿದೆ.

4.2    ತೆಲಂಗಾಣ ರಾಜ್ಯವು ವಿವಾದಗಳನ್ನು ಪುನಃ ತೆರೆಯಲು ಮನವಿ ಮಾಡಿದೆ. ಅಂದರೆ, ನ್ಯಾಯಾಧಿಕರಣದ ತೀರ್ಪು/ ಆದೇಶವನ್ನು ಹೊಸದಾಗಿ ತೀರ್ಮಾನಿಸಲು ಹಾಗೂ ಆಂಧ್ರ ಪ್ರದೇಶವು ಯೋಜನಾವಾರು ಹಂಚಿಕೆಗಾಗಿ ಹಾಗೂ ಹರಿವಿನ ಕೊರತೆಯ ಸಂದರ್ಭದಲ್ಲಿ ನೀರಿನ ಬಿಡುಗಡೆಗೆ ನಿರ್ವಹಣಾ ನೀತಿಯನ್ನು ನಿರ್ದರಿಸುವಂತೆ ಕೋರಿದೆ ಹಾಗೂ ನೀರಿನ ಕೊರತೆಯನ್ನು ಮೆಲ್ಬಾಗದ ರಾಜ್ಯಗಳಿಗೆ ಹಂಚಲು ನ್ಯಾಯಾಧಿಕರಣ-I ರ ಒಟ್ಟಾರೆ ಹಂಚಿಕೆಯನ್ನು (enbloc allocation) ಮಾರ್ಪಡಿಸಲು ಕೋರುತ್ತಿದೆ. ನ್ಯಾಯಾಧಿಕರಣದ ಮುಂದೆ ನಾಲ್ಕೂ ರಾಜ್ಯಗಳು ಕಕ್ಷೀದಾರರಾಗಬೇಕೆಂದು ಈ ಎರಡೂ ರಾಜ್ಯಗಳು ಕೋರುತ್ತಿವೆ.

4.3    ನ್ಯಾಯಾಧಿಕರಣವು ದಿನಾಂಕ 19.10.2016ರ ತನ್ನ ಆದೇಶದಲ್ಲಿ ಮೇಲ್ಭಾಗದ ರಾಜ್ಯಗಳಿಗೆ ಯೋಜನಾವಾರು ಹಂಚಿಕೆಗಾಗಿ ನಿರ್ವಹಣಾ ನೀತಿಯನ್ನು ನಿರ್ಧರಿಸುವುದು ಸಾಧ್ಯವಿಲ್ಲವೆಂದು ಹಾಗೂ ಯೋಜನಾವಾರು ಹಂಚಿಕೆಯ ನಿರ್ವಹಣಾ ನೀತಿಯು ವಾರಸುದಾರ ರಾಜ್ಯಗಳಾದ ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿಸಿದೆ. ಮುಂದುವರೆಯುತ್ತಾ, 2014 ರ ಕಾಯ್ದೆ ಸೆಕ್ಷನ್ 89ರ ಅಡಿಯಲ್ಲಿನ ಯೋಜನಾವಾರು ನಿಖರ ಹಂಚಿಕೆಯು ಹಾಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಿಗೆ ಸೀಮಿತ ಎಂದು ತಿಳಿಸಿದೆ.

4.4    ದಿನಾಂಕ: 19-10-2016 ರಂದು ನ್ಯಾಯಾಧಿಕರಣವು ನೀಡಿದ ಆದೇಶದ ವಿರುದ್ಧ ಹೂಡಿದ್ದ ತೆಲಂಗಾಣ ರಾಜ್ಯದ ಎಸ್.ಎಲ್.ಪಿ. ಯನ್ನು ಸರ್ವೋಚ್ಛ ನ್ಯಾಯಾಲಯವು ದಿನಾಂಕ: 09-01-2017 ರಂದು ವಜಾಗೊಳಿಸಿದೆ.

4.5    ದಿನಾಂಕ: 19.10.2016 ರಂದು ನ್ಯಾಯಾಧಿಕರಣವು ನೀಡಿದ ಆದೇಶದ ಕುರಿತು ಮುಂದಿನ ಕಲಾಪಗಳನ್ನು ತಡೆ ಹಿಡಿಯುವಂತೆ ಪ್ರಾರ್ಥಿಸಿ ಆಂಧ್ರ ಪ್ರದೇಶ ರಾಜ್ಯವು ಸಲ್ಲಿಸಿದ್ದ ಎಸ್.ಎಲ್.ಪಿ ಯನ್ನು ಸರ್ವೋಚ್ಛ ನ್ಯಾಯಲಯವು 10-12-2018 ರಂದು ವಜಾಗೊಳಿಸಿದೆ. 

4.6    ನ್ಯಾಯಾಧಿಕರಣದ ಮುಂದೆ ಕಲಾಪಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಹೊರತು ಪಡಿಸಿ ಪ್ರಗತಿಯಲ್ಲಿವೆ.

 1. ಮಹಾದಾಯಿ ನದಿ ನೀರಿನ ವಿವಾದಗಳು:

5.1     ಹುಬ್ಬಳ್ಳಿ-ಧಾರವಾಡ, ನಗರಗಳ ಮಾರ್ಗ ಮಧ್ಯ ಪಟ್ಟಣ ಹಾಗೂ ಹಳ್ಳಿಗಳಿಗೆ ಕುಡಿಯುವ ನೀರಿನ ಅವಶ್ಯಕತೆ ಪೂರೈಸಲು ಕರ್ನಾಟಕ ರಾಜ್ಯವು ತನ್ನ ಭಾಗದ ಮಹದಾಯಿ ಕೊಳ್ಳದ ಕೊಡುಗೆಯಲ್ಲಿ ಅತ್ಯಲ್ಪ ಪ್ರಮಾಣವಾದ 7.56 ಟಿ.ಎಂ.ಸಿ. ನೀರನ್ನು ತಿರುವುಗೊಳಿಸಿ ಮಲಪ್ರಭಾ ಜಲಾಶಯಕ್ಕೆ ಸೇರಿಸಲು ಯೋಜಿಸಿರುತ್ತದೆ. ಕುಡಿಯುವ ನೀರಿನ ಪೂರೈಕೆಯ ಬವಣೆಯು ಅತಿ ತೀವ್ರವಾಗಿರುವ ಈ ಪ್ರದೇಶದಲ್ಲಿನ ಜನರ ಕುಡಿಯುವ ನೀರಿನ ಬೇಡಿಕೆಯನ್ನು 10 ದಿನಗಳಿಗೊಮ್ಮೆಯೂ ಪೂರೈಸುವುದು ಅಸಾಧ್ಯವಾಗಿರುತ್ತದೆ.  ಕರ್ನಾಟಕ ರಾಜ್ಯವು ಈ ತಿರುವು ಯೋಜನೆಗೆ, ಶಾಸನ ಬದ್ದ ತೀರುವಳಿ (Statutary Clearances) ಅನುಮೋದನೆಯನ್ನು ಕೇಂದ್ರ ಸರ್ಕಾರದ ವತಿಯಿಂದ ಪಡೆಯುವ ಪ್ರಕ್ರಿಯೆಯಲ್ಲಿದ್ದಾಗ, ಕರ್ನಾಟಕವು ಇಂತಹ ಯೋಜನೆಯನ್ನು ಕೈಗೆತ್ತಿಕೊಳ್ಳುವುದನ್ನು ತಡೆಯುವಂತೆ ಕೋರಿ ಗೋವಾ ರಾಜ್ಯವು ಕೇಂದ್ರ ಸರ್ಕಾರಕ್ಕೆ ಮಾರ್ಚ್ 2001 ರಲ್ಲಿ ದೂರು ನೀಡಿತು.

5.2    ಈ ಕುರಿತಂತೆ, ಕೇಂದ್ರ ಜಲ ಸಂಪನ್ಮೂಲ ಮಂತ್ರಾಲಯವು 7.56 ಟಿ.ಎಂ.ಸಿ. ನೀರಿನ ಪ್ರಮಾಣವನ್ನು ಮಹದಾಯಿ ಜಲಾನಯನದಿಂದ, ಮಲಪ್ರಭಾ ಜಲಾಶಯಕ್ಕೆ ತಿರುವುಗೊಳಿಸಲು ದಿನಾಂಕ 30.04.2002ರ ಪತ್ರದಲ್ಲಿ “ತತ್ವಾಧಾರಿತ ತೀರುವಳಿ”     (IN PRINCIPLE CLERANCE) ನೀಡಿತು.

5.3    ಕೇಂದ್ರ ಸರ್ಕಾರವು ನೀಡಿರುವ ಈ “ತತ್ವಾಧಾರಿತ ತೀರುವಳಿ”ಯನ್ನು                              (IN PRINCIPLE CLERANCE) ಗೋವಾ ಸರ್ಕಾರವು ಆಕ್ಷೇಪಿಸಿದೆ. ದಿನಾಂಕ: 09.07.2002 ರ ಪತ್ರದಲ್ಲಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಈ “ತತ್ವಾಧಾರಿತ ತೀರುವಳಿ” ಬಗ್ಗೆ ಆಕ್ಷೇಪಿಸಿ, ನ್ಯಾಯ ಮಂಡಳಿಯನ್ನು ರಚಿಸಲು ದೂರು ನೀಡಿತು. ಕೇಂದ್ರ ಜಲ ಸಂಪನ್ಮೂಲ ಇಲಾಖೆಯು ತನ್ನ ಪತ್ರ ದಿನಾಂಕ: 19.09.2002 ರಲ್ಲಿ “ತತ್ವಾಧಾರಿತ ತೀರುವಳಿ”ಯನ್ನು ತಡೆಹಿಡಿಯಿತು. 

5.4    ಗೋವಾ ರಾಜ್ಯವು ಸರ್ವೋಚ್ಛ ನ್ಯಾಯಾಲಯದಲ್ಲಿ ದಿನಾಂಕ 15.09.2006 ರಂದು ಮೂಲ ದಾವೆಯನ್ನು (O.S-4/2006) ಹೂಡಿದೆ.

5.5    ಮಹಾದಾಯಿ ನ್ಯಾಯಾಧಿಕರಣ ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ದಿನಾಂಕ 26.06.2010 ರಂದು ದೂರನ್ನು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿದೆ. 

5.6    ಪ್ರತಿವಾದಿ ರಾಜ್ಯಗಳ ದೂರುಗಳ ಆಧಾರದ ಮೇಲೆ ಈ ಕೆಳಕಂಡ ಸದಸ್ಯರನ್ನೊಳಗೊಂಡಂತೆ ಮಹದಾಯಿ ಜಲ ವಿವಾದ ನ್ಯಾಯಾಧಿಕರಣವನ್ನು ರಚಿಸಿ 16.11.2010 ರಂದು ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

       (1)    ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್,

             ನ್ಯಾಯಾಧೀಶರು (ನಿವೃತ್ತ),

ಸರ್ವೋಚ್ಛ ನ್ಯಾಯಾಲಯ                                   ಅಧ್ಯಕ್ಷರು

 

(2)    ನ್ಯಾಯಮೂರ್ತಿ ವಿನಯ್ ಮಿತ್ತಲ್

              ನ್ಯಾಯಾಧೀಶರು (ನಿವೃತ್ತ),

ಮಧ್ಯ ಪ್ರದೇಶ ಉಚ್ಛ ನ್ಯಾಯಾಲಯ                                                     ಸದಸ್ಯರು

 

 

(3)    ನ್ಯಾಯಮೂರ್ತಿ ಪಿ.ಎಸ್.ನಾರಾಯಣ

              ನ್ಯಾಯಾಧೀಶರು (ನಿವೃತ್ತ),

ಆಂಧ್ರ ಪ್ರದೇಶ, ಉಚ್ಛ ನ್ಯಾಯಾಲಯ                          ಸದಸ್ಯರು                                                                         

5.7    ಕರ್ನಾಟಕ ರಾಜ್ಯವು 36.558 ಟಿ.ಎಂ.ಸಿ ಪ್ರಮಾಣದ ನೀರನ್ನು ನ್ಯಾಯಸಮ್ಮತ ತತ್ವದ ಆಧಾರದ ಮೇಲೆ ಹಂಚಿಕೆ ಮಾಡುವಂತೆ ಕೋರಿ ನ್ಯಾಯಾಧಿಕರಣದ ಮುಂದೆ ಎಲ್ಲಾ ದಾಖಲೆಗಳನ್ನು ಮತ್ತು ವಾದ ಪತ್ರಗಳನ್ನು ಸಲ್ಲಿಸಿದೆ. ಹುಬ್ಬಳ್ಳಿ ಧಾರವಾಡ, ಕುಂದಗೋಳ ಮತ್ತು ಇತರೆ ಮಾರ್ಗಮಧ್ಯೆ ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಕಳಸಾ ಮತ್ತು ಬಂಡೂರ ಯೋಜನೆಗಳಿಂದ 7.560 ಟಿ.ಎಂ.ಸಿ. ನೀರನ್ನು ಮಲಪ್ರಭಾ ನದಿಗೆ ತಿರುವು ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

 

5.8    ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಕ್ರಮವಾಗಿ 122.60 ಮತ್ತು 6.35 ಟಿಎಂಸಿ ಪ್ರಮಾಣದ ನೀರನ್ನು ಹಂಚಿಕೆ ಮಾಡುವಂತೆ ಕೋರಿವೆ.

5.9    ಮಹಾದಾಯಿ ಜಲ ವಿವಾದಗಳ ನ್ಯಾಯಾಧಿಕರಣವು ತನ್ನ ಅಂತಿಮ ನಿರ್ಧಾರ / ಆದೇಶವನ್ನು ದಿನಾಂಕ: 14.08.2018 ರಂದು ನೀಡಿದೆ. 75% ಅವಲಂಬನೆಯಲ್ಲಿ ಮಹದಾಯಿ ನದಿ ಕಣಿವೆಯ ಇಳುವರಿಯು 188.06 ಟಿ.ಎಂ.ಸಿ. ಎಂದು ನ್ಯಾಯಾಧಿಕರಣವು ತೀರ್ಮಾನಿಸಿದೆ ನ್ಯಾಯಾಧಿಕರಣವು ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಿದೆ: 

 1. ಕರ್ನಾಟಕ -      13.42 ಟಿ.ಎಂ.ಸಿ
 2. ಗೋವಾ -      24.00 ಟಿ.ಎಂ.ಸಿ

(ಅಸ್ತಿತ್ವದಲ್ಲಿರುವ 9.395 ಟಿ.ಎಂ.ಸಿಯ.

ಬಳಕೆಗಿಂತ ಮೇಲೆ)

 1. ಮಹಾರಾಷ್ಟ್ರ - 1.33 ಟಿ.ಎಂ.ಸಿ

 

 

5.10    ಕರ್ನಾಟಕದ ಬೇಡಿಕೆಗಳು ಮತ್ತು ನ್ಯಾಯಾಧಿಕರಣ ಮಾಡಿದ ಹಂಚಿಕೆಗಳು ಈ ಕೆಳಗಿನಂತಿವೆ: 

 

ಯೋಜನೆಗಳ ವಿವರಗಳು

ಕ್ಲೇಮು

(ಟಿ.ಎಂ.ಸಿ.ಗಳಲ್ಲಿ)

ನ್ಯಾಯಾಧಿಕರಣದ ಹಂಚಿಕೆ

(ಟಿ.ಎಂ.ಸಿ.ಗಳಲ್ಲಿ)

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಮತ್ತು ಮಾರ್ಗ ಮಧ್ಯದ ಪಟ್ಟಣಗಳು ಮತ್ತು ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳಿಗಾಗಿ ಕಳಸಾ-ಭಂಡೂರಿ ಯೋಜನೆಯಿಂದ ಮಲಪ್ರಭಾ ಅಣೆಕಟ್ಟೆಗೆ ತಿರುವುಗೊಳಿಸುವುದು.

 

ಕಳಸಾ ನಾಲಾ-3.56

 

ಬಂಡೂರ ನಾಲಾ-4.00

 

 

1.72

 

 

2.18

ಕೆ.ಹೆಚ್.ಇ.ಪಿ.ಅಡಿಯಲ್ಲಿ ವಿದ್ಯುತ್ ಉತ್ಪಾದನೆಗೆ ಹರಿವನ್ನು ಹೆಚ್ಚಿಸಲು ಕಾಳಿ ನದಿಗೆ ತಿರುವುಗೊಳಿಸುವುದು.

 

5.527

 

-

ಜಲಾನಯನ ಪ್ರದೇಶದಲ್ಲಿ ನೀರಾವರಿ ಮತ್ತು ನೀರು ಸರಬರಾಜಿಗಾಗಿ.

1.50

1.50

 

ವಿದ್ಯುತ್ ಉತ್ಪಾದನೆಗೆ ಎಂ.ಹೆಚ್.ಇ.ಪಿ

14.971 (Including evaporation loss of 0.40)

 

 

8.02

ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಬಳಕೆಗಾಗಿ ಪ್ರಸ್ತಾವಿತ ಕೊಟ್ನಿ ಅಣೆಕಟ್ಟು ಸ್ಥಳದಲ್ಲಿ ಮಹದಾಯಿ ಜಲಾನಯನ ಪ್ರದೇಶದಲ್ಲಿ 75% ಅವಲಂಬನೆಯಲ್ಲಿ ಲಭ್ಯವಿರುವ 7.00 ಟಿ.ಎಂ.ಸಿ ಹೆಚ್ಚುವರಿ ನೀರಿನ ಬಳಕೆಗಾಗಿ ಹೆಚ್ಚುವರಿ ಯೋಜಿತ ಬಳಕೆಗಾಗಿ ರೂಪಿಸಿ, ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ಮುಂದೆ (ಪ್ರಸ್ತಾಪಿಸಿರುವ) ಯೋಜನೆಗಳು ಈ ಕೆಳಗಿನಂತಿವೆ:

 

1.    ಏತ ನೀರಾವರಿ ಯೋಜನೆಗಳಿಂದ ರಾಮದುರ್ಗ, ಸೌಂದತ್ತಿ ಮತ್ತು ಬೈಲಹೊಂಗಲ ತಾಲ್ಲೂಕುಗಳ ಡಿಪಿಎಪಿ ಪ್ರದೇಶಗಳಲ್ಲಿ ನೀರಾವರಿ ಒದಗಿಸಲು.

 

 

 

2.00

 

 

 

 

 

 

 

 

 

3.00

 

 

 

 

 

-

 

 

 

 

 

 

 

 

 

-

2.    ರಾಮದುರ್ಗ, ಸೌಂದತ್ತಿ ಮತ್ತು ಬೈಲಹೊಂಗಲ ತಾಲ್ಲೂಕುಗಳ ಡಿಪಿಎಪಿ ಪ್ರದೇಶಗಳಲ್ಲಿ ಅಂತರ್ಜಲವನ್ನು ಪುನಃ ಭರ್ತಿ ಮಾಡುವ ಮೂಲಕ ಕುಡಿಯುವ ನೀರು ಮತ್ತು ನೀರಾವರಿಗಾಗಿ.

 

 

 

2.00

 

 

 

-

3.    ಮಲಪ್ರಭಾ ಅಚ್ಚುಕಟ್ಟಿಗೆ ಮೂಲ ಯೋಜಿಸಿದಂತೆ ಸಾಕಷ್ಟು ನೀರು ದೊರೆಯದ ಪ್ರದೇಶಕ್ಕೆ

2.00

-

ಒಟ್ಟು:-

36.558

13.42

                       

5.11    ರಾಜ್ಯಕ್ಕೆ ನಿಗದಿಪಡಿಸಿದ 13.42 ಟಿ.ಎಂ.ಸಿ. ಯಲ್ಲಿ 5.4 ಟಿ.ಎಂ.ಸಿ. Consumptive ಬಳಕೆಗಾಗಿ ಮತ್ತು 8.02 ಟಿ.ಎಂ.ಸಿ. ಬಳಕೆಯಾಗದ ನೀರೆಂದು (Non-consumptive ಬಳಕೆಗಾಗಿ) ನಿರ್ಣಯಿಸಲ್ಪಟ್ಟಿದೆ.

5.12    31-08-2048ರ ನಂತರ ಯಾವುದೇ ಸಮಯದಲ್ಲಿ ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಧಿಕರಣವು ಪರಿಶೀಲಿಸುವ ಅಥವಾ ಪರಿಷ್ಕರಿಸುವ ಅವಕಾಶವನ್ನು ನ್ಯಾಯಾಧಿಕರಣವು ಕಲ್ಪಿಸಿದೆ.

5.13    ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು 14.08.2018 ರ ನ್ಯಾಯಾಧಿಕರಣದ ಆದೇಶದ ವಿರುದ್ಧ ತಮ್ಮ ತಮ್ಮ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಿವೆ ಹಾಗೂ ವಿಚಾರಣೆಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿವೆ.

5.14    ದಿನಾಂಕ: 30.04.2008 ಮತ್ತು 27.08.2008 ರ ಸುಪ್ರೀಂ ಕೋರ್ಟ್ ಆದೇಶಗಳಿಗೆ ಸಂಬಂಧಿಸಿದಂತೆ ಗೋವಾ ರಾಜ್ಯವು ಮೂಲದಾವೆ ಸಂಖ್ಯೆ 4/2006 ರಡಿ ಕರ್ನಾಟಕದ ವಿರುದ್ದ ನಿಂದನಾ ಅರ್ಜಿ (Contempt Petition No-2113/2018) ಯನ್ನು ಸಲ್ಲಿಸಿದೆ.

5.15    ಗೌರವಾನ್ವಿತ ನ್ಯಾಯಾಧಿಕರಣವು ಅಂಗೀಕರಿಸಿರುವ ದಿನಾಂಕ: 17.04.2014 ಆದೇಶದ ಉಲ್ಲಂಘನೆಯಾಗಿದೆ ಎಂದು ಆರೋಪಿಸುತ್ತಾ, ಕರ್ನಾಟಕದ ವಿರುದ್ಧ ಅವಿಧೇಯತೆಯ ಕುರಿತು ಕ್ರಮ ತೆಗೆದುಕೊಳ್ಳಲು ಕೋರಿ ಗೋವಾ ರಾಜ್ಯವು  ದಿನಾಂಕ: 18.08.2018 ರಂದು ಕರ್ನಾಟಕ ರಾಜ್ಯದ ವಿರುದ್ಧ ಮಧ್ಯಂತರ ಅರ್ಜಿಯನ್ನು (I.A.No-1/2018) ನ್ಯಾಯಾಧಿಕರಣದ ಮುಂದೆ ದಾಖಲಿಸಿದೆ.

5.16    ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ಮುಂದೆ ಕಣಿವೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ಅಂತರ ರಾಜ್ಯ ಜಲ ವಿವಾದ ಕಾಯ್ದೆ 1956ರ, ಸೆಕ್ಷನ್ 5(3)ರ ಅಡಿಯಲ್ಲಿ ನ್ಯಾಯಾಧಿಕರಣದ ಆದೇಶಗಳ ಬಗ್ಗೆ ಸ್ಪಷ್ಟೀಕರಣ, ವಿವರಣೆ ಮತ್ತು ಮಾರ್ಗದರ್ಶನಕ್ಕಾಗಿ ಅರ್ಜಿಗಳನ್ನು ದಾಖಲಿಸಿವೆ.

5.17    ಗೋವಾ ರಾಜ್ಯವು ದಾಖಲಿಸಿರುವ ಮಧ್ಯಂತರ ಅರ್ಜಿ (I.A-1/2018) ಯ ವಿಚಾರಣೆಯು ದಿನಾಂಕ:09.05.2019 ರಂದು ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ಮುಂದೆ ನಡೆಯಿತು. ಕಣಿವೆ ರಾಜ್ಯಗಳ ಹಿರಿಯ ವಕೀಲರು ಜಂಟಿಯಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನಾ ಅರ್ಜಿ ಸಂಖ್ಯೆ: 2113/2018 ಇತ್ಯರ್ಥವಾಗುವವರೆಗೆ ಸದರಿ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕೆಂದು ಕೋರಿದ್ದರು. ಅದರಂತೆ ಮಧ್ಯಂತರ ಅರ್ಜಿ (I.A.No-1/2018) ಯ ವಿಚಾರಣೆಯನ್ನು ನ್ಯಾಯಾಧಿಕರಣವು ಮುಂದೂಡಿದೆ.

5.18    ದಿನಾಂಕ: 20.02.2020 ರಂದು ನ್ಯಾಯಾಧಿಕರಣದ ಆದೇಶದ ವರದಿ ಗೆಜೆಟ್ ನಲ್ಲಿ  ಪ್ರಕಟಿಸುವ ಬಗ್ಗೆ ಕೋರಿ ರಾಜ್ಯವು ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸವೋಚ್ಛ ನ್ಯಾಯಾಲಯವು ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ತೀರ್ಪು/ವರದಿಯನ್ನು ಗೆಜೆಟ್ ನಲ್ಲಿ ಪ್ರಕಟಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿರುತ್ತದೆ.  ಅದರಂತೆ, ಕೇಂದ್ರ ಸರ್ಕಾರವು ದಿನಾಂಕ: 27.02.2020 ರಂದು ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ಆದೇಶವನ್ನು ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಿರುತ್ತದೆ.

5.19    ಕರ್ನಾಟಕ ರಾಜ್ಯವು ಮಹದಾಯಿ ಜಲ ವಿವಾದ ನ್ಯಾಯಾಧಿಕರಣವು ನೀಡಿರುವ ಆದೇಶವನ್ನು ಉಲ್ಲಂಘಿಸಿ ಮಹದಾಯಿ ನದಿ ನೀರನ್ನು ತಿರುವುಗೊಳಿಸುತ್ತಿದೆ ಎಂದು ಗೋವಾ ರಾಜ್ಯವು ಆರೋಪಿಸಿರುತ್ತದೆ ಹಾಗೂ ಸರ್ವೋಚ್ಛ ನ್ಯಾಯಾಲಯದ ಮುಂದೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿವಾದಿಯನ್ನಾಗಿಸಿ ವಿಶೇಷ ಮೇಲ್ಮನವಿ ಅರ್ಜಿ ಸಂಖ್ಯೆ: 19312/2019 ಅಡಿಯಲ್ಲಿ ನಿಂದನಾ ಅರ್ಜಿ ಸಂಖ್ಯೆ: 724/2020 ಯನ್ನು ಸಲ್ಲಿಸಿರುತ್ತದೆ.

5.20    ದಿನಾಂಕ 22.02.2021 ರಂದು ನಿಂದನಾ ಅರ್ಜಿ ಸಂಖ್ಯೆ: 724/2020 ಇತರೆ ವಿಶೇಷ ಮೇಲ್ಮನವಿ ಅರ್ಜಿಗಳೊಂದಿಗೆ ಸರ್ವೋಚ್ಛ ನ್ಯಾಯಾಲಯದ ಮುಂದೆ ವಿಚಾರಣೆಗಾಗಿ ಬಂದಾಗ, ಈಗಾಗಲೇ ಮುಚ್ಚಿರುವ ಕಿಂಡಿಗಳಲ್ಲಿ ಬಿರುಕುಗಳೇನಾದರು ಮತ್ತೆ ಮರುಕಳಿಸಿವೆಯೇ ಎಂದು ತಜ್ಞರ ಮೌಲ್ಯಮಾಪನ ವರದಿ ಪಡೆಯಲು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮಹದಾಯಿ ಕಣಿವೆ ರಾಜ್ಯಗಳಾದ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಅಧೀಕ್ಷಕ ಇಂಜಿನಿಯರ್ ಗಳನ್ನೊಳಗೊಂಡ ಜಂಟಿ ಪರಿವೀಕ್ಷಣ ತಂಡವನ್ನು ರಚಿಸಿ ಸ್ಥಳ ಪರಿವೀಕ್ಷಣೆಯನ್ನು ನಡೆಸಿ ವರದಿ ಸಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲಯವು ಆದೇಶಿಸಿರುತ್ತದೆ. ಇದಲ್ಲದೆ, ಕಲಾಪಗಳ ಅಂತಿಮ ಇತ್ಯರ್ಥಕ್ಕಾಗಿ ಅನುಕೂಲವಾಗಲು ಲಿಖಿತ ಸಲ್ಲಿಕೆ (written submission) ಸಲ್ಲಿಸಲು ಸರ್ವೋಚ್ಛ ನ್ಯಾಯಾಲಯವು  ಆದೇಶಿಸಿದೆ.

5.21     ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜಂಟಿ ಪರಿವೀಕ್ಷಣ ತಂಡದ ಸದಸ್ಯರುಗಳು ಸ್ಥಳ ಪರಿವೀಕ್ಷಣೆ ಮಾಡಿ ನೀಡಿರುವ ವರದಿಗಳನ್ನು ಸರ್ವೋಚ್ಛ ನ್ಯಾಯಾಲಯದ ಮುಂದೆ ಸಲ್ಲಿಸಿವೆ.  ಗೋವಾ ರಾಜ್ಯದ ಶ್ರೀ ಎಂ.ಕೆ. ಪ್ರಸಾದ್, ಜಂಟಿ ಪರೀವೀಕ್ಷಣ ತಂಡದ ಸದಸ್ಯರು ಸಲ್ಲಿಸಿರುವ ವರದಿಗೆ ಕರ್ನಾಟಕ ರಾಜ್ಯವು ಉತ್ತರಗಳನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಮುಂದೆ ಸಲ್ಲಿಸಿದೆ.

5.22    ದಿನಾಂಕ 12.07.2021 ರಂದು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಮುಂದೆ ರಾಜ್ಯದ ಪರವಾಗಿ ವಿಶೇಷ ಮೇಲ್ಮನವಿ ಅರ್ಜಿ ಸಂಖ್ಯೆ: 33018/2018ರ ಅಡಿ ಲಿಖಿತ ಸಲ್ಲಿಕೆಗಳನ್ನು (written submissions) ಸಲ್ಲಿಸಿದೆ.

5.23     ಮೇಲ್ಮನವಿ ಅರ್ಜಿಗಳು ಹಾಗೂ ನಿಂದನಾ ಅರ್ಜಿಗಳ ವಿಚಾರಣೆಯು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಮುಂದೆ ಬಾಕಿ ಇರುತ್ತದೆ.  

III.       ಗೋದಾವರಿ ಜಲ ವಿವಾದಗಳು:

6.1       ಗೋದಾವರಿ ನ್ಯಾಯಾಧಿಕರಣವು ತನ್ನ ವರದಿಯನ್ನು ಅಂತರ ರಾಜ್ಯ ಜಲ ವಿವಾದ ಕಾಯ್ದೆಯ ಸೆ.5(2) ರಡಿ 02.11.1979 ರಲ್ಲಿ ಹಾಗೂ ಕಾಯ್ದೆಯ ಸೆ.5(3) ರಡಿ ಮುಂದುವರೆದ ವರದಿಯನ್ನು 07.07.1980 ರಲ್ಲಿ ನೀಡಿತು. ಕಣಿವೆ ರಾಜ್ಯಗಳ ನಡುವಿನ ಒಪ್ಪಂದಗಳ ಆಧಾರದ ಮೇಲೆ ನ್ಯಾಯಾಧಿಕರಣವು ತನ್ನ ತೀರ್ಪಿನ ವರದಿಯನ್ನು ನೀಡಿದೆ. ಕರ್ನಾಟಕದ ಗೋದಾವರಿ ಕೊಳ್ಳದ ಮಾಂಜ್ರಾ ಉಪಕೊಳ್ಳದಲ್ಲಿ ಕರ್ನಾಟಕವು 22.37 ಟಿಎಂಸಿ ನೀರನ್ನು ಬಳಸಲು ವರದಿಯಲ್ಲಿ ಅನುಮತಿಸಲಾಗಿದೆ. ಕರ್ನಾಟಕ ಸರ್ಕಾರವು 22.37 ಟಿಎಂಸಿ ನೀರನ್ನು ಸಂಪೂರ್ಣವಾಗಿ ಬಳಸಲು ಯೋಜನೆಗಳನ್ನು ಕೈಗೆತ್ತಿಕೊಂಡಿರುತ್ತದೆ.

6.2       ಆಂಧ್ರ ಪ್ರದೇಶದ ಗೋದಾವರಿ ಕೊಳ್ಳದ ಪೊಲ್ಲಾವರಂ ಯೋಜನೆಯಿಂದ ಕೃಷ್ಣಾ ಕೊಳ್ಳಕ್ಕೆ ತಿರುವುಗೊಳಿಸುವ 80 ಟಿಎಂಸಿ. ನೀರಿನ ಹಂಚಿಕೆ ಕುರಿತು                        ದಿನಾಂಕ:04.08.1978 ರಂದು ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳು ಒಪ್ಪಂದ ಮಾಡಿಕೊಂಡಿವೆ. ತಿರುವುಗೊಳಿಸುವ 80 ಟಿಎಂಸಿ. ನೀರಿನಲ್ಲಿ ಕರ್ನಾಟಕ ರಾಜ್ಯದ ಪಾಲಿನ 21 ಟಿಎಂಸಿ ಯಷ್ಟು ನೀರನ್ನು ರಾಜ್ಯದ ಕೃಷ್ಣಾ ಕೊಳ್ಳದಲ್ಲಿ ಕೃ.ಜ.ವಿ.ನ್ಯಾ–I ರ ಹಂಚಿಕೆಗೆ ಹೆಚ್ಚುವರಿಯಾಗಿ ಬಳಸಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರವು ಪೊಲ್ಲಾವರಂ ಯೋಜನೆಗೆ ಯೋಜನಾ ಆಯೋಗದ ಹೂಡಿಕೆ ತೀರುವಳಿ ಸೇರಿದಂತೆ ಎಲ್ಲಾ ತೀರುವಳಿಗಳನ್ನು ನೀಡಿರುತ್ತದೆ ಹಾಗೂ ಸದರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಿದೆ.

6.3       ಪೊಲ್ಲಾವರಂ ಯೋಜನೆಯ ಹಿನ್ನೀರಿನಲ್ಲಿ ಒರಿಸ್ಸಾ ಪ್ರಾಂತ್ಯದ ಕೆಲವು ಭಾಗಗಳು ಮುಳುಗಡೆಯಾಗುವುದನ್ನು ಒಳಗೊಂಡಿರುತ್ತದೆ. ಒರಿಸ್ಸಾ ಪ್ರಾಂತ್ಯದ ಕೆಲವು ಭಾಗಗಳು ಮುಳುಗಡೆಯಾಗುವುದರಿಂದ ಕೇಂದ್ರ ಸರ್ಕಾರವು ಪೊಲ್ಲಾವರಂ ಯೋಜನೆಗೆ ನೀಡಿರುವ ತೀರುವಳಿಯನ್ನು ಅಮಾನತ್ತಿನಲ್ಲಿಡುವಂತೆ ಕೋರಿ ಒರಿಸ್ಸಾ ರಾಜ್ಯವು ಸರ್ವೋಚ್ಛ ನ್ಯಾಯಾಲಯದ ಮುಂದೆ ಮೂಲ ದಾವೆಯನ್ನು (ಓ.ಎಸ್.4/2007) ಅನ್ನು ದಾಖಲಿಸಿದೆ. ಒರಿಸ್ಸಾ ರಾಜ್ಯದ ಪ್ರದೇಶವು ಮುಳುಗಡೆಯಾಗುವುದನ್ನು ಹೊಸದಾಗಿ ನಿರ್ಧರಿಸಲು, ಗರಿಷ್ಠ ಪ್ರವಾಹ ಹಾಗೂ ಸ್ಪಿಲ್ ವೇ ಮಟ್ಟವನ್ನು ಹೊಸದಾಗಿ ನಿರ್ಧರಿಸುವ ಕುರಿತಾದ ವಿವಾದವಾಗಿದೆ. ಕನಾಟಕ ರಾಜ್ಯವನ್ನು ಸದರಿ ದಾವೆಯಲ್ಲಿ ಕಕ್ಷಿದಾರನನ್ನಾಗಿ ಸೇರಿಸಲಾಯಿತು. ಸರ್ವೋಚ್ಛ ನ್ಯಾಯಾಲಯದ ಅದೇಶ 30.09.2016 ರಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ಕಣಿವೆ ರಾಜ್ಯಗಳಾಗಿ ಸೇರಿಸಲಾಯಿತು ಹಾಗೂ ಆಂಧ್ರ ಪ್ರದೇಶ ಪುನಸ್ಸಂಘಟನೆಯ ನಂತರ ತೆಲಂಗಾಣ ರಾಜ್ಯವನ್ನು ಸಹ ದಾವೆಯಲ್ಲಿ ಕಕ್ಷಿದಾರನನ್ನಾಗಿ ಸೇರಿಸಲಾಯಿತು. ಸರ್ವೋಚ್ಛ ನ್ಯಾಯಾಲಯದ ಕಲಾಪಗಳು ಪ್ರಗತಿಯಲ್ಲಿವೆ.

6.4       ಪೊಲ್ಲಾವರಂ ಯೋಜನೆಯಿಂದಾಗಿ 100 ಕ್ಕೂ ಹೆಚ್ಚು ಹಳ್ಳಿಗಳು ಮತ್ತು ಪಾರಂಪರಿಕ ಸ್ಥಳಗಳು ಮುಳುಗಡೆ ಹೊಂದುವ ಕುರಿತಾಗಿ ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ ಪ್ರಕಾರ ಮುಳುಗಡೆ ಹೊಂದುವ ಬಾಧಿತ ಪ್ರದೇಶಗಳಲ್ಲಿ ಜನರ ಅಭಿಪ್ರಾಯ ಪಡೆಯುವಂತೆ ಕೋರಿ ತೆಲಂಗಾಣ ರಾಜ್ಯವು ದಿನಾಂಕ: 25.02.2019 ರಂದು ಸರ್ವೋಚ್ಛ ನ್ಯಾಯಾಲಯದ ಮುಂದೆ ಮೂಲ ದಾವೆ ಸಂಖ್ಯೆ: 1/2019 ನ್ನು ದಾಖಲಿಸಿರುತ್ತದೆ.

 

 1. ಉತ್ತರ ಪೆನ್ನಾರ್ ಜಲ ವಿವಾದಗಳು:

            (ಮೂಲದಾವೆ ಸಂಖ್ಯೆ 5/2003– ಆಂಧ್ರ ಪ್ರದೇಶ ರಾಜ್ಯವು ದಿನಾಂಕ 14.05.2003 ರಂದು ದಾಖಲಿಸಿರುತ್ತದೆ) :

7.1       ಉತ್ತರ ಪೆನ್ನಾರ್ ನದಿ ಕಣಿವೆಯಲ್ಲಿ ಕರ್ನಾಟಕ ರಾಜ್ಯವು ಕೈಗೆತ್ತಿಕೊಂಡಿರುವ ಪರಗೋಡು ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಇತರೆ ಸಣ್ಣ ನೀರಾವರಿ ಯೋಜನೆಗಳ ವಿರುದ್ಧ ಆಂಧ್ರ ಪ್ರದೇಶ ರಾಜ್ಯವು ಸರ್ವೋಚ್ಛ ನ್ಯಾಯಾಲಯದ ಮುಂದೆ ಮೂಲದಾವೆ ಸಂಖ್ಯೆ 5/2003 ಅನ್ನು ದಾಖಲಿಸಿರುತ್ತದೆ. ಸದರಿ ಯೋಜನೆಗಳನ್ನು ರಾಜ್ಯವು ಕೈಗೊಳ್ಳದಂತೆ ಹಾಗೂ ನೀರನ್ನು ಶೇಖರಿಸದಂತೆ ತಡೆಯಾಜ್ಞೆ ನೀಡುವಂತೆ ಕೋರಿರುತ್ತದೆ. ಅಂತರ ರಾಜ್ಯ ಜಲ ವಿವಾದ ಕಾಯ್ದೆ 1956 ರಂತೆ ಜಲ ವಿವಾದಗಳ ಇತ್ಯರ್ಥ/ತೀರ್ಪಿಗಾಗಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಹ ಕೋರಿದೆ. ಸರ್ವೋಚ್ಛ ನ್ಯಾಯಾಲಯವು ಸದರಿ ವಿಷಯವನ್ನು ನ್ಯಾಯಾಧಿಕರಣಕ್ಕೆ ವಹಿಸದೆ ತೀರ್ಪು ನೀಡಲು ನಿರ್ಧರಿಸಿತು. ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಸಾಕ್ಷಿದಾರರ ಪಾಟೀಸವಾಲು ಪೂರ್ಣಗೊಂಡಿದೆ.

7.2       ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ ದಿನಾಂಕ: 28.09.2022 ರಂತೆ , ಸದರಿ ಮೂಲ ದಾವೆಯ ಸಂ. 5/2003 ವಿಲೇವಾರಿಯಾಗಿರುತ್ತದೆ.

* * *

 

ಕಾವೇರಿ ಜಲ ವಿವಾದದ ಬಗ್ಗೆ ಟಿಪ್ಪಣಿ:

 • ಭಾರತ ಸರ್ಕಾರದ ಅಧಿಸೂಚನೆ ದಿನಾಂಕ06.1990 ರ ಮೂಲಕ ರಚಿಸಲಾದ ಕಾವೇರಿ ಜಲ ವಿವಾದ ನ್ಯಾಯಮಂಡಳಿಯು ತನ್ನ ಅಂತಿಮ ಆದೇಶವನ್ನು ದಿನಾಂಕ 05.02.2007 ರಂದು ನೀಡಿತು.
 • ಸರ್ವೋಚ್ಛ ನ್ಯಾಯಾಲಯದ ದಿನಾಂಕ02.2013 ಆದೇಶದನ್ವಯ ಕೇಂದ್ರ ಸರ್ಕಾರವು ನ್ಯಾಯ ಮಂಡಳಿಯ ಅಂತಿಮ ಆದೇಶವನ್ನು ದಿನಾಂಕ 19.02.2013ರಂದು ಗೆಜೆಟ್‍ನಲ್ಲಿ ಪ್ರಕಟಿಸಿತು.
 • ನ್ಯಾಯಮಂಡಳಿಯ ಅಂತಿಮ ಆದೇಶವನ್ನು ಪ್ರಶ್ನಿಸಿ ರಾಜ್ಯಗಳು ಸರ್ವೋಚ್ಛ ನ್ಯಾಯಾಲಯದ ಮುಂದೆ ವಿಶೇಷ ಅನುಮತಿ ಅರ್ಜಿಗಳನ್ನು (ಸಿವಿಲ್ ಅಪೀಲುಗಳಾಗಿ ಪರಿವರ್ತಿತ) ಸಲ್ಲಿಸಿದವು.
 • ಸರ್ವೋಚ್ಛ ನ್ಯಾಯಾಲಯವು ದಿನಾಂಕ02.2018 ರಂದು ತನ್ನ ತೀರ್ಪನ್ನು ನೀಡಿತು.
 • ಸರ್ವೋಚ್ಛ ನ್ಯಾಯಾಲಯವು ಕರ್ನಾಟಕಕ್ಕೆ ನೀಡಲಾಗಿದ್ದ 270 ಟಿ.ಎಂ.ಸಿ. ನೀರಿನ ಪ್ರಮಾಣವನ್ನು ಮಾರ್ಪಡಿಸಿ ಹೆಚ್ಚುವರಿಯಾಗಿ75 ಟಿ.ಎಂ.ಸಿ. ನೀರನ್ನು ನೀಡಿದೆ.
 • ಕೇಂದ್ರ ಸರ್ಕಾರವು ದಿನಾಂಕ07.2018 ರಂದು ಕಾವೇರಿ ನ್ಯಾಯಾಧಿಕರಣವನ್ನು ರದ್ದುಪಡಿಸಿ ಅಧಿಸೂಚನೆ ಹೊರಡಿಸಿತು.

 

ಇತ್ತೀಚಿನ ನವೀಕರಣ​ : 24-05-2023 03:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080