ಅಭಿಪ್ರಾಯ / ಸಲಹೆಗಳು

ಇಲಾಖೆಯ ಅಂಗಗಳು-ಭೂ ಸ್ವಾಧೀನ ಮತ್ತು ಅರಣ್ಯ ಕೋಶ

ಭೂಸ್ವಾಧೀನ ಮತ್ತು ಅರಣ್ಯ ಕೋಶ  

 

ಪರಿಚಯ:-

 

ದಿನಾಂಕ:25.08.2014ರ ಸರ್ಕಾರಿ ಆದೇಶದಂತೆ ಜಲ ಸಂಪನ್ಮೂಲ ಇಲಾಖೆಯಡಿಯಲ್ಲಿ ಭೂಸ್ವಾಧೀನ ಮತ್ತು ಅರಣ್ಯ ಕೋಶವನ್ನು ಪ್ರಮುಖವಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಹಾಗೂ ಅರಣ್ಯಗಳ ತೆರವು ಪ್ರಸ್ತಾವನೆಗಳ ಕಾರ್ಯಗಳಿಗೆ ಅನುವು ಮಾಡಿಕೊಡಲು ಸ್ಥಾಪಿಸಲಾಗಿದೆ.  ಈ ಕೇಂದ್ರಕ್ಕೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ.  ಪ್ರಸ್ತುತದಲ್ಲಿ ಭಾರತ ಅರಣ್ಯ ಸೇವೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಕೇಂದ್ರವನ್ನು ಮುನ್ನೆಡೆಸುತ್ತಿದ್ದಾರೆ.  ಜಲಸಂಪನ್ಮೂಲ ಇಲಾಖೆಯ ಯೋಜನೆಗಳನ್ನು ನಿಗಧಿತ ಅವಧಿಯಲ್ಲಿ ಜಾರಿಗೆ ತರುವಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ/ಪರಿಸರಕ್ಕೆ ಸಂಬಂಧಪಟ್ಟಂತೆ ಕ್ಲಿಯರೆನ್ಸ್ ಪಡೆಯುವ ಕಾರ್ಯಗಳಿಂದ ತಡವಾಗುತ್ತಿದೆ.  ಇದರಿಂದ ಯೋಜನೆಯ ವೆಚ್ಚ ಹೆಚ್ಚಾಗುವುದು.  ಅರಣ್ಯ ಹಾಗೂ ಪರಿಸರಕ್ಕೆ ಅನ್ವಯಿಸುವ ವಿಷಯಗಳನ್ನು ನಿರ್ವಹಿಸುವಾಗ ವಿಶೇಷ ಕಾರ್ಯವೈಖರಿಯನ್ನು ಅನುಸರಿಸಬೇಕಾಗಿರುತ್ತದೆ.  ಈ ಕೇಂದ್ರದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಹುದ್ದೆಯನ್ನು ನಿರ್ಮಿಸಿರುವ ಉದ್ದೇಶವೇ ಅರಣ್ಯ ಪ್ರದೇಶವನ್ನು ವರ್ಗಾಯಿಸುವ ಹಾಗೂ ಪರಿಸರ ಕ್ಲಿಯರೆನ್ಸ್ ಪಡೆಯುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಮೇಲ್ವಿಚಾರಣೆ ಮಾಡುವುದು.  ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಕರ್ತವ್ಯವು ವಿವಿಧ ಇಲಾಖೆಗಳೊಂದಿಗೆ/ನಿಗಮಗಳೊಂದಿಗೆ ಸಂವಹನ ಕೈಗೊಂಡು ಶಾಸನಬದ್ಧವಾದ ಕ್ಲಿಯರೆನ್ಸ್ಅನ್ನು ಪಡೆಯುವುದಾಗಿದೆ.

 

ಸರ್ಕಾರಿ ಆದೇಶ ಸಂಖ್ಯೆ:ಜಸಂಇ 124 ಸೇಎಸು 2014 ಬೆಂಗಳೂರು ದಿನಾಂಕ:25.08.2014.

 

ಕಾರ್ಯಚಟುವಟಿಕೆಗಳು:-

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಅರಣ್ಯ ವಿಭಾಗ, ಆಲಮಟ್ಟಿಯು ಕೃಷ್ಣಾ ಮೇಲ್ಡಂಡೆ ಯೋಜನೆಯಡಿಯ    ಜಲಾನಯನ ಪ್ರದೇಶಗಳು ಹಾಗೂ ಅಚ್ಚುಕಟ್ಟು ಪ್ರದೇಶಗಳಲ್ಲಿ ಅರಣ್ಯ ಅಭಿವೃದ್ಧಿ ಪಡಿಸಲು ನೆಡುತೋಪುಗಳನ್ನು ನಿರ್ಮಿಸುವುದು ರೈತರಿಗೆ, ಸಾರ್ವಜನಿಕರಿಗೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಸರಕಾರದ ನಿಯಮದಂತೆ ವಿತರಣೆ ಮಾಡುವುದು.

          2020-22ನೇ ಸಾಲಿನಲ್ಲಿ ಸುಮಾರು 300.00 ಹೇಕ್ಟೇರು ನೆಡುತೋಪು ನಿರ್ಮಾಣದ ಗುರಿಯಿದ್ದು, ಅದರಂತೆ 2021ನೇ ಮಳೆಗಾಲದಲ್ಲಿ ಸುಮಾರು 8.00 ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲು ಹಾಗೂ 2021-22ನೇ ಸಾಲಿನಲ್ಲಿ, 2022-23ನೇ ಸಾಲಿಗೆ ಬೇಕಾಗುವ ಸುಮಾರು 10.00 ಲಕ್ಷ ಸಸಿಗಳನ್ನು ಸಸ್ಯಪಾಲನಾಯಗಳಲ್ಲಿ ಬೆಳೆಸುವ ಗುರಿ ಇರುತ್ತದೆ.

 

 

 

ಇತ್ತೀಚಿನ ನವೀಕರಣ​ : 03-01-2022 03:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080