ಅಭಿಪ್ರಾಯ / ಸಲಹೆಗಳು

ಇಲಾಖೆಯ ಅಂಗಗಳು-ಕಾಡಾ

ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಕಾರ್ಯಕ್ರಮ:-

ಕೃಷಿಯು ಭಾರತ ದೇಶದ ಬೆನ್ನೆಲುಬು ಆಗಿದ್ದು, ದೇಶದ ಆರ್ಥಿಕ ಅಭಿವೃದ್ದಿಯ ಆಧಾರಸ್ತಂಭವಾಗಿದೆ. ಐದನೇ ಪಂಚವಾರ್ಷಿಕ ಯೋಜನೆ(1974-80) ಯ ಪ್ರಾರಂಭದಲ್ಲಿ ಭಾರತ ಸರ್ಕಾರದ ನೀತಿಯನ್ವಯ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದ್ದು, ಅದು ಭಾರಿ ಹಾಗೂ ಮಧ್ಯಮ ನೀರಾವರಿ ಅಚ್ಚುಕಟ್ಟು ಪ್ರದೇಶಗಳ ಸಂಯೋಜಿತ ಹಾಗೂ ಸಮಗ್ರೀಕೃತ ಅಭಿವೃದ್ದಿಯ ಉದ್ದೇಶವನ್ನು ಹೊಂದಿದೆ.1971ರ ರಾಷ್ಟ್ರೀಯ ನೀರಾವರಿ ಆಯೋಗ ಹಾಗೂ 1976ರ ರಾಷ್ಟ್ರೀಯ ಕೃಷಿ ಆಯೋಗಗಳ ಪ್ರಕಾರ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಕಾರ್ಯಕ್ರಮವು ಭಾರಿ ಹಾಗೂ ಮಧ್ಯಮ ನೀರಾವರಿ ಯೋಜನೆಯಲ್ಲಿನ ಲಭ್ಯವಿರುವ ನೀರಾವರಿ ಸೌಕರ್ಯವನ್ನು ತ್ವರಿತಗತಿಯಲ್ಲಿ ಸೂಕ್ತವಾದ ರೀತಿಯಲ್ಲಿ ಉಪಯೋಗ ಮಾಡುವ ಕಾರ್ಯಕೈಗೆತ್ತಿಕೊಂಡು ತನ್ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು  ಅನುಕೂಲ ಮಾಡಿದೆ. ಇದಲ್ಲದೆ, ಈ ಕಾರ್ಯಕ್ರಮದಡಿಯ ನೀರಾವರಿ ಸೌಲಭ್ಯದಿಂದ ಅಚ್ಚುಕಟ್ಟು ಪ್ರದೇಶ ಸೃಷ್ಟಿಸಿದ ನೀರಾವರಿ ಹಾಗೂ ನೀರಾವರಿಗೆ ಒಳಗಾದ ಪ್ರದೇಶಗಳ ನಡುವಿನ ಅಂತರ ತಗ್ಗಿಸುವ ಉದ್ದೇಶ ಹೊಂದಿದೆ.

 

ಧ್ಯೇಯೋದ್ದೇಶಗಳು:-

ನೀರು ನಿರ್ವಹಣೆಯು ಬಹುವಿಧಧ ಚಟುವಟಿಕೆಯಾಗಿದ್ದು,ಇದು ರಾಜ್ಯದ ಪ್ರಮುಖ ಇಲಾಖೆಗಳಾದ ಜಲಸಂಪನ್ಮೂಲ, ಕೃಷಿ, ಸಹಕಾರ ಮತ್ತು ಇನ್ನಿತರೆ ಸಂಘ ಸಂಸ್ಥೆಗಳ ತರಬೇತಿ ಹಾಗೂ ಸಂಶೋಧನಾ ಕಾರ್ಯಚಟುವಟಿಕೆಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರವನ್ನು 1970ರಲ್ಲಿ ಸೃಷ್ಟಿಸಿದ ಹಾಗೂ ಬಳಕೆಯಾದ ನೀರಾವರಿ ಸಾಮರ್ಥ್ಯದ ಅಂತರವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹಾಗೂ ವಿವಿಧ ಇಲಾಖೆಗಳ ಮಧ್ಯೆ ವೇಗವರ್ಧಕವಾಗಿ ಕೆಲಸ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇದಲ್ಲದೇ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಮುಖಾಂತರ ಪ್ರತಿ ಪ್ರಮಾಣದ ಜಲ ಹಾಗೂ ಭೂಮಿಯಿಂದ ಪಡೆಯಬಹುದಾದ ಉತ್ಪಾದನೆ ಹೆಚ್ಚಿಸುವುದು, ಹರಿಸುವ ನೀರಿನಲ್ಲಿ ಆಗುವ ಪೋಲನ್ನು ಕಡಿಮೆ ಮಾಡುವುದು, ಜಮೀನಿನ ಮಟ್ಟದಲ್ಲಿ ನೀರಿನ ಬಳಕೆ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ನೀರಾವರಿಯನ್ನು ಅಚ್ಚುಕಟ್ಟು ಪ್ರದೇಶದಲ್ಲಿ ಸಮನಾಗಿ ಹಂಚುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಧ್ಯೇಯೋದ್ಧೇಶಗಳು ಕೆಳಗಿನಂತಿವೆ.

 

 • ಅಚ್ಚುಕಟ್ಟು ಪ್ರದೇಶದ ಸಮಗ್ರ ಅಭಿವೃದ್ದಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅಳವಡಿಸುವುದು.
 • ಭೂಸವಕಳಿಯನ್ನು ಹಾಗೂ ಭೂಮಿಯಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದು.
 • ರೈತರ ಮುಖಾಂತರ ಅಚ್ಚುಕಟ್ಟು ಪ್ರದೇಶಗೊಳಗೆ ಕಾಲುವೆ ಹಾಗೂ ಬಸಿ ಕಾಲುವೆಗಳ ನಿರ್ವಹಣೆಯನ್ನು ಖಚಿತ ಪಡಿಸುವುದು
 • ಕೃಷಿಗೆ ಬೇಕಾದ ಎಲ್ಲಾ ಪರಿಕರಗಳನ್ನು ಹಾಗೂ ಸೇವೆಗಳನ್ನು ಒದಗಿಸುವುದು.
 • ಅಚ್ಚುಕಟ್ಟು ಪ್ರದೇಶದಲ್ಲಿ ಗ್ರಾಮೀಣ ಅಭಿವ್ರದ್ದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸಮಗ್ರ ಬೆಳವಣಿಗೆಯನ್ನು ಸಾಧಿಸುವುದು.
 • ಮಾರುಕಟ್ಟೆ ಸಂಸ್ಕರಣೆ ಹಾಗೂ ದಾಸ್ತಾನುಗಳಿಗೆ ಬೇಕಾಗುವ ಅವಶ್ಯಕ ಸಂಪರ್ಕ ವ್ಯವಸ್ಥೆಯನ್ನು ಒದಗಿಸುವ ಸೌಕರ್ಯಗಳನ್ನು ಅಭಿವೃದ್ದಿಪಡಿಸುವುದು.
 • ಕೃಷಿ ಚಟುವಟಿಕೆಗಳಿಗೆ ಸಹಕಾರ ಸಂಸ್ಥೆಗಳನ್ನು ಹಾಗೂ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸಂಘಟಿಸುವುದು.
 • ಜಮೀನುಗಳಲ್ಲಿ ಕಾಲುವೆ ಹಾಗೂ ಸಂಪರ್ಕಿತ ಬಸಿಕಾಲುವೆಗಳನ್ನು ನಿರ್ಮಿಸುವುದು.
 • ಮೇಲ್ಮೈ ಜಲ ಹಾಗೂ ಅಂತರ್ಜಲದ ಸಂಯೋಜಿತ ಬಳಕೆ.
 • ಕೃಷಿ ಪ್ರಾತ್ಯಕ್ಷಿಕೆಗಳನ್ನು ಹಾಗೂ ಉಳಿದ ವಿಸ್ತರಣಾ ಕಾರ್ಯಗಳನ್ನು ಕೈಗೊಳ್ಳುವುದು.

 ಕಾಡಾ ನಿರ್ದೇಶನಾಲಯ:

 

ಕಾಡಾ ನಿರ್ದೇಶನಾಲಯವು ವಿವಿಧ ಕಾಡಾಗಳ ಮತ್ತು ರಾಜ್ಯದ ನೀರು ಬಳಕೆದಾರರ ಸಹಕಾರ ಸಂಘಗಳ ಮಧ್ಯೆ ಪರಸ್ಪರ ಹೊಂದಾಣಿಕೆಯನ್ನು ಹೆಚ್ಚಿಸುವುದರ ಮೂಲಕ ಯೋಜಿತ ನೀರಾವರಿ ಸಾಮಥ್ರ್ಯ ಮತ್ತು ಸೃಷ್ಟಿಯಾದ ನೀರಾವರಿ ಸಾಮಥ್ರ್ಯದ ಅಂತರ ತಗ್ಗಿಸಲು ಕಾಡಾ ನಿರ್ದೇಶನಾಲಯವನ್ನು ಸರ್ಕಾರದ ಆದೇಶ ಸಂಖ್ಯೆ: ಜಸಂಇ 39 ಸಿಎಎಂ 2011 ದಿನಾಂಕ 17.11.2012 ರಂದು ಸ್ಥಾಪಿಸಲಾಯಿತು.

 

ಕರ್ನಾಟಕ ರಾಜ್ಯದಲ್ಲಿ ಈ ಕೆಳಕಂಡ 6 ಕಾಡಾಗಳನ್ನು ಸ್ಥಾಪಿಸಲಾಗಿದೆ:

 1. ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ, ಬೆಳಗಾವಿ
 2. ತುಂಗಭದ್ರಾ ಯೋಜನೆ, ಮುನಿರಾಬಾದ್
 3. ಕೃಷ್ಣಾ ಮೇಲ್ದಂಡೆ ಯೋಜನೆ, ಭೀಮರಾಯನಗುಡಿ
 4. ಕಾವೇರಿ ಜಲಾನಯನ ಯೋಜನೆ, ಮೈಸೂರು
 5. ಭದ್ರಾ ಜಲಾಶಯ ಯೋಜನೆ, ಶಿವಮೊಗ್ಗ
 6. ನೀರಾವರಿ ಯೋಜನಾ ವಲಯ, ಕಲಬುರಗಿ

 

ತುಂಗಭದ್ರಾ ಯೋಜನೆ, ಮುನಿರಾಬಾದ್:

ಕಾಡಾ ತುಂಗಭದ್ರಾ ಯೋಜನೆಯು 1974 ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಈ ಕಾಡಾ ವ್ಯಾ ಪ್ತಿಯಲ್ಲಿ ಒಟ್ಟಾರೆ 4,59,526 ಹೆಕ್ಟೇರ್ ಯೋಜಿತ ನೀರಾವರಿ ಸಾಮಥ್ರ್ಯವುಳ್ಳ ಪ್ರದೇಶದ 12 ನೀರಾವರಿ ಯೋಜನೆಗಳು ಬರುತ್ತವೆ.

 

ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು, ಬೆಳಗಾವಿ:

ಕಾಡಾ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು 1974ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಈ ಕಾಡಾ ವ್ಯಾಪ್ತಿಯಲ್ಲಿ ಒಟ್ಟಾರೆ 6,08,167 ಹೆಕ್ಟೇರ್ ಯೋಜಿತ ನೀರಾವರಿ ಸಾಮಥ್ರ್ಯವುಳ್ಳ ಪ್ರದೇಶದ 5 ನೀರಾವರಿ ಯೋಜನೆಗಳು ಬರುತ್ತವೆ.

 

ಕಾವೇರಿ ಜಲಾನಯನ ಯೋಜನೆಗಳು, ಮೈಸೂರು;

ಕಾಡಾ ಕಾವೇರಿ ಜಲಾನಯನ ಯೋಜನೆಗಳು 1974ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಈ ಕಾಡಾ ವ್ಯಾಪ್ತಿಯಲ್ಲಿ ಒಟ್ಟಾರೆ 6,78,172 ಹೆಕ್ಟೇರ್ ಯೋಜಿತ ನೀರಾವರಿ ಸಾಮಥ್ರ್ಯವುಳ್ಳ ಪ್ರದೇಶದ 53 ನೀರಾವರಿ ಯೋಜನೆಗಳು ಬರುತ್ತವೆ.

 

ಕೃಷ್ಣಾ ಮೇಲ್ದಂಡೆ ಯೋಜನೆಗಳು, ಭೀಮರಾಯನಗುಡಿ:

ಕೃಷ್ಣಾ ಮೇಲ್ದಂಡೆ ಯೋಜನೆಗಳು, ಪ್ರಾಧಿಕಾರವು 11.12.1979 ರಿಂದ ಜಾರಿಗೆ ಬಂದಿರುತ್ತದೆ. ಈ ಕಾಡಾ ವ್ಯಾಪ್ತಿಯಲ್ಲಿ ಒಟ್ಟಾರೆ 6,48,020 ಲಕ್ಷ ಹೆಕ್ಟೇರ್ ಯೋಜಿತ ನೀರಾವರಿ ಸಾಮಥ್ರ್ಯವುಳ್ಳ ಪ್ರದೇಶದ 2 ನೀರಾವರಿ ಯೋಜನೆಗಳು ಬರುತ್ತವೆ.

 

ಭದ್ರಾ ಯೋಜನೆ, ಶಿವಮೊಗ್ಗ:

ಕಾಡಾ, ಭದ್ರಾ ಯೋಜನೆ, ಶಿವಮೊಗ್ಗವು 1979ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಈ ಕಾಡಾ ವ್ಯಾಪ್ತಿಯಲ್ಲಿ ಒಟ್ಟಾರೆ 2,60,071 ಹೆಕ್ಟೇರ್ ಯೋಜಿತ ನೀರಾವರಿ ಸಾಮಥ್ರ್ಯವುಳ್ಳ ಪ್ರದೇಶದ 30 ನೀರಾವರಿ ಯೋಜನೆಗಳು ಬರುತ್ತವೆ.

 

ನೀರಾವರಿ ಯೋಜನಾ ವಲಯ, ಕಲಬುರಗಿ:

ಕಾಡಾ, ನೀರಾವರಿ ಯೋಜನಾ ವಲಯವು 2000-01ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಈ ಕಾಡಾ ವ್ಯಾಪ್ತಿಯಲ್ಲಿ ಒಟ್ಟಾರೆ 1,45,046 ಹೆಕ್ಟೇರ್ ಯೋಜಿತ ನೀರಾವರಿ ಸಾಮಥ್ರ್ಯವುಳ್ಳ ಪ್ರದೇಶದ 19 ನೀರಾವರಿ ಯೋಜನೆಗಳು ಬರುತ್ತವೆ.

 

ಕ್ರ.

ಸಂ.

ಕಾಡಾ ಪ್ರಾಧಿಕಾರದ ಹೆಸರು ಮತ್ತು ಕೇಂದ್ರಸ್ಥಾನ

ಸ್ಥಾಪನೆ ಗೊಂಡ

ವರ್ಷ

ಒಳಗೊಂಡ ಯೋಜನೆಗಳು

ಒಳಪಡುವ ಜಿಲ್ಲೆಗಳು

1

ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು, ಬೆಳಗಾವಿ

1974

ಮಲಪ್ರಭಾ, ಘಟಪ್ರಭಾ, ಹಿಪ್ಪರಗಿ ಯೋಜನೆ, ದೂದ್‍ಗಂಗಾ, ಶ್ರೀರಾಮೇಶ್ವರ ಏತ ನೀರಾವರಿ ಯೋಜನೆ

ಬೆಳಗಾವಿ, ಧಾರವಾಡ,

ಬಾಗಲಕೋಟೆ, ಗದಗ

2

ತುಂಗಭದ್ರಾ ಯೋಜನೆ, ಮುನಿರಾಬಾದ್

1979

ತುಂಗಭದ್ರಾ ಹಾಗೂ ರಾಯ ಮತ್ತು ಬಸವ ಕಾಲುವೆಗಳು, ವಿಜಯನಗರ ಕಾಲುವೆಗಳು, ನಾರಿಹಳ್ಳ, ಹಗರಿಬೊಮ್ಮನಹಳ್ಳಿ,  ಹಿರೇಹಳ್ಳ, ಮಸ್ಕಿನಾಲಾ, ಕನಕನಾಲಾ, ರಾಜೋಳಿ ಬಂಡಾ, ದರೋಜಿ ಕೆರೆ, ಸಿಂಗಟಾಲೂರು ಏತ ನೀರಾವರಿ ಯೋಜನೆ, ಕೆಂಚನಗುಡ್ಡ ಏತ ನೀರಾವರಿ ಯೋಜನೆ, ವೈ.ಕಗ್ಗಲ್ಲ ಏತ ನೀರಾವರಿ ಯೋಜನೆ.

ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ

3

ಕೃಷ್ಣ ಮೇಲ್ದಂಡೆ ಯೋಜನೆ,

ಭೀಮರಾಯನಗುಡಿ

1977

 

ಕೃಷ್ಣ ಮೇಲ್ದಂಡೆ

ಗುಲ್ಬರ್ಗಾ, ಬಿಜಾಪುರ, ರಾಯಚೂರು, ಬಾಗಲಕೋಟೆ, ಯಾದಗೀರ

4

ಕಾವೇರಿ ಜಲಾನಯನ ಯೋಜನೆಗಳು, ಮೈಸೂರು

1974

 

ನಾಲ್ಕು ಬೃಹತ್ ನೀರಾವರಿ ಯೋಜನೆಗಳು ಕೃಷ್ಣರಾಜಸಾಗರ (ಕೆ.ಆರ್.ಎಸ್), ಕಬಿನಿ, ಹಾರಂಗಿ ಮತ್ತು ಹೇಮಾವತಿ.

ಹದಿನೈದು ಮಧ್ಯಮ  ನೀರಾವರಿ ಯೋಜನೆಗಳು

ವರುಣಾ ನಾಲೆ (ಡಿ.ಡಿ.ಅರಸ್ ನಾಲೆ) ಉಡುತೊರೆಹಳ್ಳ, ಅರ್ಕಾವತಿ, ಹೆಚ್.ಡಿ.ದೇವೇಗೌಡ ಬ್ಯಾರೆಜ್(ಇಗ್ಗಲೂರು ಬ್ಯಾರೆಜ್), ಮಂಚನಬೆಲೆ ಜಲಾಶಯ ಯೋಜನೆ, ವಾಟೆಹೊಳೆ,  ಯಗಚಿ, ಚಿಕ್ಕಹೊಳೆ, ಚಿಕ್ಲಿಹೊಳೆ, ಸುವರ್ಣಾವತಿ, ನುಗು, ಕಣ್ವ, ತಾರಕ, ಗೂಂಡಾಲ್ ಮತ್ತು ಮಾರ್ಕೋನಹಳ್ಳಿ.

ಮೈಸೂರು, ಕೊಡಗು ಚಾಮರಾಜನಗರ, ಹಾಸನ, ಮಂಡ್ಯ, ತುಮಕೂರು, ರಾಮನಗರ

5

ಭದ್ರಾ ಯೋಜನೆಗಳು, ಶಿವಮೊಗ್ಗ

1979

ಭದ್ರಾ ಜಲಾಶಯ, ಜಂಬದಹಳ್ಳ, ಹೊದಿರಾಯನಹಳ್ಳ, ಭದ್ರಾ ಮೇಲ್ದಂಡೆ, ತುಂಗಾ ಆಣೆಕಟ್ಟು, ಗೊಂದಿ ಅಣೆಕಟ್ಟು, ಅಂಬ್ಲಿಗೊಳ, ಅಂಜನಾಪುರ, ಶರಾವತಿ, ತುಂಗಾ ಮೇಲ್ದಂಡೆ, ಗಾಯತ್ರಿ, ಭೀಮಸಮುದ್ರ, ವಾಣಿ ವಲಾಸ ಸಾಗರ, ರಾಣಿಕೆರೆ, ನಾರಾಯಣಪುರ, ಧರ್ಮಾ, ಬಸಾಪುರ ಲಿಫ್ಟ್, ಮದಗಮಾಸೂರು, ಇಟಗಿ ಸಾಸಲವಾಡ ಲಿಫ್ಟ್, ಕಾಳಿನದಿ, ಕಲ್ಲೂರು, ಶಾಲ್ಮಲ, ಬಾಚಣಿಕಿ, ವಾರಾಹಿ, ನೇತ್ರಾವತಿ, ಸ್ವರ್ಣ, ಗುರುಪುರ, ಮುಲ್ಕಿ, ನಾರಿಹೊಳೆ, ಪಾಯಸವಾನಿ

ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಹಾವೇರಿ, ದಕ್ಷಿಣ ಕನ್ನಡ, ಉಡುಪಿ

6

ನೀರಾವರಿ ಯೋಜನಾ ವಲಯ, ಕಲಬುರಗಿ

2000

ಬೆಣ್ಣೆತೊರಾ, ಚಂದ್ರಂಪಳ್ಳಿ, ಕೆಳದಂಡೆ ಮುಲ್ಲಾಮರಿ, ಅಮರ್ಜಾ, ಭೀಮಾ ಏತ ನೀರಾವರಿ, ಗಂಡೋರಿ ನಾಲಾ, ಕಾಗಿಣಾ, ಭೀಮಾ ಪ್ಲೋ, ಸೌದಾಗರ, ಹತ್ತಿಕುಣಿ, ಚುಳಕಿನಾಲಾ, ಕಾರಂಜಾ, ಅಪ್ಪರ ಮುಲ್ಲಾಮರಿ, ಮಂಜರಾ ಲಿಫ್ಟ್, ಅರೆಶಂಕರ, ರಾಮನಹಳ್ಳಿ, ನಾಗಠಾಣ, ಚಿತವಾಡಗಿ, ಕಳಸಾಕೊಪ್ಪಾ,

ಕಲಬುರಗಿ, ಬೀದರ್, ಯಾದಗಿರಿ, ಬಾಗಲಕೋಟೆ ಮತ್ತು ಬಿಜಾಪುರ

 

 

 

ಇತ್ತೀಚಿನ ನವೀಕರಣ​ : 03-01-2022 01:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080