ಅಭಿಪ್ರಾಯ / ಸಲಹೆಗಳು

ಇಲಾಖೆಯ ಅಂಗಗಳು-ಎಸ್‌ ಪಿ ಎಮ್‌ ಯು

 

ರಾಜ್ಯ ಯೋಜನಾ ನಿರ್ವಹಣಾ ಘಟಕವು ವಿಶ್ವ ಬ್ಯಾಂಕ್ ಸಾಲದ ನೆರವಿನಿಂದ ಅಣೆಕಟ್ಟು ಪುನ:ಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಣೆಗಾಗಿ ಸ್ಥಾಪಿಸಿದ್ದು, ಇದರ ಆಡಳಿತಾತ್ಮಕ ನಿಯಂತ್ರಣವನ್ನು ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ಸರ್ಕಾರದ ಆದೇಶ ಸಂಖ್ಯೆ:WRD07DSP2014, ದಿ: 24.05.2015 ರಲ್ಲಿ ವಹಿಸಲಾಗಿರುತ್ತದೆ.

ಅಂದಿನಿಂದ ಈ ಘಟಕವು ಪ್ರಧಾನ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ.

ರಾಜ್ಯ ಯೋಜನಾ ನಿರ್ವಹಣಾ ಘಟಕದ ದೃಷ್ಟಿ, ಅಣೆಕಟ್ಟುಗಳು ಮತ್ತು ಅದರ ಸಲಕರಣೆಗಳ ದೀರ್ಘಾವಧಿಯ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ಯೋಜನೆಯ ಅಧಿಕಾರಿಗಳಿಂದ ಅನುಸರಣೆಗಳನ್ನು ಮೇಲ್ವಿಚಾರಣೆ ಮಾಡುವುದರ ಮೂಲಕ ಉತ್ತಮ ಕಾರ್ಯಾಚರಣೆ ಕಾರ್ಯಕ್ಷಮತೆಗಾಗಿ ಅಣೆಕಟ್ಟಿನ ಸುರಕ್ಷತಾ ಪರಿಶೀಲನಾತಜ್ಞರ ಸಮಿತಿ ಅವಲೋಕನಗಳಿಗಾಗಿ ಮತ್ತು ಸಾಂಸ್ಥಿಕ ಸಾಮರ್ಥ್ಯದ ಚಟುವಟಿಕೆಗಳನ್ನು ಸುಧಾರಿಸಲು/ಹೆಚ್ಚಿಸಲು ಮತ್ತು ಸಾಂಸ್ಥಿಕ ಬಲಪಡಿಸುವಿಕೆಗೆ ಸುಧಾರಿತ ಮೂಲ ಸೌಕರ್ಯವನ್ನು ಒದಗಿಸುವುದು.

ಇದನ್ನು ಸಾಧಿಸಲು, ಜಲಾಶಯ ಪುನರ್ವಸತಿ ಕಾಮಗಾರಿಗಳ ಸುಗಮವಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಕೇಂದ್ರ ಅಣೆಕಟ್ಟು, ವಿಶ್ವ ಬ್ಯಾಂಕ್ ಮತ್ತು ರಾಜ್ಯ ಯೋಜನಾ ಅಧಿಕಾರಿಗಳೊಂದಿಗೆ ರಾಜ್ಯ ಯೋಜನಾ ನಿರ್ವಹಣಾ ಘಟಕವು ಸಂಘಟಿಸುತ್ತದೆ. ಅಣೆಕಟ್ಟುಗಳ ನಿರ್ವಹಣೆಗೆ ಸಿಬ್ಬಂದಿಯ ಸಾಮರ್ಥ್ಯ ನಿರ್ಮಾಣಕ್ಕಾಗಿ ನಿಯತಕಾಲಿಕ ತರಬೇತಿ, ಕಾರ್ಯಾಗಾರಗಳು, ವಿಚಾರಗೋಷ್ಠಿಗಳನ್ನು ಆಯೋಜಿಸುತ್ತದೆ.

ಘಟಕದ ಉದ್ದೇಶಗಳು ಕೆಳಗಿನಂತಿವೆ:

 1. ಒಟ್ಟಾರೆ ಯೋಜನೆಯ ಯೋಜನೆ ನಿರ್ವಹಣೆ ಮತ್ತು ಸಹಕಾರ, ಉಸ್ತುವಾರಿ ಮತ್ತು ಮೌಲ್ಯಮಾಪನ.
 1. ಜಲಸಂಪನ್ಮೂಲ ಇಲಾಖೆ ಹಾಗೂ ಅನುಷ್ಠಾನ ಮಾಡುವ ಏಜೆನ್ಸಿಗಳಿಗೆ ತಾಂತ್ರಿಕ ನೆರವನ್ನು ಬೆಂಬಲಿಸುವುದು.
 1. ಆಯವ್ಯಯ ಯೋಜನೆ ಮತ್ತು ನಿಯಂತ್ರಣ.
 2. ಒಟ್ಟಾರೆ ಸಂಗ್ರಹಣೆ, ಆಡಳಿತ ಮತ್ತು ಮೇಲ್ವಿಚಾರಣೆ.
 3. ಪರಿಸರ ಮತ್ತು ಸಾಮಾಜಿಕ ನಿರ್ವಹಣಾ ಚೌಕಟ್ಟನ್ನು ತಯಾರಿಸುವ ಮೇಲ್ವಿಚಾರಣೆ.
 1. ತುರ್ತುಕ್ರಮ ಯೋಜನೆಗಳ ತಯಾರಿಕೆಯ ಮೇಲ್ವಿಚಾರಣೆ.
 2. ದೂರು ಮತ್ತುದೂರಿನ ನಿರ್ವಹಣೆ.
 3. ಕೇಂದ್ರ ಜಲ ಆಯೋಗ, ಜಲ ಸಂಪನ್ಮೂಲ ಇಲಾಖೆ, ವಿಶ್ವ ಬ್ಯಾಂಕ್, ಅನುಷ್ಠಾನ  ಮಾಡುವ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಸರ್ಕಾರಿ ಇಲಾಖೆಗಳು/ಸಂಸ್ಥೆಗಳು ಮತ್ತು ಸರ್ಕಾರೇತರ ಗುಂಪುಗಳೊಂದಿಗೆ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಜೊತೆಗಿನ ಸಂಬಂಧ ಕಾಪಾಡಿಕೊಳ್ಳುವುದು.

ರಾಜ್ಯ ಯೋಜನಾ ನಿರ್ವಹಣಾ ಘಟಕ ಯೋಜನೆಯ ಕಾರ್ಯ ಚಟುವಟಿಕೆಗಳು (ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆ):

ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಯಿಂದ(DRIP) ರಾಷ್ಟ್ರೀಯ ಮತ್ತು ರಾಜ್ಯಮಟ್ಟದಲ್ಲಿನ ಅಣೆಕಟ್ಟುಗಳ ದೀರ್ಘಾವಧಿ ಸುರಕ್ಷತೆ, ಉತ್ತಮ ಕಾರ್ಯನಿರ್ವಹಣೆ ಮತ್ತು ಸಂಸ್ಥೆಯ ಬಲವರ್ಧನೆ ಹೆಚ್ಚಿಸುವುದು ಉದ್ದೇಶವಾಗಿರುತ್ತದೆ.

ರಾಜ್ಯ ಸರ್ಕಾರವು ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ ರೂ.581.18 ಕೋಟಿಗಳಿಗೆ ಅನುಮೋದನೆಯನ್ನು ಸರ್ಕಾರಿ ಆದೇಶ ಸಂಖ್ಯೆ: WRD 16 DSP 2016, ಬೆಂಗಳೂರು, ದಿ: 29.05.2017 ರಲ್ಲಿ ನೀಡಿರುತ್ತದೆ.

ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ಇವರು ಅಣೆಕಟ್ಟುಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆಗೆ ಎರಡು ವರ್ಷಗಳ ಅವಧಿ ವಿಸ್ತರಣೆಯನ್ನು ಮಂಜೂರು ಮಾಡಿರುವ ಬಗ್ಗೆ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ, ಜಲ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವಾಲಯ ಇವರ ಪತ್ರ ಸಂಖ್ಯೆ: R 20011/11/2016-Pen.Riv, Dt:11.01.2018 ರನ್ವಯ ತಿಳಿಸಲಾಗಿರುತ್ತದೆ. ಇದರನ್ವಯ DRIP ಯೋಜನೆಯ ಅವಧಿಯು ಜೂನ್-2020ರ ಅಂತ್ಯಕ್ಕೆ ಪೂರ್ಣಗೊಳ್ಳುತ್ತದೆ.

ಜಸಂಇ ವಿಲೇವಾರಿ ಮಾಡಿದ ಪರಿಷ್ಕಕೃತ ಬಜೆಟ್ ವಿನಿಯೋಗ ಮೊತ್ತ ರೂ. 541.00 ರ ಕೋಟಿಗಳು.(ಶರಣಾಗತಿ ಮೊತ್ತ ರೂ.40.00 ಕೋಟಿಗಳು).ಇದರನ್ವಯ ಆಖIP ಯೋಜನೆಯ ಅವಧಿಯು ಮಾರ್ಚ್2021 ರ ಅಂತ್ಯಕ್ಕೆ ಪೂರ್ಣಗೊಳ್ಳುತ್ತದೆ.

ಮೇಲ್ಕಂಡ ಯೋಜನೆಯನ್ನು ಮೂರು ನೀರಾವರಿ ನಿಗಮಗಳಾದ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (KBJNL), ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL), ಕಾವೇರಿ ನೀರಾವರಿ ನಿಗಮ ನಿಯಮಿತ (CNNL) ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ.

ಅಣೆಕಟ್ಟುಗಳ ಪುನಶ್ಚೇತನ ಕಾಮಗಾರಿಗಳ (ಕಾಂಪೊನೆಂಟ್-1) ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಮೂರು ನಿಗಮಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ ಉಳಿದಂತೆ ಕಾಂಪೊನೆಂಟ್-2 ಮತ್ತು ಕಾಂಪೊನೆಂಟ್-3ಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ರಾಜ್ಯಯೋಜನಾ ನಿರ್ವಹಣಾ ಘಟಕಕ್ಕೆ ಹಣ ಬಿಡುಗಡೆ ಆಗುತ್ತದೆ. ಪ್ರತಿಯೊಂದು ಕಾಂಪೊನೆಂಟ್ ಅಡಿಯಲ್ಲಿ ಖರ್ಚಾಗುವ ಮೊತ್ತ ಪ್ರತಿ ತ್ರೈಮಾಸಿಕ ಅವಧಿಗೆ ಕ್ರೋಢೀಕರಿಸಿ IUಈಖ ಅನ್ನು ನೋಡಲ್ ಅಧಿಕಾರಿ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಇವರಿಂದ ಕೇಂದ್ರ ಜಲ ಆಯೋಗ ಮುಖಾಂತರ ವಿಶ್ವ ಬ್ಯಾಂಕ್‍ಗೆ ಮರು ಪಾವತಿಗಾಗಿ ಸಲ್ಲಿಸಲಾಗುತ್ತದೆ.

22 ಅಣೆಕಟ್ಟುಗಳ ಪುನಶ್ಚೇತನ ಕಾಮಗಾರಿಗಳ ಸ್ವರೂಪದ ಅನುಗುಣವಾಗಿ 43 ಪ್ಯಾಕೇಜ್‍ಗಳಂತೆ ವಿಂಗಡಿಸಲಾಗಿದೆ. ಈ ಪೈಕಿ 42 ಪ್ಯಾಕೇಜ್‍ಗಳ ಕಾಮಗಾರಿಗಳು ಈಗಾಗಲೇ ಭೌತಿಕ ಹಾಗೂ ಆರ್ಥಿಕವಾಗಿ ಪೂರ್ಣಗೊಂಡಿರುತ್ತದೆ. ಹಾಗೂ 2020-21ನೇ ಸಾಲಿನಲ್ಲಿ ಜೂನ್ 30.06.2021ರ ಅಂತ್ಯಕ್ಕೆ ರೂ.494.355 ಕೋಟಿಗಳಾಗುತ್ತದೆ ಹಾಗೂ ಯೋಜನೆಯು ದಿನಾಂಕ:30.06.2021 ರಂದು ಪೂರ್ಣಗೊಂಡಿದೆ.

ಕರ್ನಾಟಕ ರಾಜ್ಯ ಸರ್ಕಾರವು ವಿಶ್ವ ಬ್ಯಾಂಕ್ ಸಾಲದ ನೆರವಿನಿಂದ ಅಣೆಕಟ್ಟು ಪುನಶ್ಚೇತನ ಮತ್ತು ಅಭಿವೃದ್ಧಿ ಯೋಜನೆ ಹಂತ-2 ಮತ್ತು 3, ರೂ.1500.00 ಕೋಟಿಗಳಿಗೆ ಸರ್ಕಾರಿ ಆದೇಶ ಸಂಖ್ಯೆ: ಜಸಂಇ 15 ಡಿಎಸ್‍ಪಿ 2020 , ಬೆಂಗಳೂರು, ದಿನಾಂಕ:06.07.2021 ಅನುಮೋದನೆ ನೀಡಿದೆ.

 

ಇತ್ತೀಚಿನ ನವೀಕರಣ​ : 28-10-2021 12:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080