ಅಭಿಪ್ರಾಯ / ಸಲಹೆಗಳು

ಇಲಾಖೆಯ ಅಂಗಗಳು-ಕೆ ಇ ಆರ್‌ ಎಸ್

ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ, ಕೃಷ್ಣರಾಜಸಾಗರ

                                   

 ನಿರ್ಧಿಷ್ಟ ಪಡಿಸಿದ ಗುರಿ, ಉದ್ದೇಶ ಹಾಗೂ ರಚನೆ.

            ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರವು 1944 ರಲ್ಲಿ ಒಂದು ಸಣ್ಣ ಸಂಶೋಧನಾ ಭಾಗವಾಗಿ ಪ್ರಾರಂಭವಾಗಿ ಈಗ ದೇಶದ ಒಂದು ಪ್ರಮುಖ ಸಂಶೋಧನಾ ಕೇಂದ್ರವಾಗಿ ಬೆಳೆದಿದೆ ಮತ್ತು ದೇಶದಲ್ಲಿರುವ ಇಪ್ಪತ್ತಕ್ಕಿಂತ ಹೆಚ್ಚಿನ ಘಟಕಗಳ ಪೈಕಿ ಹಳೆಯ ಹಾಗೂ ಹೆಸರಾಂತ ಸಂಶೋಧನಾ ಕೇಂದ್ರವೆಂದು ಪ್ರಖ್ಯಾತಿ ಪಡೆದಿದೆ.  ಸಂಶೋಧನಾ ಕೇಂದ್ರವು ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಒಂದು ಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ.

            ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಮೂಲೋದ್ದೇಶವು ಇಲಾಖೆಯ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನಿರ್ಮಾಣದಲ್ಲಿ ಎದುರಿಸಲಾಗುವ ಸಮಸ್ಯೆಗಳನ್ನು ವಿಶ್ಲೇಶಿಸಿ, ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕಂಡು ಹಿಡಿಯುವುದೇ ಆಗಿರುತ್ತದೆ. ಮುಖ್ಯ ಇಂಜಿನಿಯರ್ ದರ್ಜೆಯ ನಿರ್ದೇಶಕರು, ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

            ಸಂಶೋಧನಾ ಕೇಂದ್ರವು ತನ್ನ ಅಧೀನದಲ್ಲಿ ಕೆಳಕಂಡ 4 ವಿಭಾಗಗಳನ್ನು ಹೊಂದಿದ್ದು ಪ್ರತಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯಪಾಲಕ ಇಂಜಿನಿಯರ್ ದರ್ಜೆಯ ಮುಖ್ಯ ಸಂಶೋಧನಾಧಿಕಾರಿಯವರು ಕಾರ್ಯ ನಿರ್ವಹಿಸುತ್ತಿರುತ್ತಾರೆ.

 • ಜಲಶಾಸ್ತ್ರ ವಿಭಾಗ
 • ತಾಂತ್ರಿಕ ಸೇವಾ ವಿಭಾಗ
 • ಭೂಗುಣ ತಂತ್ರ ವಿಜ್ಞಾನ ಮತ್ತು ತಳಪಾಯ ಇಂಜಿನಿಯರಿಂಗ್ ವಿಭಾಗ
 • ಕರಾವಳಿ ಇಂಜಿನಿಯರಿಂಗ್ ವಿಭಾಗ

 

ಜಲಶಾಸ್ತ್ರ ವಿಭಾಗ:

            ಜಲಶಾಸ್ತ್ರ ವಿಭಾಗವು ನೀರಾವರಿ ಹಾಗೂ ಜಲ ವಿದ್ಯುತ್ ಯೋಜನೆಗಳ ಮಾದರಿ ಅಧ್ಯಯನ, ನೀರಿನ ಹರಿಯುವ ಸಾಮರ್ಥ್ಯವನ್ನು ಕಂಡುಹಿಡಿಯಲು ಮತ್ತು ನೀರಿನ ಗಣನೆಯನ್ನು ಗಣಕ ಯಂತ್ರದಲ್ಲಿ ವಿಶ್ಲೇಷಣೆ ಮಾಡುವುದು, ಜಲಾಶಯಗಳ ಮೆಕ್ಕಲು ಮತ್ತು ಮಡ್ಡಿ ಪರಿಶೀಲನಾ ಕಾರ್ಯ (ಸಾಂಪ್ರದಾಯಿಕ ಹೈಡ್ರೋಗ್ರಾಫಿಕ್ ಸರ್ವೆ ಹಾಗೂ ದೂರ ಸಂವೇದಿ ತಂತ್ರಜ್ಞಾನದ ಮುಖಾಂತರ), ನಾಲೆಗಳ ಗೇಜಿಂಗ್ ಕಾರ್ಯ ಹಾಗೂ ಕರೆಂಟ್ ಮೀಟರ್ ರೇಟಿಂಗ್ ಕಾರ್ಯಗಳನ್ನು ಕೈಗೊಳ್ಳುವ ಕಾರ್ಯಭಾರವನ್ನು ಹೊಂದಿದೆ.

ತಾಂತ್ರಿಕ ಸೇವಾ ವಿಭಾಗ:

            ತಾಂತ್ರಿಕ ಸೇವಾ ವಿಭಾಗವು ಸರ್ಕಾರಿ ಹಾಗೂ ಇನ್ನಿತರ ಸಂಸ್ಥೆಗಳಿಂದ ಬರುವ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್, ಸ್ಟೀಲ್, ಇಟ್ಟಿಗೆ, ಜೆಲ್ಲಿ, ಮರಳು, ಕಾಂಕ್ರೀಟ್ ಇವುಗಳ ಮೇಲೆ ಗುಣಮಟ್ಟದ ಪರೀಕ್ಷೆಗಳನ್ನು ನಡೆಸುವುದು, ನೀರು, ಸಿಮೆಂಟ್, ಗಾರೆ ಮತ್ತು ಕಾಂಕ್ರೀಟ್ ಗಳ ಮೇಲೆ ರಾಸಾಯನಿಕ ವಿಶ್ಲೇಷಣೆ, ದೈನಂದಿನ ಮಳೆಯ ಹಾಗೂ ಜಲಪವನಶಾಸ್ತ್ರೀಯ ವಿವರಗಳ ಸಂಗ್ರಹಣಾ ಕಾರ್ಯ,  ರಾಜ್ಯದ ಎಲ್ಲಾ ಬೃಹತ್ ಅಣೆಕಟ್ಟುಗಳ ವಿನ್ಯಾಸ ಪ್ರವಾಹ ಪರಿಷ್ಕರಣಾ ಅಧ್ಯಯನಗಳ ಜೊತೆಗೆ ಡ್ಯಾಮ್ ಬ್ರೇಕ್ ಅನಾಲಿಸಿಸ್ ಮತ್ತು ಇನಂಡೇಶನ್ ನಕ್ಷೆ  ತಯಾರಿಸುವ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಕಟ್ಟಡಗಳು, ವಸತಿಗೃಹಗಳ ನಿರ್ವಹಣಾ ಕಾರ್ಯ, ಗ್ರಂಥಾಲಯ ನಿರ್ವಹಣೆ ಇತ್ಯಾದಿ ಕೆಲಸಗಳ ಕಾರ್ಯಭಾರವನ್ನು ಹೊಂದಿದೆ.

ಭೂಗುಣ ತಂತ್ರ ವಿಜ್ಞಾನ ಮತ್ತು ತಳಪಾಯ ಇಂಜಿನಿಯರಿಂಗ್ ವಿಭಾಗ:

            ಈ ವಿಭಾಗದಲ್ಲಿ ತಳಪಾಯದ ಪರಿಶೀಲನೆ, ಏರಿಗಳಿಗೆ ಮಣ್ಣಿನ ಸೂಕ್ತತೆ, ಕಟ್ಟಡ ಮತ್ತು ಸೇತುವೆಗಳ ತಳಪಾಯದ ಪರಿಶೀಲನೆ, ಧಾರಣಾ ಸಾಮರ್ಥ್ಯದ ಪರೀಕ್ಷೆಗಳು ಹಾಗೂ ಸಣ್ಣ ನೀರಾವರಿ ಕೆರೆಗಳ ಮಣ್ಣಿನ ಮಾದರಿಗಳ ಪರೀಕ್ಷೆಗಳು ಇವೇ ಮುಂತಾದವುಗಳನ್ನು ನಡೆಸಲಾಗುತ್ತಿದೆ. ಕಲ್ಲುಗಳ ಗುಣ ವೈಶಿಷ್ಟ್ಯಗಳನ್ನು ಹಾಗೂ ಕಾಮಗಾರಿಗಳಿಗೆ ಅವುಗಳ ಸೂಕ್ತತೆಯ ಬಗ್ಗೆ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ವಿವಿಧ ಸರ್ಕಾರಿ ಹಾಗೂ ಇತರೆ ಸಂಸ್ಥೆಗಳಿಂದ ಉಲ್ಲೇಖಿಸಲ್ಪಡುವ ರಸ್ತೆಗೆ ಉಪಯೋಗಿಸುವ ಜೆಲ್ಲಿ, ಡಾಂಬರು ಮತ್ತು ಇತರೆ ವಸ್ತುಗಳ ಸೂಕ್ತತೆಯ ಬಗ್ಗೆ ಹಾಗೂ ರಸ್ತೆಗಳು ಅನುಪಯುಕ್ತವಾಗುವುದರ ಕಾರಣ ಹಾಗೂ ಅವುಗಳ ಪರಿಹಾರಗಳ ಬಗ್ಗೆ ಅಧ್ಯಯನಗಳನ್ನು ನಡೆಸಲಾಗುತ್ತದೆ. 

ಕರಾವಳಿ ಇಂಜಿನಿಯರಿಂಗ್ ವಿಭಾಗ:

            ಕರಾವಳಿ ಇಂಜಿನಿಯರಿಂಗ್ ವಿಭಾಗವು ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದ ಸಮುದ್ರ ಕೊರತದ ಬಗ್ಗೆ ಮಳೆಗಾಲದ ಪೂರ್ವ ಹಾಗೂ ನಂತರದ ಸರ್ವೆ ಮತ್ತು ಮಾನಿಟರಿಂಗ್ ಕಾರ್ಯ, ಪ್ರಗತಿಯಲ್ಲಿರುವ ಸಮುದ್ರ ಕೊರೆತ ಕಾಮಗಾರಿಗಳ ಮಾಸಿಕ ತಪಾಸಣಾ ಕಾರ್ಯ ಹಾಗೂ ಮಾಹಿತಿ ಸಂಗ್ರಹಣೆ, ಸಮುದ್ರ ಕೊರೆತ ಕಾಮಗಾರಿಗಳ ವಿನ್ಯಾಸ ರೂಪಿಸಿ ಮಾದರಿ ಆಧ್ಯಯನ ನಡೆಸಿ ಸೂಕ್ತ ಪರಿಹಾರ ಸೂಚಿಸುವ ಕಾರ್ಯಭಾರ ಹೊಂದಿದೆ.

ಮೇಲ್ಕಂಡ ವಿಭಾಗಗಳ ಮುಖಾಂತರ ಜಲಶಾಸ್ತ್ರ ಸಂಶೋಧನಾ ಮಾದರಿ ಅಧ್ಯಯನ, ಜಲಾಶಯಗಳ ಹೂಳು ಸಮೀಕ್ಷಾ ಕಾರ್ಯ (ಹೈಡ್ರೋಗ್ರಾಫಿಕ್ ಸರ್ವೆ ಹಾಗೂ ದೂರ ಸಂವೇದಿ ತಂತ್ರಜ್ಞಾನದ ಮುಖಾಂತರ), ಗೇಜಿಂಗ್ ಕಾರ್ಯ ಹಾಗೂ ಕರೆಂಟ್ ಮೀಟರ್ ರೇಟಿಂಗ್ ಕಾರ್ಯ, ಕರಾವಳಿ ತೀರ ಕೊರೆತ ಸಮಸ್ಯೆಗಳ ಅಧ್ಯಯನ, ಭೂಗುಣ ತಂತ್ರ ವಿಜ್ಞಾನ ಕ್ಷೇತ್ರದಲ್ಲಿ ಮಣ್ಣಿನ ಮಾದರಿಗಳು ಹಾಗೂ ತಳಪಾಯದ ಪರೀಕ್ಷಾ ಅಧ್ಯಯನ, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳ ಅಧ್ಯಯನ, ಶಿಲಾಗುಣ ಪರೀಕ್ಷೆಗಳು, ನೀರಿನ ಗುಣಮಟ್ಟ ಪರೀಕ್ಷೆಗಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪರೀಕ್ಷೆಗಳು ಇತ್ಯಾದಿ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತಿದೆ.

 

ಅಣೆಕಟ್ಟು ಸುರಕ್ಷತಾ ಕೋಶ-1 ಹಾಗೂ ಅಣೆಕಟ್ಟು ಸುರಕ್ಷತಾ ಕೋಶ-2:

                 ನಿರ್ದೇಶಕರ ನೇರ ನಿಯಂತ್ರಣದಲ್ಲಿ ಅಣೆಕಟ್ಟು ಸುರಕ್ಷತಾ ಕೋಶ-1 ಮತ್ತು ಅಣೆಕಟ್ಟು ಸುರಕ್ಷತಾ ಕೋಶ-2  ಕಾರ್ಯ ನಿರ್ವಹಿಸುತ್ತಿದ್ದು, ನಿರ್ದೇಶಕರು ಸಂಶೋಧನಾ ಕೇಂದ್ರ/ಭಾರತ ಸರ್ಕಾರವು ರಚಿಸಿರುವ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಕೋಶದ ಸದಸ್ಯರಾಗಿ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ರಚಿಸಿರುವ ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿ ಸಹಾಯಕವಾಗುವಂತೆ ಅಣೆಕಟ್ಟುಗಳ ಸುರಕ್ಷತೆ ಹಾಗೂ ಡ್ರಾಫ್ಟ್‌ ಡ್ಯಾಮ್ ಸೇಫ್ಟಿ ಬಿಲ್ನ ತಾಂತ್ರಿಕ ಸಿದ್ದತೆ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಜಲ ಆಯೋಗದ ಮಾರ್ಗದರ್ಶನ ಸೂತ್ರವನ್ನು ಅನುಸರಿಸಿ ಕಾರ್ಯ ನಿರ್ವಹಿಸುತ್ತಿದೆ.  

ಅಣೆಕಟ್ಟು ಸುರಕ್ಷತಾ ಕೋಶದ-1 ಕಾರ್ಯ ಚಟುವಟಿಕೆಗಳು

 1. ರಾಜ್ಯ ಮಟ್ಟದ ಭಾರಿ ಅಣೆಕಟ್ಟುಗಳ ಪರಿವೀಕ್ಷಣಾ ವರದಿಗಳಲ್ಲಿನ ಕುಂದುಕೊರತೆ/ನ್ಯೂನತೆಗಳನ್ನು ಸಂಬಂಧಪಟ್ಟ ಮುಖ್ಯ ಇಂಜಿನಿಯರುಗಳ ಗಮನಕ್ಕೆ ತರುವುದು.
 2. ರಾಜ್ಯ ಮಟ್ಟದ ಭಾರಿ ಅಣೆಕಟ್ಟುಗಳ “ ಹೆಲ್ತ್‌ ಸ್ಟೇಟಸ್ ರಿರ್ಪೋಟ್” ಗಳನ್ನು ತಯಾರಿಸುವುದು ಮತ್ತು ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ (SLDSC) ಮುಂದೆ ಮಂಡಿಸುವುದು.
 3. ರಾಷ್ಟ್ರ ಮಟ್ಟದ ಅಣೆಕಟ್ಟುಗಳ ಸುರಕ್ಷತಾ ಸಮಿತಿ ಯ (NCDS) ಸಭೆಯ ನಡವಳಿಗಳಿಗೆ ಅನುಸರಣಾ/ ಅನುಪಾಲನಾ ವರದಿಗಳನ್ನು ತಯಾರಿಸಿ ಸಲ್ಲಿಸುವುದು.
 4.  ರಾಷ್ಟ್ರ ಮಟ್ಟದ ಅಣೆಕಟ್ಟುಗಳ ಸುರಕ್ಷತಾ ಸಮಿತಿಯ ಮುಂಬರುವ ಸಭೆಗಳ ಅಜೆಂಡಾ ವರದಿ ತಯಾರಿಸಿ ಸಲ್ಲಿಸುವುದು.
 5. ರಾಜ್ಯ ಮಟ್ಟದ ಭಾರಿ ಅಣೆಕಟ್ಟುಗಳ ಉಸ್ತುವಾರಿ ಹೊಂದಿರುವ ಮುಖ್ಯ ಇಂಜಿನಿಯರುಗಳಿಗೆ ಈ ಕೆಳಕಂಡ ವಿಚಾರಗಳಲ್ಲಿ ಪತ್ರ ವ್ಯವಹಾರಗಳನ್ನು ನಡೆಸುವುದು.
 6. ಮುಂಗಾರು ಪೂರ್ವ/ಮುಂಗಾರು ಉತ್ತರ ಪರಿವೀಕ್ಷಣಾ ವರದಿಗಳ ಕುರಿತು.
 7. ರಾಷ್ಟ್ರ ಮಟ್ಟದ ಅಣೆಕಟ್ಟುಗಳ ಸುರಕ್ಷತಾ ಸಮಿತಿಯ ಸಭೆಯ ನಡವಳಿಗಳಿಗೆ ಅನುಸರಣಾ/ಅನುಪಾಲನಾ ವರದಿಗಳನ್ನು ತಯಾರಿಸಿ ಸಲ್ಲಿಸುವ ಕುರಿತು.
 8. ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ ಟರ್ಮ್ಸ್ ಆಫ್ ರೆಫರೆನ್ಸ್‌ ಅನುಸಾರವಾಗಿ ರಾಷ್ಟ್ರ ಮಟ್ಟದ ಅಣೆಕಟ್ಟುಗಳ ಸುರಕ್ಷತಾ ಸಮಿತಿ ಮತ್ತು ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಗಳಿಗೆ ಸಂಬಂಧಿಸಿದ ಇತರೆ ವಿವರಗಳು .
 9. ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿ, ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿ ಹಾಗೂ ಇತರೆ ವಿಷಯಗಳನ್ನು ಅಣೆಕಟ್ಟು ಸುರಕ್ಷತಾ ಕೋಶ-2 ರೊಡನೆ ಪರಸ್ಪರ ಸಮನ್ವಯ ನಡೆಸಿ (ಅಗತ್ಯವಿದ್ದಲ್ಲಿ) ಅಂತಿಮಗೊಳಿಸುವುದು.

ಅಣೆಕಟ್ಟು ಸುರಕ್ಷತೆಯ ಬಗ್ಗೆ ವಿವಿಧ ವಿಚಾರಗಳನ್ನು ವಿಮರ್ಶಿಸಲು ರಾಷ್ಟ್ರ ಮತ್ತು ರಾಜ್ಯ ಮಟ್ಟಗಳಲ್ಲಿ ವಾರ್ಷಿಕ ಸಭೆಗಳನ್ನು ಏರ್ಪಡಿಸಲಾಗುತ್ತಿದೆ. ಬೃಹತ್ ಅಣೆಕಟ್ಟುಗಳನ್ನು ಒಳಗೊಂಡ ರಾಜ್ಯಗಳೊಂದಿಗೆ ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯು ರಾಷ್ಟ್ರಮಟ್ಟದಲ್ಲಿ ಸಭೆಗಳನ್ನು ಏರ್ಪಡಿಸುತ್ತದೆ.

ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ ಅವರನ್ನು ಅಧ್ಯಕ್ಷರನ್ನಾಗಿ, ಮುಖ್ಯ ಇಂಜಿನಿಯರ್, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಅಣೆಕಟ್ಟುಗಳ ಉಸ್ತುವಾರಿಗೆ ಸಂಬಂಧಪಟ್ಟ   ಮುಖ್ಯ ಇಂಜಿನಿಯರ್ ಗಳನ್ನು ಸದಸ್ಯರನ್ನಾಗಿ ಮತ್ತು ನಿರ್ದೇಶಕರು, ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ಅವರನ್ನು ಸದಸ್ಯ ಕಾರ್ಯದರ್ಶಿಗಳನ್ನಾಗಿ ಉಳ್ಳ ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯೊಂದು ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು ವಾರ್ಷಿಕವಾಗಿ ಅಣೆಕಟ್ಟು ಸುರಕ್ಷತೆಯ ಬಗ್ಗೆ ಸಭೆ ನಡೆಸಲಾಗುತ್ತಿದೆ.

 

ಅಣೆಕಟ್ಟು ಸುರಕ್ಷತಾ ಕೋಶದ-2 ಕಾರ್ಯ ಚಟುವಟಿಕೆಗಳು

      ಅಣೆಕಟ್ಟು ಸುರಕ್ಷತಾ ಕೋಶ-2 ನಿರ್ದೇಶಕರ ಕಛೇರಿಗೆ ಹೊಂದಿರುತ್ತದೆ. ಸದರಿ ಕಛೇರಿಯಲ್ಲಿ ಒಬ್ಬರು ಸಂಶೋಧನಾಧಿಕಾರಿ, 3 ಸಹಾಯಕ ಸಂಶೋಧನಾಧಿಕಾರಿಗಳು ಮತ್ತು 3 ಕಿರಿಯ ಸಂಶೋಧನಾಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿ ವರ್ಗದವರು ಒಳಗೊಂಡಂತೆ ಅಣೆಕಟ್ಟು ಸುರಕ್ಷತಾ ಕೋಶ-2 ರ ಸರ್ಕಾರದಿಂದ ರಚನೆಯಾಗಿರುತ್ತದೆ. ಸದರಿ ಸರ್ಕಾರದ ಆದೇಶ ಸಂಖ್ಯೆ: ಜಸಂಇ: 60 ಸೇಸಎ 2009 ದಿನಾಂಕ: 06-07-2009 ರನ್ವಯ ರಚನೆ ಆಗಿದ್ದು ಸದರಿ ಕೋಶವು ನಿರ್ದೇಶಕರು, ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ, ಕೃಷ್ಣರಾಜಸಾಗರ ಮತ್ತು ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳ ಈ ಕೆಳಕಂಡ ಕೆಲಸ ಕಾರ್ಯಗಳನ್ನು ನಿರ್ವಹಿಸಲು ದಿನಾಂಕ  01-06-2009 ರಿಂದ ಕಾರ್ಯ ನಿರ್ವಹಿಸುತ್ತಿದೆ.

 • ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ ಸಭೆಗಳ ಅಜೆಂಡಾ ನೋಟ್ಸ್‌ ಅನ್ನು ತಯಾರಿಸುವುದು ಹಾಗೂ ಸಭೆಯು ಜರುಗಿದ ನಂತರ ಸಭೆಯ ಕರಡು ನಡವಳಿಗಳನ್ನು ತಯಾರಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸುವುದು.
 • ನಡವಳಿಗಳ ಅನುಮೋದಿತ ಪ್ರತಿಯನ್ನು ಸಂಬಂಧಪಟ್ಟವರಿಗೆ ಕಳುಹಿಸಿ ಅನುಸರಣಾ ವರದಿ ಬಗ್ಗೆ ಪತ್ರ ವ್ಯವಹಾರ ನಡೆಸುವುದು.
 • ಅಣೆಕಟ್ಟು ಸುರಕ್ಷತಾ ಕಾಯಿದೆಯು ಜಾರಿಗೆ ಬರುವುದಕ್ಕೆ ಪೂರ್ವಭಾವಿಯಾಗಿ, ಕರ್ನಾಟಕ ರಾಜ್ಯ ದಲ್ಲಿರುವ ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಪಟ್ಟ ತಾಂತ್ರಿಕ ತಯಾರಿಯನ್ನು ಅಂತಿಮಗೊಳಿಸುವ ಬಗ್ಗೆ ಚರ್ಚಿಸಲು ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ ವಿಶೇಷ ಸಭೆಯ ಮುಂದೆ ಮಂಡಿಸುವುದು ಹಾಗೂ ಸಂಬಂಧಪಟ್ಟವರೊಡನೆ ಪತ್ರ ವ್ಯವಹಾರ ನಡೆಸುವುದು.
 • ಅಣೆಕಟ್ಟು ಸುರಕ್ಷತಾ ಕಾಯಿದೆ ಜಾರಿಗೆ ಬಂದ ನಂತರ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ಹಾಗೂ ಬರಬಹುದಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ, ವಿವಿಧ ಮಟ್ಟದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲು, ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ ವಿಶೇಷ ಸಭೆಯ ಮುಂದೆ ಮಂಡಿಸುವುದು ಹಾಗೂ ಸಂಬಂಧಪಟ್ಟವರೊಡನೆ ಪತ್ರವ್ಯವಹಾರವನ್ನು ನಡೆಸುವುದು.
 • ಸರ್ಕಾರದ ಪತ್ರ ದಿನಾಂಕ 23-12-2015 ರಲ್ಲಿ ನಿರ್ದೇಶಕರು, ಕೆ.ಇ.ಆರ್.ಎಸ್., ರವರನ್ನು State Dam safety-control room (SDS-CR) ನ ನೋಡಲ್ ಆಫೀಸರ್ ಆಗಿ ನೇಮಿಸಿದ್ದು, Catastrophic phenomena like earthquakes ,severe storms , cyclones and cloud bursts etc ಗಳು  ಸಂಭವಿಸಿದಲ್ಲಿ, ಪ್ರಸ್ತುತ ರಾಜ್ಯದಲ್ಲಿರುವ ಎಲ್ಲಾ ಅಣೆಕಟ್ಟುಗಳಿಗೆ ಸಂಬಂಧಿಸಿದ ಮುಖ್ಯ ಇಂಜಿನಿಯರ್ ರವರಿಂದ ವಿವರಗಳನ್ನು ಪಡೆದು ,ಉಪ ನಿರ್ದೇಶಕರು (DSM), DSMD,CWC ನವದೆಹಲಿ, ರವರಿಗೆ ಕಳುಹಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.

 

ರಾಷ್ಟ್ರೀಯ ಮಟ್ಟದ ಸಭೆಗಳು :

ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯು ಈವರೆಗೂ 39 ಸಭೆಗಳನ್ನು ನಡೆಸಿದೆ. ಸದರಿ ಸಭೆಗಳ ಪಾಲನಾ ವರದಿಗಳನ್ನು ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಭೆಯಲ್ಲಿ ಮಂಡಿಸಿ ಅದರ ನಡವಳಿಗಳನ್ನು ಕೇಂದ್ರ ಜಲ ಆಯೋಗ ನವದೆಹಲಿಗೆ ಸಲ್ಲಿಸಲಾಗುತ್ತಿದೆ.

 • ದಿನಾಂಕ: 23-03-2015 ರಂದು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯ 34 ನೇ ಸಭೆಯು ಚೆನೈನಲ್ಲಿ ನಡೆಯಿತು. ಸದರಿ ಸಭೆಯ ನಡವಳಿಗಳಿಗೆ ಅನುಸರಣಾ ವರದಿಯನ್ನು ಈ ಕ.ಪ.ಸಂ: 3206/09 ದಿನಾಂಕ: 23/09/2015 ರಲ್ಲಿ ಕೇಂದ್ರ ಜಲ ಆಯೋಗ, ನವದೆಹಲಿಯವರಿಗೆ ಸಲ್ಲಿಸಲಾಗಿದೆ.
 • ದಿನಾಂಕ: 28-09-2015 ರಂದು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯ 35 ನೇ ಸಭೆಯು ನವದೆಹಲಿಯಲ್ಲಿ ನಡೆಯಿತು. ಸದರಿ ಸಭೆಯ ನಡವಳಿಗಳಿಗೆ ಅನುಸರಣಾ ವರದಿಯನ್ನು ಈ ಕ.ಪ.ಸಂ: 4712-15 ದಿನಾಂಕ: 05/01/2016 ರಲ್ಲಿ ಕೇಂದ್ರ ಜಲ ಆಯೋಗ, ನವದೆಹಲಿಯವರಿಗೆ ಸಲ್ಲಿಸಲಾಗಿದೆ.
 • ದಿನಾಂಕ: 11/01/2016 ರಂದು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯ 36 ನೇ ಸಭೆಯು ಬೆಂಗಳೂರಿನಲ್ಲಿ ನಡೆಯಿತು. ಸದರಿ ಸಭೆಯ ನಡವಳಿಗಳಿಗೆ ಅನುಸರಣಾ ವರದಿಯನ್ನು ಈ ಕ.ಪ.ಸಂ: 4123-26 ದಿನಾಂಕ: 10-02-2017 ರಲ್ಲಿ ಕೇಂದ್ರ ಜಲ ಆಯೋಗ, ನವದೆಹಲಿಯವರಿಗೆ ಸಲ್ಲಿಸಲಾಗಿದೆ.
 • ದಿನಾಂಕ: 17/02/2017 ರಂದು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯ 37 ನೇ ಸಭೆಯು ಹರಿದ್ವಾರದಲ್ಲಿ ನಡೆಯಿತು. ಸದರಿ ಸಭೆಯ ನಡವಳಿಗಳಿಗೆ ಅನುಸರಣಾ ವರದಿಯನ್ನು ಈ ಕ.ಪ.ಸಂ: 5243-46 ದಿನಾಂಕ: 18-01-2018 ರಲ್ಲಿ ಕೇಂದ್ರ ಜಲ ಆಯೋಗ, ನವದೆಹಲಿಯವರಿಗೆ ಸಲ್ಲಿಸಲಾಗಿದೆ.
 • ದಿನಾಂಕ: 22/01/2018 ರಂದು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯ 38 ನೇ ಸಭೆಯು ತಿರುವನಂತಪುರಂನಲ್ಲಿ ನಡೆಯಿತು. ಸದರಿ ಸಭೆಯ ನಡವಳಿಗಳಿಗೆ ಅನುಸರಣಾ ವರದಿಯನ್ನು ಈ ಕ.ಪ.ಸಂ: 4817-20 ದಿನಾಂಕ: 28-01-2019 ರಲ್ಲಿ ಕೇಂದ್ರ ಜಲ ಆಯೋಗ, ನವದೆಹಲಿಯವರಿಗೆ ಸಲ್ಲಿಸಲಾಗಿದೆ.
 • ದಿನಾಂಕ: 12/02/2019 ರಂದು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯ 39 ನೇ ಸಭೆಯು ಒಡಿಸ್ಸಾ ರಾಜ್ಯದ ಭುವನೇಶ್ವರನಲ್ಲಿ ನಡೆಯಿತು. ಸದರಿ ಸಭೆಯ ನಡವಳಿಗಳನ್ನು ಕೇಂದ್ರ ಜಲ ಆಯೋಗ, ನವದೆಹಲಿಯವರ ಪತ್ರ ಸಂಖ್ಯೆ 3/ 19/NCDS/ DSM/2019/ 39th meeting/ 282-321/ dated: 15-03.2019 ರಲ್ಲಿ ಸ್ವೀಕರಿಸಲಾಗಿದೆ. ಸದರಿ ನಡವಳಿಗಳಿಗೆ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಬೃಹತ್ ಅಣೆಕಟ್ಟುಗಳಿಗೆ ಸಂಬಂಧಿಸಿದ ಎಲ್ಲಾ ಮುಖ್ಯ ಇಂಜಿನಿಯರ್‍ ಗಳಿಗೆ ಕೋರಲಾಗಿದೆ.

 

ರಾಜ್ಯ ಮಟ್ಟದಲ್ಲಿ ಸಭೆಗಳು : 

  ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯು, ಈವರೆಗೆ ಕರ್ನಾಟಕ ರಾಜ್ಯದಲ್ಲಿರುವ 231 ಅಣೆಕಟ್ಟುಗಳನ್ನು ಬೃಹತ್ ಅಣೆಕಟ್ಟುಗಳೆಂದು ಗುರುತಿಸಿದೆ.  ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ ವ್ಯಾಪ್ತಿಗೆ ಒಳಪಡುವ ಈ 231 ಬೃಹತ್ ಅಣೆಕಟ್ಟುಗಳಲ್ಲಿ, ಜಲ ಸಂಪನ್ಮೂಲ ಇಲಾಖೆಯ ಹಾಗೂ ಇನ್ನಿತರೇ ಹಲವಾರು ಸಂಸ್ಥೆಗಳ ವ್ಯಾಪ್ತಿಗೆ ಒಳಪಡುವ ಅಣೆಕಟ್ಟುಗಳು ಸೇರಿಕೊಂಡಿರುತ್ತವೆ.  ಅವುಗಳೆಂದರೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (M/S KPCL), ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWS & DB), ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಕುದುರೆಮುಖ ಉಕ್ಕಿನ ಅದಿರು ಕಾರ್ಖಾನೆ ಸಂಸ್ಥೆ ನಿಯಮಿತ (M/S KIOCL), ಇತ್ಯಾದಿ. 

ಕರ್ನಾಟಕ ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯು ಈವರೆಗೆ 27 ಸಭೆಗಳನ್ನು ಹಾಗೂ 10 ವಿಶೇಷ ಸಭೆಗಳನ್ನು ನಡೆಸಿರುತ್ತದೆ.

           

ಕರ್ನಾಟಕ ರಾಜ್ಯದ ಬೃಹತ್ ಅಣೆಕಟ್ಟುಗಳ ಹೆಲ್ತ್‌ ಸ್ಟೇಟಸ್ ರಿಪೋರ್ಟ್ ಬಗ್ಗೆ :

ಕರ್ನಾಟಕ ರಾಜ್ಯದ ಬೃಹತ್ ಅಣೆಕಟ್ಟುಗಳಿಗೆ ಸಂಬಂಧಿಸಿದ ಹೆಲ್ತ್‌ ಸ್ಟೇಟಸ್ ರಿಪೋರ್ಟ್ ಅನ್ನು ಸರ್ಕಾರಕ್ಕೆ ಹಾಗೂ ಕೇಂದ್ರ ಜಲ ಆಯೋಗ ನವದೆಹಲಿಗೆ ಪ್ರತಿ ವರ್ಷ ಏಪ್ರಿಲ್ ತಿಂಗಳೊಳಗೆ, ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿಯ ಸಭೆಯ ನಡವಳಿಗಳ ಅನ್ವಯ  ಸಲ್ಲಿಸಬೇಕಾಗಿರುತ್ತದೆ.  ಹಾಗೂ ತಪಾಸಣಾ ವರದಿಗಳನ್ನು ಅಣೆಕಟ್ಟು ಸುರಕ್ಷತಾ ಸಂಸ್ಥೆಯ ವತಿಯಿಂದ ಕೂಲಂಕುಶವಾಗಿ ಪರಿಶೀಲಿಸಬೇಕಾಗಿರುತ್ತದೆ, ಆದರೆ ಕರ್ನಾಟಕ ರಾಜ್ಯದಲ್ಲಿ ಅಣೆಕಟ್ಟು ಸುರಕ್ಷತಾ ಸಂಸ್ಥೆಯು ಅಸ್ತಿತ್ವದಲ್ಲಿರುವುದಿಲ್ಲ, 

            ಇಸವಿ 2018ನೇ ಸಾಲಿನ (ಮುಂಗಾರೋತ್ತರ) ಮತ್ತು ಇಸವಿ 2019ನೇ ಸಾಲಿನ (ಮುಂಗಾರು ಪೂರ್ವ) ಕರ್ನಾಟಕ ರಾಜ್ಯದ ಬೃಹತ್ ಅಣೆಕಟ್ಟುಗಳಿಗೆ ಸಂಬಂಧಿಸಿದ ಹೆಲ್ತ್‌ ಸ್ಟೇಟಸ್ ರಿಪೋರ್ಟ್ಅನ್ನು ದಿನಾಂಕ: 26.09.2019ರಲ್ಲಿ ಬೆಂಗಳೂರಿನಲ್ಲಿ ನಡೆದ 10ನೇ ವಿಶೇಷ ರಾಜ್ಯ ಮಟ್ಟದ ಅಣೆಕಟ್ಟು ಸುರಕ್ಷತಾ ಸಮಿತಿಯ ಸಭೆಯಲ್ಲಿ ಮಂಡಿಸಿ, ಕೇಂದ್ರ ಜಲ ಆಯೋಗದ ನಿಗಧಿತ ನಮೂನೆಯಲ್ಲಿ ಕ್ರಮವಾಗಿ ಈ ಕ.ಪಸಂ: 3174-75 ಮತ್ತು 4238-39 ರಲ್ಲಿ ದಿನಾಂಕ: 13.11.2019 ಮತ್ತು 20.01.2020  ರಲ್ಲಿ ಕೇಂದ್ರ ಜಲ ಆಯೋಗ, ನವದೆಹಲಿ ಇವರಿಗೆ ಸಲ್ಲಿಸಲಾಗಿದೆ.

 

ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜು:

            ಈ ಸಂಶೋಧನಾ ಕೇಂದ್ರದ ಆಡಳಿತಾತ್ಮಕ ಅಧೀನದಲ್ಲಿ ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜು ಸಹಾ ಕಾರ್ಯ ನಿರ್ವಹಿಸುತ್ತಿದೆ.  ಕರ್ನಾಟಕ ರಾಜ್ಯದ ಲೋಕೋಪಯೋಗಿ ಹಾಗೂ ಜಲ ಸಂಪನ್ಮೂಲ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರುಗಳು ಹಾಗೂ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ತರಬೇತಿ ನೀಡುವ ಕಾರ್ಯವನ್ನು ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜು ನಿರ್ವಹಿಸುತ್ತಿದೆ.

 

 ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜು ಮುಖ್ಯವಾಗಿ ಈ ಕೆಳಗಿನ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

 1. ಓರಿಯೆಂಟೇಷನ್ ಕೋರ್ಸ್ ಗಳು ಹೊಸದಾಗಿ ನೇಮಕಗೊಳ್ಳುವ ಸಹಾಯಕ / ಕಿರಿಯ ಇಂಜಿನಿಯರುಗಳಿಗೆ ಸಾಮಾನ್ಯವಾಗಿ ನಾಲ್ಕು ವಾರಗಳ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರುಗಳಿಗೆ ಸಾಮಾನ್ಯವಾಗಿ ಆರು ವಾರಗಳ ಅವಧಿಯ ತರಬೇತಿ ಕಾರ್ಯಕ್ರಮಗಳು.
 2. ಸೇವೆಯಲ್ಲಿರುವ ಇಂಜಿನಿಯರುಗಳಿಗೆ ಐದು ದಿನಗಳ ಅವಧಿಯ ತಾಂತ್ರಿಕ ಮತ್ತು ಆಡಳಿತಾತ್ಮಕ ಸ್ವರೂಪದ ಪುನಃಶ್ಚೇತನ ತರಬೇತಿ ಕಾರ್ಯಕ್ರಮಗಳು. ವಿಶೇಷ ಸಂದರ್ಭಗಳಲ್ಲಿ ಈ ಕೋರ್ಸ್ ಗಳ ಅವಧಿಯನ್ನು 10 ರಿಂದ 12 ದಿನಗಳವರೆಗೆ ವಿಸ್ತರಿಸಲಾಗುವುದು.
 3. ಆಡಳಿತಾತ್ಮಕ ಸ್ವರೂಪದ ತರಬೇತಿ ಕಾರ್ಯಕ್ರಮಗಳನ್ನು ಇಂಜಿನಿಯರಿಂಗ್ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲೆಕ್ಕ ಮತ್ತು ಆಡಳಿತಾತ್ಮಕ ಸಿಬ್ಬಂದಿಗಳಿಗೆ ನಡೆಸಲಾಗುತ್ತಿದೆ.
 4. ಇಂಜಿನಿಯರಿಂಗ್ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರುಗಳು ಮತ್ತು ಆಡಳಿತಾತ್ಮಕ ಸಿಬ್ಬಂದಿಗಳಿಗೆ 12 ದಿನಗಳ ಅವಧಿಯ ಬೇಸಿಕ್ ಕಂಪ್ಯುಟರ್ ಕೋರ್ಸು.

 

2020-21ರ ಸಂಶೋಧನಾ ಕೇಂದ್ರದ ಕಾರ್ಯಕ್ರಮ ಹಾಗೂ ಸಾಧಿಸಿದ ಪ್ರಗತಿ :

      ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರವು ಜಲ ಸಂಪನ್ಮೂಲ ಇಲಾಖೆಯ ಸೇವಾ ವಲಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಶೋಧನಾ ಕೇಂದ್ರದ ಸಂಶೋಧನಾ ಘಟಕ ಹಾಗೂ ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜಿಗೆ  2020-21ನೇ ಸಾಲಿನಲ್ಲಿ ರೂ.251.00 ಲಕ್ಷ ಅನುದಾನ ನೀಡಲಾಗಿದ್ದು, ಜನವರಿ-2021ರ ಅಂತ್ಯಕ್ಕೆ ರೂ.58.58 ಲಕ್ಷ ವೆಚ್ಚವಾಗಿರುತ್ತದೆ.

              ಸಂಶೋಧನಾ ಕೇಂದ್ರದಲ್ಲಿ 2020-21 ನೇ ಸಾಲಿನಲ್ಲಿ ಇಂಜಿನಿಯರಿಂಗ್ ಕ್ಷೇತ್ರದ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಸರ್ಕಾರಿ ಸಂಸ್ಥೆ/ವಲಯಗಳಿಂದ ಉಲ್ಲೇಖಿಸಲ್ಪಟ್ಟ ಹೈಡ್ರಾಲಿಕ್ ಅಧ್ಯಯನಗಳು, ಕರೆಂಟ್ ಮೀಟರ್ ರೇಟಿಂಗ್ (04 ಸಂಖ್ಯೆ), ನಾಲಾ ಗೇಜಿಂಗ್ ಕಾರ್ಯ, ಕಟ್ಟಡ ಸಾಮಗ್ರಿ ಮೇಲಿನ ಪರೀಕ್ಷೆ, ಮಣ್ಣಿನ ಮಾದರಿಗಳ ಪರೀಕ್ಷೆಗಳು, ನೀರಿನ ಮಾದರಿಗಳ ಪರೀಕ್ಷೆಗಳು, ಸಮುದ್ರ ತಡೆಗೋಡೆಗಳ ಮಾನಿಟರಿಂಗ್ ಕಾರ್ಯ, ಸಮುದ್ರ ತಡೆಗೋಡೆಗಳ ವಿನ್ಯಾಸ ಕಾರ್ಯ ಇತ್ಯಾದಿಗಳನ್ನು ಕೈಗೊಳ್ಳಲಾಗುತ್ತಿದೆ.

ಜಲವಿಜ್ಞಾನ ಯೋಜನೆ-1 ರಲ್ಲಿ 34 ನೀರಿನ ಮಾದರಿಗಳ ಮೇಲೆ 25 ನೀರಿನ ಪ್ಯಾರಮಿಟರ್‍ಗಳ ಪರೀಕ್ಷೆಗಳನ್ನು ಹಾಗೂ ಜಲವಿಜ್ಞಾನ ಯೋಜನೆ-2 ರಲ್ಲಿ 28 ನೀರಿನ ಮಾದರಿಗಳ ಮೇಲೆ 27 ನೀರಿನ ಪ್ಯಾರಮಿಟರ್‍ಗಳ ಪರೀಕ್ಷೆಗಳನ್ನು ಕೆ.ಇ..ಆರ್.ಎಸ್. ನ ಪ್ರಯೋಗಶಾಲೆಯಲ್ಲಿ ನಡೆಸಲಾಗಿದೆ. ಸರ್ಕಾರಿ/ಸರ್ಕಾರೇತರ ಸಂಸ್ಥೆಗಳಿಂದ ಸ್ವೀಕೃತವಾದ 27 ನೀರಿನ ಮಾದರಿಗಳ ಮೇಲೆ ಪರೀಕ್ಷೆಗಳನ್ನು ನಡೆಸಲಾಗಿದೆ.

ಜನವರಿ 2021 ರ ಅಂತ್ಯಕ್ಕೆ ಯಾವುದೇ ಓರಿಯೆಂಟೇಷನ್ ತರಬೇತಿ ಕಾರ್ಯಕ್ರಮಗಳನ್ನು ಕೋವಿಡ್-19ರ ಕಾರಣದಿಂದ ನಡೆಸಲು ಸಾಧ್ಯವಾಗಿರುವುದಿಲ್ಲ ಹಾಗೂ 01 ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ತರಬೇತಿಗಳಲ್ಲಿ ಒಟ್ಟು 16 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಮುಂದುವರೆದು ಸಿಇಪಿ ತರಬೇತಿ ಕಾರ್ಯಕ್ರಮಗಳನ್ನು ಕೋವಿಡ್-19ರ ಕಾರಣದಿಂದ ನಡೆಸಲು ಸಾಧ್ಯವಾಗಿರುವುದಿಲ್ಲ

ಜನವರಿ 2021 ರ ಅಂತ್ಯಕ್ಕೆ ಸಾಂಸ್ಥಿಕ ತರಬೇತಿ ಕಾರ್ಯಕ್ರಮಕ್ಕೆ ಒಟ್ಟು ರೂ 25.00 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ರೂ 4.69 ಲಕ್ಷಗಳು ವೆಚ್ಚವಾಗಿರುತ್ತದೆ. ಸಿಇಪಿ ತರಬೇತಿ ಕಾರ್ಯಕ್ರಮದಲ್ಲಿ ರೂ.10.00 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ಯಾವುದೇ ವೆಚ್ಚವಾಗಿರುವುದಿಲ್ಲ.

 

2020-21 ರ ಪ್ರಸ್ತುತ ವರ್ಷದ ಪ್ರಮುಖ ಅಧ್ಯಯನಗಳು / ಕಾರ್ಯಗಳು :

 1. ಮಂಚನಬೆಲೆ ಜಲಾಶಯದ ವಿನ್ಯಾಸಿತ ಒಳ ಹರಿವಿನ ಪರಿಷ್ಕರಣೆ, ಜೊತೆಗೆ ಇನಂಡೇಶನ್ ನಕ್ಷೆ ತಯಾರಿಸುವ ಅಧ್ಯಯನ.
 1. ತುಂಗಭದ್ರಾ ಜಲಾಶಾಯದ ಡ್ಯಾಮ್ ಬ್ರೇಕ್ ಅನಾಲಿಸ್ಸಿ ಜೊತೆಗೆ  ಇನಂಡೇಶನ್ ನಕ್ಷೆ  ತಯಾರಿಸುವ ಅಧ್ಯಯನ.
 2. ರಿಬೌಂಡ್ ಹ್ಯಾಮರ್, ಅಲ್ಟ್ರಾ ಸೌಂಡ್ ಟೆಸ್ಟ್ ಹಾಗೂ ಕೋರ್ ಟೆಸ್ಟ್ ಮಹಾನಗರ ಪಾಲಿಕೆ,ಮೈಸೂರುರವರಿಂದ ಉಲ್ಲೇಖಿಸಲ್ಪಟ್ಟಿದೆ.
 3. ರಿರೇಟ್ ಮಾಡಲಾದ ಕರೆಂಟ್ ಮೀಟರ್ಸ್ ವಿವರ 04-ಸಂಖ್ಯೆ.
 4. ಕಲಬುರ್ಗಿ ಸಣ್ಣ ನೀರಾವರಿ ವಿಭಾಗಕ್ಕೆ ಸಂಬಂಧಿಸಿದಂತೆ 5 ಕೆರೆಗಳ ವಿನ್ಯಾಸಿತ ಒಳ ಹರಿವಿನ ಪರಿಷ್ಕರಣಾ ಅಧ್ಯಯನದ ವರದಿ ಸಲ್ಲಿಸಲಾಗಿದೆ.
 5. ಬೆಂಗಳೂರು ಸಣ್ಣ ನೀರಾವರಿ ವಿಭಾಗಕ್ಕೆ ಸಂಬಂಧಿಸಿದಂತೆ 6 ಕೆರೆಗಳ ವಿನ್ಯಾಸಿತ ಒಳ ಹರಿವಿನ ಪರಿಷ್ಕರಣಾ ಅಧ್ಯಯನÀದ ವರದಿ ಸಲ್ಲಿಸಲಾಗಿದೆ.
 6. ಅಂಜನಾಪುರ ಅಣೆಕಟ್ಟಿನ ವಿನ್ಯಾಸಿತ ಒಳ ಹರಿವಿನ ಪರಿಷ್ಕರಣೆ, ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ ತಯಾರಿಸುವ ಅಧ್ಯಯನÀÀದ ವರದಿ ಸಲ್ಲಿಸಲಾಗಿದೆ.
 7. ಮಿರ್ಲೆ ಶ್ರೇಣಿ ನಾಲೆಗಳ ನಿಗದಿತ ಇನ್ಲೆಟ್ ಗಳಿಗೆ ಬರಬಹುದಾದ 25 ವರ್ಷಗಳ ಒಳ ಹರಿವನ್ನು ಅಂದಾಜಿಸುವ ಅಧ್ಯಯನದ ವರದಿ ಸಲ್ಲಿಸಲಾಗಿದೆ.
 8. ಇಗ್ಗಲೂರು ಬ್ಯಾರೇಜ್‍ನ ವಿನ್ಯಾಸಿತ ಒಳ ಹರಿವಿನ ಪರಿಷ್ಹರಣೆ, ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ  ತಯಾರಿಸುವ ಅಧ್ಯಯನದ ವರದಿ ಸಲ್ಲಿಸಲಾಗಿದೆ.
 9. ಚಾಮರಾಜನಗರ ಸಣ್ಣ ನೀರಾವರಿ ಉಪವಿಭಾಗಕ್ಕೆ ಸಂಬಂಧಿಸಿದಂತೆ 09 ಕೆರೆಗಳ ವಿನ್ಯಾಸಿತ ಒಳ ಹರಿವಿನ ಪರಿಷ್ಕರಣಾ ಅಧ್ಯಯನದ ವರದಿ ಸಲ್ಲಿಸಲಾಗಿದೆ.
 10. ಮಾಧವಮಂತ್ರಿ ಅಣೆಕಟ್ಟಿನ ಮಾದರಿ ಅಧ್ಯಯನದ ವರದಿ ಸಲ್ಲಿಸಲಾಗಿದೆ.
 11. ಘಟಪ್ರಭಾ ಜಲಾಶಯದ ಸಿಲ್ಟ್/ಹೈಡ್ರೋಗ್ರಾಫಿಕ್ ಐ.ಬಿ.ಎಸ್ ಸರ್ವೆಕಾರ್ಯದ ವರದಿ ಸಲ್ಲಿಸಲಾಗಿದೆ.

 

ಪ್ರಗತಿಯಲ್ಲಿರುವ ಅಧ್ಯಯನಗಳು:

 1. ವಾಣೀವಿಲಾಸ ಸಾಗರ ಜಲಾಶಯದ ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ ತಯಾರಿಸುವ ಅಧ್ಯಯನ.
 2. ಧರ್ಮಾ ಜಲಾಶಯದ ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ ತಯಾರಿಸುವ ಅಧ್ಯಯನ.
 3. ತಾರಕ ಜಲಾಶಯದ ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ ತಯಾರಿಸುವ ಅಧ್ಯಯನ.
 4. ಗಾಯತ್ರಿ ಜಲಾಶಯದ ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ ತಯಾರಿಸುವ ಅಧ್ಯಯನ.
 5. ಭೀಮಾ ಏತ ನೀರಾವರಿ ಯೋಜನೆಯ ಸೊನ್ನ ಜಲಾಶಯದ ವಿನ್ಯಾಸಿತ ಒಳ ಹರಿವಿನ ಪರಿಷ್ಹರಣೆ,
 6. ಹಿಪ್ಪರಗಿ ಬ್ಯಾರೇಜ್‍ನ ವಿನ್ಯಾಸಿತ ಒಳ ಹರಿವಿನ ಪರಿಷ್ಹರಣೆ, ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ  ತಯಾರಿಸುವ ಅಧ್ಯಯನ.
 7. ಹಿರೇಹಳ್ಳ ಅಣೆಕಟ್ಟಿನ ವಿನ್ಯಾಸಿತ ಒಳ ಹರಿವಿನ ಪರಿಷ್ಹರಣೆ, ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ  ತಯಾರಿಸುವ ಅಧ್ಯಯನ.
 8. ಕನ್ವಾ ಅಣೆಕಟ್ಟಿನ ವಿನ್ಯಾಸಿತ ಒಳ ಹರಿವಿನ ಪರಿಷ್ಹರಣೆ, ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ  ತಯಾರಿಸುವ ಅಧ್ಯಯನ.
 9. ಕಚುವಿನಹಳ್ಳಿ ಕೆರೆ, ಅಳಲೂರು ಕೆರೆ ಹಾಗೂ ಇತರೆ ಕೆರೆಗಳ ವಿನ್ಯಾಸಿತ ಒಳ ಹರಿವಿನ ಪರಿಷ್ಹರಣೆ, ಜೊತೆಗೆ ಇನಂಡೇಶನ್ ನಕ್ಷೆ  ತಯಾರಿಸುವ ಅಧ್ಯಯನ.
 10. ನಾರಿಹಳ್ಳ ಮತ್ತು ಹಗರಿಬೋಮ್ಮನಹಳ್ಳಿ ಅಣೆಕಟ್ಟಿನ ವಿನ್ಯಾಸಿತ ಒಳ ಹರಿವಿನ ಪರಿಷ್ಹರಣೆ ಅಧ್ಯಯನ.
 11. ಮಾರ್ಕಂಡೇಯ ಅಣೆಕಟ್ಟಿನ ವಿನ್ಯಾಸಿತ ಒಳ ಹರಿವಿನ ಪರಿಷ್ಕರಣಾ ಅಧ್ಯಯನ.
 12. “Soil Stabilization by adding HDPE Granules” ಸದರಿ ವಿಷಯದ ಸಂಬಂದ ರಸ್ತೆ ಸಂಶೋಧನ ಶಾಖೆಯಲ್ಲಿ ಮೂಲಭೂತ ಅಧ್ಯಯನವು ಪ್ರಗತಿಯಲ್ಲಿ ಇದೆ.
 13. ಕನ್ಸ್ಟ್ರಕಟಲ್ ಲಾ ಅನುಸಾರ ಹೀಟರ್ ರೀಸ್ ಮತ್ತು ಕ್ರಿಸ್ಟೀನ ಗಾಮ ರವರು ಸಿದ್ದ ಪಡಿಸಿರುವ ಮಾಥಮೇಟಿಕಲ್ ಎಕ್ಸಪ್ರೆಶನ್ ಬಳಸಿಕೊಂಡು, ವೇವ್ ರನ್ ಅಪ್,ಇರಿಬಾರನ್ ನಂಬರ್ ಮತ್ತು ಬ್ರೇಕರ ವೇವ್ ಹೈಟ್ ಗಳನಡುವೆ ಸಂಬಂಧ ಕಲ್ಪಿಸುವ ಎಂಪೀರಿಕಲ್ ಪಾರ್ಮುಲ ಆಭಿವೃದ್ದಿ ಗಾಗಿ ವ್ಯಾಲಿಡೇಶನ್ ಮಾಡಲಾಗುತ್ತಿದೆ. ( ಕೆ ಇ ಆರ್ ಎಸ್ ವತಿಯಿಂದ ಮೊಟ್ಟ ಮೊದಲ ಪ್ರಯತ್ನ)
 14. ತುರ್ತು ತೀರ ಸಂರಕ್ಷಣಾ ಸ್ಟ್ರಕ್ಚರ್ (ರಿಪ್ ರಾಪ್) ಗಳನ್ನ ಸ್ಥಾಪಿಸುವ ಸ್ಥಳ ನಿಗದಿ ಮತ್ತು ವಿನ್ಯಾಸ
 15. ಬೀಚ್ ಪೇಸ್ ಡೀವಾಟರಿಂಗ್ ಮೂಲಕ ಡೈನ್ಡ್ ಪ್ರಷರ್ ಈಕ್ವಲೈಸಿಂಗ್ ಮಾಡ್ಯೂಲ್ ಬಳಸಿ ಸಸ್ಟೈನಬಲ್ ಬೀಚ್ಗಾಗಿ ಸಾಪ್ಟ ಸೊಲ್ಯೂಷನ್ ಗಾಗಿ ಸಂಶೋಧನೆ ಪ್ರಗತಿಯಲ್ಲಿದೆ. (ಕೆ ಇ ಆರ್ ಎಸ್ ವತಿಯಿಂದ ಮೊಟ್ಟ ಮೊದಲ ಪ್ರಯತ್ನ)
 16. ಬೆಳಗಾವಿ ಸಣ್ಣ ನೀರಾವರಿ ವಿಭಾಗಕ್ಕೆ ಸಂಬಂಧಿಸಿದಂತೆ 19 ಕೆರೆಗಳ ವಿನ್ಯಾಸಿತ ಒಳ ಹರಿವಿನ ಪರಿಷ್ಕರಣಾ ಅಧ್ಯಯನ
 17. ವಿಜಯಪುರ ಸಣ್ಣ ನೀರಾವರಿ ವಿಭಾಗಕ್ಕೆ ಸಂಬಂಧಿಸಿದಂತೆ 33 ಕೆರೆಗಳ ವಿನ್ಯಾಸಿತ ಒಳ ಹರಿವಿನ ಪರಿಷ್ಕರಣಾ ಅಧ್ಯಯನ.
 18. ಸೊನ್ನ ಬ್ಯಾರೇಜೆನ ಡ್ಯಾಮ್ ಬ್ರೇಕ್ ಅನಾಲಿಸಿಸ್ ಜೊತೆಗೆ ಇನಂಡೇಶನ್ ನಕ್ಷೆ ತಯಾರಿಸುವ ಅಧ್ಯಯನ.
 19. ಹೇಮಾವತಿ ಎಡದಂಡೆ ನಾಲೆಯಲ್ಲಿ ಗೇಜಿಂಗ್ ಕಾರ್ಯ ಕೈಗೊಳ್ಳುವ ಬಗ್ಗೆ.
 20. ಭದ್ರಾ ಜಲಾಶಯದ ಸಿಲ್ಟ್/ಹೈಡ್ರೋಗ್ರಾಫಿಕ್ ಐ.ಬಿ.ಎಸ್ ಸರ್ವೆಕಾರ್ಯ.
 21. ತುಂಗಭದ್ರಾ ಜಲಾಶಯದ ಸಿಲ್ಟ್/ಹೈಡ್ರೋಗ್ರಾಫಿಕ್ ಐ.ಬಿ.ಎಸ್ ಸರ್ವೆಕಾರ್ಯ.
 22. ವಾಣೀ ವಿಲಾಸ ಸಾಗರ ಜಲಾಶಯದ ಐಬಿಎಸ್ ಮತ್ತು ಡ್ರೋನ್ ಸರ್ವೆ ಕಾರ್ಯ.
 

ಇತ್ತೀಚಿನ ನವೀಕರಣ​ : 07-09-2021 03:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080