ಅಭಿಪ್ರಾಯ / ಸಲಹೆಗಳು

ಇಲಾಖೆಯ ಅಂಗಗಳು-ಜಸಂಅಸಂ

ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರು 

ಪರಿಚಯ

ಮೊದಲಿದ್ದ ಜಲವಿದ್ಯುತ್ ಹಾಗೂ ನೀರಾವರಿ ಯೋಜನೆಗಳ ಅನ್ವೇಷಣಾ ವಲಯ ಹಾಗೂ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಕೋಶದ ಬದಲು 16 ಜನವರಿ 1970ರ ಸರ್ಕಾರಿ ಆದೇಶದಂತೆ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯನ್ನು ಬೆಂಗಳೂರನ್ನು ಕೇಂದ್ರ ಸ್ಥಾನವನ್ನಾಗಿಸಿ ಪ್ರಾರಂಬಿಸಲಾಯಿತು. ಈ ಸಂಸ್ಥೆಯ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಇಬ್ಬರು ಮುಖ್ಯ ಅಭಿಯಂತರರು, ನಾಲ್ಕು ಅಧೀಕ್ಷಕ ಅಭಿಯಂತರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯಡಿಯ ಕಾರ್ಯಕ್ಷೇತ್ರದಲ್ಲಿ ಮೈಸೂರು ಹಾಗೂ ಯರಮರಸ್ ನಲ್ಲಿ ಇಬ್ಬರು ಅಧೀಕ್ಷಕ ಅಭಿಯಂತರರು ಕಾರ್ಯನಿರ್ವಹಣೆ ಮಾಡುತ್ತಾರೆ. ಒಟ್ಟಾರೆ 6 ಅಧೀಕ್ಷಕ ಅಭಿಯಂತರರು, 11 ಕಾರ್ಯಾಪಾಲಕ ಅಭಿಯಂತರರು ಹಾಗೂ 30 ಸಹಾಯಕ ಕಾರ್ಯಪಾಲಕ ಅಭಿಯಂತರರು ಉಳಿದ ಸಿಬ್ಬಂದಿ ಬೆಂಬಲದೊಂದಿಗೆ ಕೆಲಸ ಮಾಡುವರು.

 ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಧ್ಯೇಯೋದ್ದೇಶಗಳು

 

 • ರಾಜ್ಯದಲ್ಲಿನ ಎಲ್ಲಾ ಭಾರಿ ಹಾಗೂ ಮಧ್ಯಮ ನೀರಾವರಿ ಯೋಜನೆಗಳ ಅನ್ವೇಷಣೆ ಮತ್ತು ಯೋಜನಾ ಕಾರ್ಯ ಉಸ್ತುವಾರಿಯು ಈ ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ. ರಾಜ್ಯದ ಹಿತ ಕಾಪಾಡಲು ಅಗತ್ಯವಾದ ಕಾವೇರಿ, ಕೃಷ್ಣಾ, ಗೋದಾವರಿ    ಹಾಗೂ ಮಹದಾಯಿ ನದಿಗಳ ಅಂತರರಾಜ್ಯ ವಿವಾದದ ಕುರಿತಾದ ಎಲ್ಲಾ ಅಗತ್ಯ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವುದು.
 • ಪರಿಣಿತಿಯುಳ್ಳ ತಾಂತ್ರಿಕತೆಯನ್ನಳವಡಿಸಿ ಸಂಗ್ರಹಿಸಲಾದ ಮಳೆಯ ಮಾಪನ, ನದಿ ನೀರಿನ ಮಾಪನ, ಹಾಗೂ ಉಳಿದ ಜಲಧಾರಿತ ದತ್ತಾಂಶಗಳನ್ನು ಸಂಸ್ಕರಿಸುವುದು ಹಾಗೂ ಈ ಮಾಹಿತಿ ಸಂಗ್ರಹಿಸುವ ಸಲುವಾಗಿ ಕೇಂದ್ರಗಳನ್ನು ಸ್ಥಾಪಿಸುವುದು.
 • ಆಧುನಿಕ ತಂತ್ರಜ್ಞಾನಗಳಾದ ಜಿ.ಐ.ಎಸ್, ದೂರಸಂವೇದಿ ಹಾಗೂ ಆಟೊಡೆಸ್ಕ್ ಮುಂತಾದ ತಂತ್ರಾಂಶಾಧಾರಿತ ನಕ್ಷೆ ತಯಾರಿಸುವುದು. ಮಳೆ ಮಾಪನ ಕೇಂದ್ರಗಳನ್ನು ತೋರಿಸುವ ಜಲಾನಯನ ಪ್ರದೇಶಗಳ ನಕ್ಷೆ, ರಾಜ್ಯದ ಜಲ-ಹವಾಮಾನ ಕೇಂದ್ರಗಳ ಗಣಕೀಕೃತ ನಕ್ಷೆ, ಕಾವೇರಿ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಬರುವ ಎಲ್ಲಾ ಪೂರ್ಣಗೊಳಿಸಿದ ಚಾಲ್ತಿಯಲ್ಲಿರುವ ಹಾಗೂ ಪ್ರಸ್ತಾವಿತ ಯೋಜನೆಗಳ ಅಚ್ಚುಕಟ್ಟು ಪ್ರದೇಶದ ನಕ್ಷೆಗಳನ್ನು ತಯಾರಿಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ. ಇದಲ್ಲದೆ, ಎಲ್ಲಾ ಚಾಲ್ತಿಯಲ್ಲಿರುವ ಹಾಗೂ ಪೂರ್ಣಗೊಂಡಿರುವ ಯೋಜನೆಗಳ ಉಸ್ತುವಾರಿ ಹಾಗೂ ಮೌಲ್ಯಮಾಪನವನ್ನು ಮಾಡುವುದು ಹಾಗೂ ಅಣೆಕಟ್ಟುಗಳ ಸುರಕ್ಷತೆಯ ಬಗೆಗೂ ಕಾರ್ಯ ಕೈಗೊಳ್ಳುವುದು ಈ ಸಂಸ್ಥೆಯ ಕರ್ತವ್ಯ, ಹಾಗೂ ದೇಶದ ಪರಮೋಚ್ಛ ನ್ಯಾಯಾಲಯದ ಆದೇಶದಂತೆ ದೈನಂದಿನ/ಮಾಹೆಯಾನ ಕೂಲಿ ಮಾಡುವ ಸಿಬ್ಬಂದಿಗಳನ್ನು ಸೇವೆ ಖಾಯಂಗೊಳಿಸುವುದು. ಸಿಬ್ಬಂದಿಯ ವರ್ಗಾವಣೆ ಹಾಗೂ ನಿಯೋಜನೆ ಮುಂತಾದ ಅನೇಕ ಅನುಷ್ಠಾನಿಕ ಕಾರ್ಯಗಳನ್ನು ಈ ಸಂಸ್ಥೆ ಮಾಡಬೇಕು.

ಕಾರ್ಯಚಟುವಟಿಕೆಗಳು

 • ಭಾರಿ ಹಾಗೂ ಮಧ್ಯಮ ನೀರಾವರಿ ಯೋಜನೆಗಳ ಯೋಜನಾ ಮತ್ತು ಅನ್ವೇಷಣೆ ಕಾರ್ಯ.
 • ಇಡೀ ರಾಜ್ಯದ ಜಲಮಾಪನ ಹಾಗೂ ಜಲ-ಹವಾಮಾನಧಾರಿತ ದತ್ತಾಂಶಗಳನ್ನು ಸಂಗ್ರಹಿಸುವುದು, ನಿರ್ವಹಿಸುವುದು, ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಪ್ರಕಾಶನ ಮಾಡುವುದು.
 • ಜಲಮಾಪನ ದತ್ತಾಂಶಗಳ ವಿಶ್ಲೇಷಣೆ ಹಾಗೂ ಜಲ ಸಂಪನ್ಮೂಲ ಯೋಜನೆಗಳನ್ನು ವಿನ್ಯಾಸಗೊಳಿಸುವುದು.
 • ಎಲ್ಲಾ ಯೋಜನೆಗಳ ಉಸ್ತುವಾರಿ ಹಾಗೂ ಮೌಲ್ಯಮಾಪನ.
 • ಇಲಾಖೆಯ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದು.
 • ಜಿಯೋಮ್ಯಾಟಿಕ್ಸ್ ಕೇಂದ್ರದ ಮುಖೇನ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ ನೀರಾವರಿ ಯೋಜನೆಗಳ ತನಿಖಾನ್ವೇಷಣೆ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು.

ಕಚೇರಿಗಳ ವಿವರಣೆ ವೀಕ್ಷಿಸಲು ಕ್ಲಿಕ್ ಮಾಡಿ

ಘಟಕ ವಿವರ
ಯೋಜನಾ ಮತ್ತು ತನಿಖಾ ಘಟಕ  ಮತ್ತಷ್ಟು ಓದಲು
ಜಿಯೋಮ್ಯಾಟಿಕ್ಸ್  ಕೇಂದ್ರ ಮತ್ತಷ್ಟು ಓದಲು
ಜಲವಿಜ್ಞಾನ ಘಟಕ ಮತ್ತಷ್ಟು ಓದಲು
ಉಸ್ತುವಾರಿ ಮತ್ತು ಮೌಲ್ಯಮಾಪನ ಘಟಕ  ಮತ್ತಷ್ಟು ಓದಲು
ನೀರಾವರಿ ತನಿಖಾ ವೃತ್ತ, ಮೈಸೂರು ಮತ್ತಷ್ಟು ಓದಲು
ನೀರಾವರಿ ತನಿಖಾ ವೃತ್ತ ,ಯರಮರಸ್‌ ಮತ್ತಷ್ಟು ಓದಲು

ಇತ್ತೀಚಿನ ನವೀಕರಣ​ : 12-09-2022 03:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಲಸಂಪನ್ಮೂಲ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080